Advertisement
ದ.ಕ., ಉಡುಪಿ ಸಮಸ್ಯೆಕರಾವಳಿಯಲ್ಲಿ ಹೈನುಗಾರ ಸರಕಾರದ ಹಾಲು ಸಬ್ಸಿಡಿಗೆ ಕಾದರೆ ಆತನ ಬ್ಯಾಂಕ್‌ಗೆ ನಯಾಪೈಸೆ ಬಿದ್ದಿರುವುದಿಲ್ಲ. ಆದರೆ ಏರ್‌ಟೆಲ್ ಮೊಬೈಲ್ ಖಾತೆಗೆ ಒಮ್ಮೊಂದೊಮ್ಮೆಗೆ ಸಾವಿರಾರು ರೂ. ಜಮೆಯಾಗಿರುತ್ತದೆ. ಉದ್ಯೋಗ ಖಾತರಿಯ ಕೂಲಿ ಮೊಬೈಲ್ ಕಂಪೆನಿ ಯಲ್ಲಿನ ಖಾತೆಗೆ! ಸರಕಾರದ ಸಬ್ಸಿಡಿ, ಬೆಳೆಹಾನಿ ಪರಿಹಾರ ಹೀಗೆ ಸರಕಾರದಿಂದ ಆಧಾರ್ ಆಧಾರದಿಂದ ಪಾವತಿ ಯಾಗುವ ಹಣ ಏರ್‌ಟೆಲ್ ಮೊಬೈಲ್ ಕರೆನ್ಸಿಯಾಗಿ ಪರಿವರ್ತನೆ ಯಾಗುತ್ತಿದ್ದು ಅನಕ್ಷ ರಸ್ಥ ರಿಗೆ ಇದರ ಮಾಹಿತಿಯೇ ಇರುವುದಿಲ್ಲ. ಅವರು ಸಬ್ಸಿಡಿ ಗಾಗಿ ಅಲೆದಾಡುತ್ತಲೇ ಇರು ತ್ತಾರೆ. ಕಡತ ದಾಖಲೆಗಳ ಪ್ರಕಾರ ಸಬ್ಸಿಡಿ ವಿತರಿಸಲಾಗಿರುತ್ತದೆ. ಈ ಗೊಂದಲ ಸೃಷ್ಟಿಯಾದದ್ದು ಆಧಾರ್ ಲಿಂಕ್‌ನಿಂದ. ದೇಶಾದ್ಯಂತ ಈ ಸಮಸ್ಯೆ ಸೃಷ್ಟಿ ಯಾಗಿದ್ದು ಗ್ರಾಹಕ ಬಯಸಿದ ಖಾತೆಗೇ ಹಣ ಜಮೆಯಾಗುವಂತಹ ತಂತ್ರಜ್ಞಾನದ ತಿದ್ದುಪಡಿ ಆಗಬೇಕಿದೆ ಎಂದು ಉದಯವಾಣಿ ಪತ್ರಿಕೆ ಆ. 24ರಂದು ಮುಖಪುಟದಲ್ಲಿ ವರದಿ ಮಾಡಿತ್ತು. ಈಗ ಅಡುಗೆ ಅನಿಲ ಸಬ್ಸಿಡಿ ಕುರಿತಾಗಿ ಮಾತ್ರ ಕಠಿನ ಸೂಚನೆ ಬಂದಿದೆ. ಇತರ ಸಬ್ಸಿಡಿ ಕುರಿತೂ ದಿಟ್ಟ ಕ್ರಮ ಬರಬೇಕಿದೆ.
