Advertisement
ಮತದಾನವನ್ನು ಯಶಸ್ವಿಯಾಗಿ ಮುಗಿಸಿದ ಸಾವಿರಾರು ಮಂದಿ ಸಿಬಂದಿ ಮೇ 12ರ ರಾತ್ರಿ ಉಡುಪಿ ಮತ್ತು ಕಾಪು ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರವಾದ ಉಡುಪಿ ಸೈಂಟ್ ಸಿಸಿಲೀಸ್ ಆಂಗ್ಲಮಾಧ್ಯಮ ಶಾಲೆಗೆ ವಾಪಸಾದರು. ಇದೇ ರೀತಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಮಸ್ಟರಿಂಗ್ ಕೇಂದ್ರಕ್ಕೂ ತರಲಾಯಿತು. ಇಲ್ಲಿಂದ ಮತಯಂತ್ರಗಳನ್ನು ತಡರಾತ್ರಿ ವೇಳೆಗೆ ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವಾದ ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆಗೆ ಕೊಂಡೊಯ್ಯಲಾಯಿತು. ಕುಂದಾಪುರ, ಬೈಂದೂರು, ಕಾರ್ಕಳ ಕಡೆಗೆ ತೆರಳುವ ಸಿಬಂದಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9.30ರ ವೇಳೆಗೆ ಹೆಚ್ಚಿನ ಸಿಬಂದಿ ಮಸ್ಟರಿಂಗ್ ಕೇಂದ್ರದಿಂದ ನಿರ್ಗಮಿಸಿದರು.
ಕಳೆದೆರಡು ದಿನಗಳಿಂದ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಸಿಬಂದಿ ಮತ್ತು ಅಧಿಕಾರಿಗಳು ಮತಯಂತ್ರಗಳನ್ನು ಮಸ್ಟರಿಂಗ್ ಕೇಂದ್ರಕ್ಕೆ ವಾಪಸು ನೀಡುವಾಗ ನಿಟ್ಟುಸಿರುಬಿಡುವ ಸ್ಥಿತಿಯಲ್ಲಿದ್ದರು. ಮಂಗಳೂರು, ಬೈಂದೂರು, ಕುಂದಾಪುರ ಸೇರಿದಂತೆ ನಗರದಿಂದ ದೂರದ ಊರುಗಳಿಗೆ ಹೋಗ
ಬೇಕಾದವರು ಭಾರಿ ಅವಸರವಸರವಾಗಿ ದಾಖಲೆಗಳನ್ನು ನೀಡಿದರು. ಆದರೆ ಕೆಲವು ಮಂದಿ ಸಹಿ ಮಾಡದೆ ತೆರಳಿದ್ದರಿಂದ ಅಧಿಕಾರಿಗಳು ಮತ್ತೆ ಮತ್ತೆ ಕೂಗಿ ಕರೆಯುವಂತಾಯಿತು. ಮೊದಲಾಗಮನ
ಉಡುಪಿ ಕ್ಷೇತ್ರದ ಚಾಂತಾರು ಮತಗಟ್ಟೆಯವರು ಮೊದಲಿಗರಾಗಿ ವಾಪಸಾದರೆ ಕಾಪುವಿನ ಪೆರ್ಡೂರಿನವರು ಮೊದಲಿಗರಾಗಿ ಮಸ್ಟರಿಂಗ್ ಕೇಂದ್ರ ತಲುಪಿದರು.
Related Articles
ಜಿಲ್ಲೆಯ 5 ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾಗಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ಹೊರಭಾಗ ಅಗತ್ಯ ಬ್ಯಾರಿಕೇಡ್ ಅಳವಡಿಸುವ, ಪೆಂಡಾಲ್ ಹಾಕುವ ಕೆಲಸಗಳು ಪೂರ್ಣಗೊಂಡಿವೆ. ಮೇ 12ರಂದು ರಾತ್ರಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
Advertisement