Advertisement

ಸವಾಲು ಎದುರಿಸಿದಾಗಲೇ ಯಶಸ್ಸು: ಡಿಸಿ

09:54 AM Sep 02, 2019 | Team Udayavani |

ಧಾರವಾಡ: ಗುರಿ ತಲುಪುವ ದಾರಿಯಲ್ಲಿ ಸವಾಲುಗಳು ಬರುವುದು ಸಹಜ. ಕಠಿಣ ಪರಿಶ್ರಮದಿಂದ ಅವುಗಳನ್ನು ಮೆಟ್ಟಿ ಮೇಲೆದ್ದಾಗ ಯಶಸ್ಸು ಹೊಂದಲು ಸಾಧ್ಯವಿದೆ ಎಂದು ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದ ಕ್ಲಾಸಿಕ್‌ ಕೆ.ಎ.ಎಸ್‌ ಮತ್ತು ಐ.ಎ.ಎಸ್‌ ಸ್ಟಡಿ ಸರ್ಕಲ್ ಹಾಗೂ ಸ್ಪರ್ಧಾ ಸ್ಫೂರ್ತಿ ಮಾಸಪತ್ರಿಕೆ ಸಹಯೋಗದಲ್ಲಿ ಸಪ್ತಾಪುರದ ಸತ್ಯಸಾಯಿ ಸಮುದಾಯ ಭವನದಲ್ಲಿ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದ ಅಭ್ಯರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅಭ್ಯರ್ಥಿಗಳು ಎಲ್ಲ ಮೂಲಗಳಿಂದಲೂ ಮಾಹಿತಿ ಸಂಗ್ರಹಿಸಿ ಜ್ಞಾನ ವೃದ್ಧಿಸಿಕೊಂಡು ಗುರಿ ತಲುಪಬೇಕು. ಈ ನಿಟ್ಟಿನಲ್ಲಿ ತಮ್ಮ ಸಂಸ್ಥೆಯ ಮೂಲಕ ಅಭ್ಯರ್ಥಿಗಳಿಗೆ ದಾರಿದೀಪವಾಗಿರುವ ಲಕ್ಷ್ಮಣ ಉಪ್ಪಾರ ಅವರ ಕಾರ್ಯ ಶ್ಲಾಘನೀಯ ಎಂದರು.

ಹು-ಧಾ ಪೊಲೀಸ್‌ ಆಯುಕ್ತ ಆರ್‌. ದಿಲೀಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ದೇಶಕ್ಕಾಗಿ ಸೇವೆ ಸಲ್ಲಿಸುವ ಕನಸುಗಳನ್ನು ಕಟ್ಟಿಕೊಂಡು ಆ ದಿಸೆಯಲ್ಲಿ ಕಾರ್ಯೋ ನ್ಮುಖರಾಗಬೇಕು. ಈ ನಿಟ್ಟಿನಲ್ಲಿ ಪಿ.ಎಸ್‌.ಐ. ಆಗಿ ಆಯ್ಕೆಯಾಗಿರುವ ಎಲ್ಲರೂ ಅಭಿನಂದನಾರ್ಹರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್‌ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಎಸ್‌. ಉಪ್ಪಾರ ಮಾತನಾಡಿ, ಯಶಸ್ಸು ಸದಾ ನಯ-ವಿನಯದಿಂದ ಕೂಡಿ ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ತರುವಂತಾಗಿರಲಿ. ಆಗ ಸಾಧಕರ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

Advertisement

ಚೆನ್ನಮ್ಮನ ಕಿತ್ತೂರ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದವರು ಸರ್ಕಾರಿ ನೌಕರಿ ಪಡೆಯಲು ಕ್ಲಾಸಿಕ್‌ ಸಂಸ್ಥೆ ಹೆಬ್ಟಾಗಿಲಾಗಿದೆ. ಪರೀಕ್ಷಾರ್ಥಿಗಳು ಸದುಪಯೋಗ ಪಡಿಸಿಕೊಂಡು ನಾಡ ಸೇವೆಗೆ ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ಸು ಪಡೆದಿರುವ ಅರವತ್ತಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ಡಾ| ಸತೀಶ ಬಿ.ಸಿ., ಪೊಲೀಸ್‌ ಅಧಿಕಾರಿಗಳಾದ ಮುರುಗೇಶ ಚೆಣ್ಣನ್ನವರ, ಮಹಾಂತೇಶ ಬಸಾಪುರೆ, ಸ್ಪರ್ಧಾ ಸ್ಫೂರ್ತಿ ಪ್ರಕಾಶಕರಾದ ರೇಖಾ ಎಲ್.ಉಪ್ಪಾರ, ಪ್ರಾಧ್ಯಾಪಕ ಸುರೇಶ ಕುಲಕರ್ಣಿ, ಡಾ| ರಾಜೇಶ ಚಿಟಗುಪ್ಪಿ, ಆನಂದ ಕುಲಕಣಿ, ವ್ಯವಸ್ಥಾಪಕಿ ಸುಜಾತಾ ಪಿ. ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ಸ್ಪರ್ಧಾ ಸ್ಫೂರ್ತಿ ಹಿರಿಯ ಸಂಪಾದಕ ಐ.ಜಿ. ಚೌಗಲಾ ಸ್ವಾಗತಿಸಿ, ನಿರೂಪಿಸಿದರು. ದೀಪಕ ಜೋಡಂಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next