Advertisement

ವಿಪಕ್ಷಗಳ ಅಭಿಪ್ರಾಯಕ್ಕೂ ಮನ್ನಣೆ ಸಿಗಲಿ: ಸ್ಪೀಕರ್‌

09:53 AM Nov 26, 2019 | Team Udayavani |

ಹೊಸದಿಲ್ಲಿ: ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ಯಶಸ್ಸು ಕಾಣಬೇಕು ಎಂದರೆ ವಿಪಕ್ಷಗಳ ಅಭಿಪ್ರಾಯಕ್ಕೂ ಮನ್ನಣೆ ನೀಡಬೇಕು ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸೋಮವಾರ ಹತ್ತನೇ ಕಾಮನ್ವೆಲ್ತ್‌ ಯುವ ಸಂಸತ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸಂಸದೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ತಳಹದಿ ಮತ್ತು ಅದಕ್ಕೆ ಪೂರಕವಾಗಿರುವ ಅಂಶಗಳ ಬಗ್ಗೆ ನಾವು ಗಮನ ಹರಿಸಬೇಕಾಗಿದೆ. ಸದ್ಯ ಇರುವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದರು ಸ್ಪೀಕರ್‌ ಕರೆ ನೀಡಿದ್ದಾರೆ.

ಈ ವ್ಯವಸ್ಥೆಯಲ್ಲಿ ಎಲ್ಲರಿಗೆ ಕೂಡ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಅವಕಾಶವೇ ಮಹತ್ವದ್ದು. ಅದೇ ಈ ವ್ಯವಸ್ಥೆಯ ಮಹತ್ವ. ವಿಪಕ್ಷಗಳು ವ್ಯಕ್ತಪಡಿಸುವ ಅಭಿಪ್ರಾ ಯಗಳಿಗೆ ಕೂಡ ಮನ್ನಣೆ ಸಿಕ್ಕಿದಾಗ ಪ್ರಜಾಪ್ರಭುತ್ವ ಪರಿಪೂರ್ಣಗೊಳ್ಳುತ್ತದೆ ಎಂದರು. ಬದಲಾಗಿರುವ ಜಗತ್ತಿನಲ್ಲಿ ಚೌಕಟ್ಟಿಗೆ ಸೀಮಿತವಾಗಿ ಯೋಚನೆ ಮಾಡಬಾರದು. ಅದರಿಂದ ಹೊರ ಬಂದು ಹೊಸತನದ ರೀತಿಯ ಯೋಚನೆಗಳ ಮೂಲಕ ಕಾರ್ಯ ಸಾಧನೆ ಮಾಡಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next