Advertisement

ಸಬ್‌ ಅರ್ಬನ್‌ ಹಿಗ್ಗಿದೆ ಗಾತ‹; ಪ್ರಗತಿಗೆ ಹಿನ್ನಡೆ

10:33 AM Feb 02, 2020 | Suhan S |

ಬೆಂಗಳೂರು: ವಿಶ್ವದ ಅತಿ ಹೆಚ್ಚು ಸಂಚಾರದಟ್ಟಣೆ ಹೊಂದಿರುವ ಬೆಂಗಳೂರಿಗೆ ಪರಿಹಾರ ಕಲ್ಪಿಸಬಹುದಾದ ಉಪನಗರ ರೈಲು ಯೋಜನಾ ವೆಚ್ಚದ ಗಾತ್ರ ವಿಸ್ತರಣೆಯಾಗಿದೆ. ಆದರೆ, ಉದ್ದೇಶಿತ ಈ ಯೋಜನೆ ಪ್ರಗತಿಗೆ ಮಾತ್ರ ಹಿನ್ನಡೆ ಆಗಿದೆ!

Advertisement

148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಗಾಗಿ 2018-19ರಲ್ಲಿ 17 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಈಗ ಆ ಮೊತ್ತ 18,600 ಕೋಟಿ ರೂ. ಗೆ ಏರಿಕೆ ಆಗಿದೆ. ಯೋಜನೆಗಾಗಿ ಶೇ. 20ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಶೇ. 60ರಷ್ಟು ಆರ್ಥಿಕ ನೆರವಿನ ಭರವಸೆ ನೀಡಲಾಗಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಆಗಿಲ್ಲ. ಈ ಮೂಲಕ “ನಮ್ಮವರ’ ನಿರೀಕ್ಷೆಗಳು ಹುಸಿಯಾಗಿದ್ದು, ಎರಡು ವರ್ಷಗಳ ಹಿಂದಿನ ಸ್ಥಿತಿಯ ಮುಂದುವರಿದಿದ್ದು, ಅಂಕಿ-ಅಂಶಗಳು ಮಾತ್ರ ಬದಲಾಗಿವೆ.

ಉದ್ದೇಶಿತ ಯೋಜನೆಗೆ ಸಂಬಂಧಿಸಿದಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದ ಸ್ಪಷ್ಟ ಚಿತ್ರಣ ಅಥವಾ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಉಪನಗರ ರೈಲು ಹೋರಾಟಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. “ಎರಡು ವರ್ಷಗಳ ಹಿಂದಿನ ಸ್ಥಿತಿಯೇ ಈಗಲೂ ಮುಂದುವರಿದಿದೆ. ಚುಕುಬುಕು ರೈಲು ಯೋಜನೆಗೆ ಇನ್ನಷ್ಟು ದಿನ ಕಾಯುವಂತಾಗಿದೆ’ ಎಂದು ಸಿಟಿಜನ್‌ ಫಾರ್‌ ಬೆಂಗಳೂರು ಸದಸ್ಯ ಶ್ರೀನಿವಾಸ್‌ ಅಲವಿಲ್ಲಿ ಟ್ವೀಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಈ ಯೋಜನೆಗೆ ಕೇಂದ್ರ ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಮಿತಿ ಅನುಮತಿ ದೊರೆಯಬೇಕಿದೆ. ಹೆಚ್ಚು-ಕಡಿಮೆ ಒಂದು ವರ್ಷದಿಂದ ಕೇಂದ್ರದ ಬಳಿ ಈ ಪ್ರಸ್ತಾವನೆ ಇದೆ. ಬಜೆಟ್‌ನಲ್ಲಿ ಇದರ ಪ್ರಸ್ತಾಪ ಆಗಿಲ್ಲ. ಕೊನೆಪಕ್ಷ ಇಂತಿಷ್ಟು ದಿನಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದಾದರೂ ಭರವಸೆ ನೀಡಬಹುದಿತ್ತು. ಅಥವಾ 18 ಸಾವಿರ ಕೋಟಿ ಯೋಜನೆಗೆ ಕನಿಷ್ಠ 500 ಕೋಟಿಯಾದರೂ ತೆಗೆದಿಡಬೇಕಾಗಿತ್ತು. ಇಲ್ಲವೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದಾದರೂ ಹೇಳಬಹುದಿತ್ತು. ಇದಾವುದೂ ಆಗಲಿಲ್ಲ ಎಂದು ರೈಲ್ವೆ ಹೋರಾಟಗಾರ ಸಂಜೀವ ದ್ಯಾಮಣ್ಣವರ ಬೇಸರ ವ್ಯಕ್ತಪಡಿಸುತ್ತಾರೆ.

ಸ್ಥಳೀಯ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿ, ಅನುಷ್ಠಾನಕ್ಕಾಗಿ ವಿಶೇಷ ಅನುದಾನ ಮೀಸಲಿಡುವಂತೆ ಮಾಡಬೇಕು. ಸಚಿವ ಸಂಪುಟದ ಅನುಮೋದನೆಗಾಗಿ ಮನವೊಲಿಸುವ ಪ್ರಯತ್ನ ಆಗಬೇಕು. ಇದರಿಂದ ಯೋಜನೆ ಪ್ರಗತಿಗೆ ದೊರೆಯಲಿದೆ ಎಂದು ತಜ್ಞರು ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next