ಈಗ ಬ್ಯಾಂಕುಗಳಷ್ಟೇ ಹಣದ ವ್ಯವಹಾರ ನಡೆಸುತ್ತಿಲ್ಲ. ಮೊಬೈಲ್‌ನಲ್ಲಿ ದೊರೆಯುವ ನೂರಾರು ವ್ಯಾಲೆಟ್ ಆ್ಯಪ್‌ಗ್ಳಲ್ಲಿ ಹಣದ ವ್ಯವಹಾರ ನಡೆಸಲು ಅವಕಾಶವಿದೆ. ಅಂತೆಯೇ ಏರ್‌ಟೆಲ್ ಸಂಸ್ಥೆ ಕೂಡ ಅಧಿಕೃತವಾಗಿ ಹಣದ ವ್ಯವಹಾರ ನಡೆಸಲು ಅನುಮತಿ ಪಡೆದಿದ್ದು ಏರ್‌ಟೆಲ್ ಮನಿ ಎಂಬ ಹೆಸರಿನ ಮೂಲಕ ಮೊಬೈಲ್ ವ್ಯಾಲೆಟ್‌ನಲ್ಲಿ ಹಣ ವಿನಿಮಯ, ವ್ಯವಹಾರಕ್ಕೆ ಅನುಕೂಲ ಮಾಡಿದೆ. ಇಲ್ಲಾಗಿದೆ ಎಡವಟ್ಟು
ಆಧಾರ್ ಸಂಖ್ಯೆಯನ್ನು ಖಾತೆಗೆ ಜೋಡಿಸುತ್ತಾ ಕೊನೆಯದಾಗಿ ಯಾವ ಖಾತೆಗೆ ಆಧಾರ್ ಸಂಖ್ಯೆ ಜೋಡಿಸುತ್ತಾರೋ ಆ ಖಾತೆಗೆ ಹಣ ಜಮೆ ಯಾಗುವಂತಹ ತಂತ್ರಜ್ಞಾನ ವ್ಯವಸ್ಥೆ ಈಗ ಚಾಲ್ತಿಯಲ್ಲಿದೆ. ಏರ್‌ಟೆಲ್ ಸಿಮ್‌ಗೆ ಆಧಾರ್ ಲಿಂಕ್ ಮಾಡಿದರೆ ಹಣದ ವಹಿವಾಟಿನ ಮಾನ್ಯತೆಯ ಏರ್‌ಟೆಲ್ ಮನಿಗೆ ಖಾತೆಗೆ ಎಲ್ಲ ಹಣ ಜಮೆಯಾಗುತ್ತದೆ. ಏರ್‌ಟೆಲ್ ಮಾತ್ರ ಅಲ್ಲ, ಕೆಲವು ಸ್ವಯಂಸೇವಾ ಸಂಸ್ಥೆಗಳು ಖಾಸಗಿ ಬ್ಯಾಂಕುಗಳಲ್ಲಿ ಸ್ವಯಂ ಸೇವಾ ಸಂಘದ ಸದಸ್ಯರ ಖಾತೆ ತೆರೆದಿದ್ದು ಅನೇಕರ ಹಣ ಅಂತಹ ಖಾಸಗಿ ಬ್ಯಾಂಕುಗಳಿಗೂ ಹೋಗುತ್ತಿದೆ. ಆದರೆ ಮುಗ್ಧರು ಇನ್ನೂ ಕೂಡ ತಾವು ಹೆಚ್ಚಾಗಿ ಉಪಯೋಗ ಮಾಡುವ ಬ್ಯಾಂಕ್‌ನ ಖಾತೆಯನ್ನಷ್ಟೇ ಪರಿಶೀಲಿಸಿ ಸಬ್ಸಿಡಿ, ಅನುದಾನ, ಪರಿಹಾರ ಬಂದಿಲ್ಲ ಎಂದು ಕೊಸರಾಡಿಕೊಳ್ಳುತ್ತಿದ್ದಾರೆ.
Related Articles
ಇಂತಹ ಸಮಸ್ಯೆ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ಮೂಲಕ ದೂರು ನೀಡಲಾಗಿದೆ. ಏರ್‌ಟೆಲ್ ಏರಿಯಾ ಮ್ಯಾನೇಜರ್‌ಗಳ ಮೂಲಕ ಹಣವನ್ನು ಆಯಾ ಖಾತೆದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಿಸಲಾಗಿದೆ. ಸೆಪ್ಟಂಬರ್ ವರೆಗಿನ ಸಬ್ಸಿಡಿ ಹಣ ಬಂದಿದ್ದು ಇನ್ನಷ್ಟೇ ಬ್ಯಾಂಕಿಗೆ ಜಮೆ ಮಾಡಬೇಕಿದೆ. ಈ ಬಾರಿಯೂ ಸಮಸ್ಯೆಯಾದರೆ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲಾಗುವುದು.
ಡಾ| ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕ ನಿರ್ದೇಶಕರು, ಕೆಎಂಎಫ್
Advertisement