ಕೊಲ್ಲೂರು: ಬೈಂದೂರು ವಲಯ ಮರಾಟಿ ಉದ್ಯೋಗಿಗಳ ಸಂಘದ ಆಶ್ರಯದಲ್ಲಿ ನಡೆದ ದಶಮಾನೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ವಿತರಣೆ, ನಿವೃತ್ತ ಭೂಸೇನಾನಿ ಹಾಗೂ ಉತ್ತಮ ಶಿಕ್ಷಕ ಪುರಸ್ಕೃತರಿಗೆ ಸಮ್ಮಾನ ಕಾರ್ಯಕ್ರಮ ಜಡ್ಕಲ್‌ನಲ್ಲಿ ನಡೆಯಿತು.
ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ| ಶೇಖರ್ ನಾಯ್ಕ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಶಸ್ವಿ ಸಮುದಾಯದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ. ದೇಶದ ನಿರ್ಮಾಣದೊಡನೆ ಸಮಾಜದ ಅಭಿವೃದ್ಧಿಯಾಗಬೇಕು. ಸಮಾಜ ಬಾಂಧವರು ಸುಶಿಕ್ಷಿತರಾಗಬೇಕು ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ, ಒ.ಎನ್. ಜಿ.ಸಿ.ಯ ನಿವೃತ್ತ ಡಿ.ಜಿ.ಎಂ. ನಾರಾಯಣ ನಾಯ್ಕ ಮಾತನಾಡಿ, ಸಮಾಜಮುಖೀ ಕಾರ್ಯಗಳೊಡನೆ ಸಾಮಾಜಿಕ ಕಳಕಳಿ ಇದ್ದಲ್ಲಿ ಸಾಮೂಹಿಕವಾಗಿ ಸಮಾಜದ ಅಭಿವೃದ್ಧಿª ಸಾಧ್ಯ ಎಂದರು.
ಕಾರ್ಕಳ ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ ಬಿ., ಭಾರತೀಯ ಸ್ಟೇಟ್ ಬ್ಯಾಂಕ್ ಮುಖ್ಯ ಪ್ರಬಂಧಕ ರಾಮಯ್ಯ ನಾಯ್ಕ, ಸಮಾಜದ ಮುಖಂಡ ರಂಗ ನಾಯ್ಕ, ಮೋಹಿನಿ ಬಾಯಿ, ಮುತ್ತಯ್ಯ ಮರಾಟ, ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ ಉಪಸ್ಥಿತರಿದ್ದರು,ರಾಮಕೃಷ್ಣ ಮರಾಟ ಸ್ವಾಗತಿಸಿದರು. ಮಂಜುನಾಥ ಮರಾಟ ಪ್ರಸ್ತಾವಿಸಿದರು. ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ದಶಮಾನೋತ್ಸವ ವರದಿ ವಾಚಿಸಿದರು. ಉದಯ ನಾಯ್ಕ ಹುಲ್ಕಡಿಕೆ ನಿರೂಪಿಸಿ, ಕೆ.ಎಂ. ಹೋಸೆರಿ ವಂದಿಸಿದರು.
25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸ ಲಾಯಿತು. ನಿವೃತ್ತ ಭೂಸೇನೆ ಯೋಧ ಪ್ರಭಾಕರ ನಾಯ್ಕ ಶಂಕರನಾರಾಯಣ, ಸಂಜೀವ ಮರಾಟ ಹುಲ್ಕಡಿಕೆ, ಉತ್ತಮ ಜಿಲ್ಲಾ ಶಿಕ್ಷಕಿ ಪುರಸðತ ಮೋಹಿನಿ ಬಾಯಿ, ಜೀವ ರಕ್ಷಕ ನವೀನ್ ಕೊಲ್ಲೂರು, ಸಮುದಾಯದ ಮೊದಲ ಪದವಿ ವೈದ್ಯೆ ನಿವೇದಿತಾ ನಂದಿಗದ್ದೆ ಅವರನ್ನು ಸಮ್ಮಾನಿಸಲಾಯಿತು.