Advertisement
ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜದಿಂದ ಆಯೋಜಿಸಿದ್ದ ರಾಘು ಶಿವಮೊಗ್ಗ ಅವರ ನಿರ್ದೇಶನದ “ಚೂರಿಕಟ್ಟೆ’ ಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಅತ್ಯಂತ ಪೈಪೋಟಿ ಇರುವ ಚಿತ್ರರಂಗದಲ್ಲಿ ಬದ್ಧತೆ ಇಲ್ಲದಿದ್ದರೆ ಭವಿಷ್ಯ ಇಲ್ಲ ಎಂದ ಅರ್ಥೈಸಿದರು.ಇಂದು ಪ್ರದರ್ಶಿಸಲ್ಪಡುತ್ತಿರುವ ಚೂರಿಕಟ್ಟೆ ಸಿನಿಮಾ ಒಂದು ಯಶಸ್ವಿ ಪ್ರಯೋಗ.
ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮ ಋಣಾತ್ಮಕ ಚಿಂತನೆಗೆ ಹೆಸರಾಗಿತ್ತು ಎಂದ ಅವರು, ದಾರಿಹೋಕರಿಗೆ ಚೂರಿ ಹಾಕಿ ಬೆದರಿಸುವುದು, ಕೊಲೆ ಸುಲಿಗೆ ಕೃತ್ಯಗಳೇ ಮೇಲುಗೈ ಸಾಧಿಸಿತ್ತು. ಈ ಕಾರಣಕ್ಕಾಗಿಯೇ ಇದಕ್ಕೆ “ಚೂರಿಕಟ್ಟೆ’ ಎಂಬ ಹೆಸರು ಬಂದಿತ್ತು. ಆದರೆ ಕ್ರಮೇಣ ಇಡೀ ಗ್ರಾಮದ ಚಿತ್ರಣವೇ ಬದಲಾಗಿದ್ದು ಸಂಪೂರ್ಣ ಧನಾತ್ಮಕ
ಚಿಂತನೆಗಳು ಮೈಗೂಡಿವೆ. ಈಗ ಪರಿಸ್ಥಿತಿ ಬದಲಾಗಿದೆ ಎಂದರು. ಸದಭಿರುಚಿಯ ಚಿತ್ರಗಳನ್ನು ನೋಡಿ ಬೆಂಬಲಿಸಬೇಕಾದ್ದು ಕನ್ನಡಿಗರ ಕರ್ತವ್ಯ ಎಂದ ಅವರು, ಪ್ರಸ್ತುತ ಚೂರಿಕಟ್ಟೆ
ಸಿನಿಮಾದಲ್ಲಿ ಬಿಂಬಿಸಲಾಗಿರುವ ಧನಾತ್ಮಕ ಚಿಂತನೆಗಳನ್ನು ಬೆಂಬಲಿಸುವುದರ ಮೂಲಕ ನಿರ್ಮಾಪಕರು, ನಿರ್ದೇಶಕರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಸಕಾಲಿಕ ಎಂದರು.
Related Articles
Advertisement
ಶಿವಮೊಗ್ಗ ಬೆಳ್ಳಿ ಮಂಡಲದ ಕಾರ್ಯಾಧ್ಯಕ್ಷ ಡಿ.ಎಸ್.ಅರುಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಬೆಳ್ಳಿಮಂಡಲದ ಉಪಾಧ್ಯಕ್ಷ ಡಾ| ಕೆ.ಆರ್. ಶ್ರೀಧರ್ ಇದ್ದರು. ಬೆಳ್ಳಿಮಂಡಲದ ಖಜಾಂಚಿ ಎನ್. ಆರ್. ಪ್ರಕಾಶ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಿ. ವಿಜಯಕುಮಾರ್‌ರಿಂದ ನಿರೂಪಿಸಿದರು. ಜಿಲ್ಲಾ ಸಂಚಾಲಕ ವೈದ್ಯ ವಂದಿಸಿದರು.