Advertisement

ತಳಮಟ್ಟದ ಕಾರ್ಯಕರ್ತರ ಶ್ರಮದಿಂದಲೇ ಗೆಲುವು

01:13 PM Jun 05, 2018 | Team Udayavani |

ರಾಯಚೂರು: ತಳಮಟ್ಟದ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ನಗರ ಬಿಜೆಪಿ ಶಾಸಕ ಡಾ| ಶಿವರಾಜ ಪಾಟೀಲ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ನಗರ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರು, ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಗರ ಕ್ಷೇತ್ರದ 21 ವಾರ್ಡ್‌ಗಳಲ್ಲಿ ಬಿಜೆಪಿ ಹೆಚ್ಚು ಮತ ಪಡೆದಿದೆ. ಬಿಜೆಪಿಗೆ ಮತ ಬರುವುದಿಲ್ಲ ಎನ್ನುವ ಕಡೆಯೂ ಪ್ರತಿಪಕ್ಷದ ಜತೆ ಸಮಬಲದ ಮತ ಪಡೆದಿದ್ದೇವೆ. ಇದಕ್ಕೆಲ್ಲ ಕಾರ್ಯಕರ್ತರ ಶ್ರಮವೇ ಕಾರಣ. ಪ್ರಚಾರದ ವೇಳೆ ತಾವು ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದಾಗ್ಯೂ ಮುಖಂಡರು ಸ್ವಇಚ್ಛೆಯಿದ ಮತಯಾಚನೆ ಮಾಡಿದ್ದು, ಗೆಲುವಿಗೆ ನೆರವಾಯಿತು ಎಂದರು.

ತಮ್ಮ ಗೆಲುವು ಕಾರ್ಯಕರ್ತರಿಗೆ ಸಲ್ಲುತ್ತದೆ. ಜೆಡಿಎಸ್‌ ತೊರೆದು ಬಿಜೆಪಿ ಸೇರಿದಾಗ ಪಕ್ಷದೊಂದಿಗೆ ಹೊಂದಾಣಿಕೆ
ಬಗ್ಗೆ ಆತಂಕವಿತ್ತು. ಆದರೆ, ಇಲ್ಲಿ ಕುಟುಂಬದ ವಾತಾವರಣವಿದೆ. ಮುಂಬರುವ ಈಶಾನ್ಯ ಪದವೀಧರ
ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಇದೇ ರೀತಿ ಒಟ್ಟಾಗಿ ಶ್ರಮಿಸಬೇಕು. ನಗರಸಭೆ ಚುನಾವಣೆಯಲ್ಲೂ ಹೆಚ್ಚು ಸ್ಥಾನ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.

ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ| ಶಿವರಾಜ ಪಾಟೀಲ ಅವರ ಗೆಲುವಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವಿದೆ. ಆದರೆ, ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಅವರು ಜೆಡಿಎಸ್‌ನಲ್ಲಿ ಉಳಿದಿದ್ದರೆ ಖಂಡಿತ ಗೆಲ್ಲುತ್ತಿರಲಿಲ್ಲ. ವೈಯಕ್ತಿಕ ವರ್ಚಸ್ಸು ಇದ್ದರೂ ಅಲ್ಲಿ ಪಕ್ಷ ಸಂಘಟನೆ ಸರಿಯಾಗಿ ಆಗಿಲ್ಲ ಎಂದರು.

ಮುಖಂಡ ತ್ರಿವಿಕ್ರಮ ಜೋಶಿ, ಬಿಜೆಪಿ ಹಿರಿಯ ಮುಖಂಡ ಅಶೋಕ ಗಸ್ತಿ, ಆರ್‌.ತಿಮ್ಮಯ್ಯ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಮಾತನಾಡಿದರು. ನಗರ ಘಟಕ ಅಧ್ಯಕ್ಷ ದೊಡ್ಡಮಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ಎನ್‌.ಶಂಕರಪ್ಪ, ನಗರಸಭೆ ಸದಸ್ಯರಾದ ಬಿ.ಗೋವಿಂದ, ನರಸಪ್ಪ ಯಕ್ಲಾಸಪುರ, ರಾಮು ಗಿಲ್ಲೇರಿ, ರಾಘವೇಂದ್ರ ಉಟ್ಕೂರು, ರಾಮಚಂದ್ರ ಕಡಗೋಲ, ಎ.ಚಂದ್ರಶೇಖರ, ವೀರಣ್ಣ ಮುದಗಲ್‌, ಮುಕ್ತಿಯಾರ್‌ ಸೇರಿ ನೂರಾರು ಕಾರ್ಯಕರ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next