Advertisement

ಕಗ್ಗತ್ತಲ ಕೂಪದೊಳಗಿನ‌ ಯಶಸ್ವಿ ಕಾರ್ಯಾಚರಣೆ

11:43 AM Jul 09, 2018 | Harsha Rao |

ಥಾಯ್ಲೆಂಡ್‌ನ‌ ಗುಹೆಯೊಂದರಲ್ಲಿ ಕಳೆದ 15 ದಿನ ಗಳಿಂದ ಸಿಲುಕಿಕೊಂಡಿದ್ದ ಮಕ್ಕಳ ಪೈಕಿ 6 ಮಂದಿ ಕೊನೆಗೂ ಹೊರಬಂದಿದ್ದಾರೆ. ಇದಕ್ಕೆ ಸೀಲ್‌ ಪಡೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಒಳಗಿರುವ ಎಲ್ಲರನ್ನೂ ಜೀವಂತ ವಾಗಿ ಹೊರತರಲು ಸೀಲ್‌ ತಂಡ ನಡೆಸಿದ ಕಾರ್ಯಾಚರಣೆಯ ಚಿತ್ರಸಹಿತ ವಿವರ ಇಲ್ಲಿದೆ.

Advertisement

ಬಾಲಕರು ಇಲ್ಲಿದ್ದರು
ಗುಹೆಯೊಳಗಿನ ನೀರನ್ನು ದಾಟಿ ಬರಲು ಮೊದ ಲು, ಸೀಲ್‌ ಪಡೆಯು ಬಾಲಕರಿಗೆ ಸ್ಕೂಬಾ ಡೈವಿಂಗ್‌ ಕಲಿಸಿತು. ಸರಿಯಾದ ಆಹಾರವಿಲ್ಲದೇ ಮಕ್ಕಳು ನಿಶ್ಶಕ್ತರಾಗಿರುವ ಸಾಧ್ಯತೆಯಿದ್ದ ಕಾರಣ, ಅವರಿಂದ ಡೈವ್‌ ಮಾಡಲು ಸಾಧ್ಯವೇ ಎಂದು ಇದಕ್ಕೂ ಮೊದಲೇ ವೈದ್ಯರು ಪರಿಶೀಲಿಸಿದ್ದರು.

ಪಟ್ಟುಬಿಡದ ಡೈವರ್‌ಗಳು
ಗುಹೆಯ ಹೊರಗಿರುವ ಮತ್ತು ಒಳಗಿರುವ ಡೈವರ್‌ಗಳು ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿ ಬಾಲಕರ ರಕ್ಷಣೆ ಕಾರ್ಯ ಕೈಗೊಂಡಿದ್ದರು. ಸಿಲುಕಿಕೊಂಡ ತಂಡಕ್ಕೆ ಆಹಾರ, ಆಮ್ಲಜನಕ ಒದಗಿಸಲು ಅವರು ಅತ್ಯಂತ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಿದ್ದಾರೆ.

ಚೇಂಬರ್‌ ಸ್ಥಿತಿಗತಿ
ಇಲ್ಲಿ ಹೆಚ್ಚುವರಿ ಮಳೆ ಬಿದ್ದರೆ ಇಡೀ ಪ್ರದೇಶ ಸಂಪೂರ್ಣ ಮುಳುಗಡೆ ಆಗುವ ಭೀತಿಯಿತ್ತು.

ಪರಿಸ್ಥಿತಿ
ಸಿಲುಕಿಕೊಂಡ ಸಮಯದಲ್ಲಿ ಬಾಲಕರು ಫ‌ುಟ್ಬಾಲ್‌ ಕಿಟ್‌ ಧರಿಸಿದ್ದರು. ಆದರೆ, ಗುಹೆಯೊಳಗಿನ ತಾಪಮಾನ -20 ಡಿ.ಸೆ. ಇರುವ ಕಾರಣ, ಮಕ್ಕಳು ಬೆಚ್ಚಗಿರಲಿ ಎಂಬ ಕಾರಣಕ್ಕೆ ಫಾಯಿಲ್‌ ಹೊದಿಕೆಗಳನ್ನು ನೀಡಲಾಗಿತ್ತು.

Advertisement

ಅಪಾಯಕಾರಿ ಘಟ್ಟ
ಈ ಪ್ರದೇಶವು ಅತ್ಯಂತ ಸವಾಲಿನದ್ದು ಹಾಗೂ ಅಪಾಯಕಾರಿಯಾದದ್ದು. ಸುರಂಗದ ಈ ಭಾಗದಲ್ಲಿ ಅತ್ಯಂತ ಕಿರಿದಾದ ಮೇಲ್ಮುಖ ತಿರುವು ಇದ್ದು, ಅದು ಹತ್ತಿದ ಕೂಡಲೇ ಇಳಿಜಾರು ಸಿಗುತ್ತದೆ. ಈಜಿಕೊಂಡು ಬಂದ ಬಾಲಕರು ಸಂಪೂರ್ಣ ಕತ್ತಲಿನಲ್ಲಿ ಈ ಕಲ್ಲು ಬಂಡೆಯನ್ನು ಏರಿ, ಮತ್ತೆ ಕೆಳಗಿರುವ ನೀರಿಗೆ ಧುಮುಕಿ ಬಂದಿದ್ದಾರೆ.

ಇಲ್ಲಿಂದ ಹೊರ ಬಂದರು
ಅನಂತರ ಒಂದೂವರೆ ಮೈಲುಗಳ ಈಜುವಿಕೆ ಬಳಿಕ, ಬಾಲಕರು ಗುಹೆಯ ಬಾಯಿಯ ಬಳಿಯಿರುವ ಸಪ್ಲೆ„ ಬೇಸ್‌ಗೆ ತಲುಪಿದರು. ಇಲ್ಲಿ ವೈದ್ಯರ ತಂಡ ಅವರ ಆರೋಗ್ಯ ಪರಿಶೀಲನೆ ನಡೆಸಿತು. ಅವರು ಹೊರಬರುವ ವೇಳೆ ಬೆಳಕು ಹರಿದಿದ್ದರೆ (ಹಗಲು ಆಗಿದ್ದರೆ), ಅವರಿಗೆ ಮಾಸ್ಕ್ ಹಾಗೂ ಸನ್‌ಗಾÉಸ್‌ಗಳ ಅಗತ್ಯವಿರುತ್ತದೆ. ಇಷ್ಟು ದಿನ ಕತ್ತಲಲ್ಲೇ ಕಾಲ ಕಳೆದಿರುವ ಕಾರಣ ಒಮ್ಮಿಂದೊಮ್ಮೆಲೇ ಬೆಳಕು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರ ಕಣ್ಣುಗಳ ರಕ್ಷಣೆಗೆ ಇದನ್ನು ನೀಡಲಾಗುತ್ತದೆ.

ಗುಹೆ ಹೇಗಿದೆ?
ಗುಹೆಯ ಒಳಭಾಗದಲ್ಲಿ 3.2 ಕಿ.ಮೀ. ದೂರದಲ್ಲಿ ಈ ತಂಡ ಸಿಲುಕಿಕೊಂಡಿತ್ತು. ಈ ಪ್ರದೇಶವು ಡೋಯಿನಾಂಗ್‌ ನಾನ್‌ ಪರ್ವತದ ಕೆಳಭಾಗದಲ್ಲಿ 9.5 ಕಿ.ಮೀ. ದೂರದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next