Advertisement

ಡಿಸಿಸಿ ಬ್ಯಾಂಕ್‌ನಿಂದಲೇ ಸಬ್ಸಿಡಿ ಸಾಲ ವಿತರಣೆ

01:17 PM Aug 28, 2019 | Suhan S |

ಕೋಲಾರ: ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಅನೇಕ ಯೋಜನೆಗಳ ಸೌಲಭ್ಯಗಳು, ಸಬ್ಸಿಡಿಗಳು, ರಾಷ್ಟ್ರೀಕೃತ ಬ್ಯಾಂಕ್‌ ಮೂಲಕ ಪಡೆಯುವಲ್ಲಿ ಸಾಕಷ್ಟು ಸಮಸ್ಯೆಗಳಾಗುತ್ತಿದೆ ಎಂದು ಶಾಸಕ ಹಾಗೂ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕ್‌ಗಳಿಗೆ ಎಲ್ಲಾ ರೀತಿಯ ಸೌಕರ್ಯ ನೀಡಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಕೇವಲ ಠೇವಣಿ ಪಡೆದುಕೊಳ್ಳಲು ಇಲ್ಲಿಗೆ ಬಂದಿವೆ, ಅದರಲ್ಲಿ ಸೌಕರ್ಯ ಪಡೆದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹರಾಜು ಬೆದರಿಕೆ: ಸಕಾಲದಲ್ಲಿ ಪ್ರಯೋಜನೆ ತಲುಪು ತ್ತಿಲ್ಲ, ಸರ್ಕಾರಿ ಸಾಲ ಪಡೆದುಕೊಳ್ಳಲು ಆಸ್ತಿ ಅಡ ಮಾನ ಇಡಬೇಕಾಗುತ್ತದೆ. ಸಾಲ ಕೊಟ್ಟ ಮೇಲೆ ಮೊದಲ ತಿಂಗಳಿಂದಲೇ ರಕ್ತ ಹೀರಲು ಶುರು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಕಟ್ಟದಿದ್ದರೆ ಆಸ್ತಿ ಹರಾಜು ಹಾಕುವ ಬೆದರಿಕೆ ಹಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಲ್ಲಿ ಯೋಜನೆಗಳನ್ನು ಡಿಸಿಸಿ ಬ್ಯಾಂಕ್‌ ಮೂಲಕವೇ ಫ ಲಾನುಭವಿಗೆ ಕಲ್ಪಿಸುವ ಪ್ರಸ್ತಾವನೆಗೆ ಜು.23ರಂದು ಸಮ್ಮತಿಸಿರುವ ಆರ್ಥಿಕ ಇಲಾಖೆ, ಕೋಲಾರ ಜಿಲ್ಲೆ ಯಲ್ಲಿ ಪ್ರಾಯೋಗಿಕ ಅನುಷ್ಠಾನಕ್ಕೆ ನಿರ್ದೇಶನ ನೀಡಿದೆ ಎಂದು ಹೇಳಿದರು.

ದಲ್ಲಾಳಿಗಳ ಓಡಾಟ ನಿಲ್ಲಿಸಿ: ಸಿಬ್ಬಂದಿ ಮತ್ತು ಫಲಾನು ಭವಿಗಳು ಬಿಟ್ಟರೆ ಮೂರನೇ ವ್ಯಕ್ತಿಗಳು ಕಚೇರಿಯಲ್ಲಿ ಓಡಾಡಲು ಬಿಡಬೇಡಿ ಎಂದು ನಿಗಮಗಳ ಅಧಿಕಾರಿಗಳಿಗೆ ರಮೇಶ್‌ಕುಮಾರ್‌ ಆದೇಶಿಸಿದರು.

Advertisement

ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂ ಖ್ಯಾತರ ನಿಗಮಗಳಲ್ಲಿ ದೊರೆಯುವ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಿ, ಸದ್ಬಳಕೆ ಮಾಡಿ ಕೊಳ್ಳಬೇಕಾದ ಜವಾಬ್ದಾರಿ ನಿಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.

ಪೈಸೆಯೂ ಪೋಲಾದಂತೆ ನೋಡಿಕೊಳ್ಳಿ: ಸರ್ಕಾರ ದಿಂದ ಎಲ್ಲಾ ವರ್ಗಗಳ ಜನರಿಗೆ ಬರುವ ಅನುದಾನ ದಲ್ಲಿ ಒಂದು ಪೈಸೆಯೂ ಪೋಲಾಗದಂತೆ ಕಾರ್ಯ ವನ್ನು ನಿರ್ವಹಿಸಿ. ಬೆವರು ಸುರಿಸಿ ಸಾರ್ವಜನಿಕರು ತೆರಿಗೆ ಕಟ್ಟಿರುವ ಹಣ ಅದು. ಸುಮ್ಮನೇ ಫಲಾನು ಭವಿಗಳಿಗೆ ಸಿಗದೆ ಮಧ್ಯವರ್ತಿಗಳಿಗೆ ದೊರಕುವ ಹಾಗೆ ಮಾಡಿದರೆ ಅವರ ಪಾಯಿಖಾನೆ ತಿನ್ನುವಾಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕಾಲದಲ್ಲಿ ಸಿಗುತ್ತಿಲ್ಲ: ಸರ್ಕಾರ ಹಲವು ಉಪ ಯೋಗಗಳಿಗಾಗಿ ಸಬ್ಸಿಡಿ ರೂಪದಲ್ಲಿ ಸಾಲವನ್ನು ಪಡೆಯಲು ಯೋಜನೆಗಳನ್ನು ತರುತ್ತಿದ್ದು, ಫಲಾನು ಭವಿಗಳು ಅದನ್ನು ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಕಾಲದಲ್ಲಿ ಪೂರ್ಣ ಬೆಂಬಲ ಸಿಗುತ್ತಿಲ್ಲ. ಆದರಿಂದ ಈ ರೀತಿಯ ಸ್ಕೀಂಗಳನ್ನು ಪಡೆಯಲು ಡಿಸಿಸಿ ಬ್ಯಾಂಕ್‌ ಮೂಲಕ ಸುಲಭವಾಗುವ ಹಾಗೆ ಎಲ್ಲಾ ರೀತಿ ಕ್ರಮ ಮಾಡಲಾಗುತ್ತಿದೆ ಎಂದರು.

ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಇನ್ನೂ ಹೆಚ್ಚಿನ ರೀತಿಯಲ್ಲಿ ಜನಗಳಿಗೆ ಉಪಯೋಗವಾಗುವಾಗೆ ಕೆಲಸಗಳನ್ನು ನಿರ್ವಹಿಸಿ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ನಜೀರ್‌ಅಹಮದ್‌, ಜಿಪಂ ಉಪಾಧ್ಯಕ್ಷೆ ಯಶೋದಮ್ಮ, ಡೀಸಿ ಜೆ. ಮಂಜುನಾಥ್‌, ಉಪವಿಭಾಧಿಕಾರಿ ಸೋಮಶೇಖರ್‌, ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಗೋವಿಂದ ಗೌಡ, ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next