ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳನ್ನು ವಿದ್ಯುತ್ ಜಾಲಕ್ಕೆ ವ್ಯವಸ್ಥಿತವಾಗಿ ಸೇರ್ಪ ಡೆಗೊಳಿಸುವುದರ ಜೊತೆಗೆ ಸೌರ ವಿದ್ಯುತ್‌ನ್ನು ಸಮರ್ಪ ಕವಾಗಿ ಬಳಸಲು ಮುಂದಾಗಿರುವ ಸರ್ಕಾರ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಸಹಾಯಧನ ವನ್ನು ಶೇ.50ಕ್ಕೆ ಏರಿಸಿ ಮಹತ್ವದ ಆದೇಶ ಹೊರಡಿಸಿದೆ.
ಹೌದು, ಸೌರ ಪಂಪ್‌ಸೆಟ್‌ಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಶೇ.30 ರಷ್ಟು ಸಹಾಯಧನ ಹಾಗೂ ರಾಜ್ಯ ಸರ್ಕಾರ ಶೇ.30 ರಷ್ಟು ಸಹಾಯಧನ ಜೊತೆಗೆ ರೈತರು ಶೇ.40 ರಷ್ಟು ವಂತಿಗೆ ನೀಡಿ ಸೌರ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ, ಈಗ ರಾಜ್ಯ ಸರ್ಕಾರ ಸಹಾಯಧನವನ್ನು ಶೇ.30ರ ಬದಲಾಗಿ 50ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ವಕಾಂಕ್ಷೆಯನ್ನು ಹೊತ್ತು ರಾಜ್ಯ ಸರ್ಕಾರ ಇತ್ತೀಚೆಗೆ ಸೌರ ವಿದ್ಯುತ್ ಉತ್ಪಾದನೆಗೆ ಸಾಕಷ್ಟು ಪ್ರೋತ್ಸಾಹ, ಬೆಂಬಲ ನೀಡುತ್ತಿದ್ದು ಈ ಹಿನ್ನಲೆಯಲ್ಲಿ ರೈತರಿಗೆ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲು ಮುಂದಾಗಿರುವ ಸರ್ಕಾರ ರೈತರಿಗೆ ನೀಡುತ್ತಿರುವ ಸಹಾಯಧನವನ್ನು ಶೇ.30 ರಿಂದ 50ಕ್ಕೆ ಹೆಚ್ಚಿಸಿದೆ.
ರೈತರು ಸೋಲಾರ್ ಪಂಪ್‌ಸೆಟ್ ನಂತರ ಅತಂಹ ಪಂಪ್‌ಸೆಟ್‌ಗಳನ್ನು ಗ್ರಿಡ್ ಪವರ್ ಜಾಲದ ಸಂಪರ್ಕದಿಂದ ಕಡಿತಗೊಳಿಸಲು ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಸೂಚಿಸಿದೆ. ಸೋಲಾರ್ (ಸೌರ) ಪಂಪ್‌ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರುತು ಮಾಡಿ 10 ಎಚ್‌ಪಿ ಸಾಮರ್ಥ್ಯಕ್ಕೆ ಮಿತಿಗೊಳಿಸುವುದು, ಒಂದು ವೇಳೆ ಎಂಎನ್‌ಆರ್‌ಇ ಷರತ್ತುಗಳ ಪ್ರಕಾರ 7.5 ಎಚ್‌ಪಿ ಸಾಮರ್ಥ್ಯಕ್ಕೆ ಅನುಗುಣವಾಗಿ ಅನುಗುಣ ವಾಗಿ ಸಬ್ಸಿಡಿ ಹಾಗೂ ಅನುದಾನವು ಕೂಡ ಸೀಮಿತ ವಾಗಿ ರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾದ್ಯಂತ 1,776 ರೈತರು ಐಪಿ ಸೆಟ್‌ಗೆ ನೋಂದಣಿ: ಜಿಲ್ಲೆಯ ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ ಒಟ್ಟು 1165 ಮಂದಿ ರೈತರು ಹಾಗೂ ಚಿಂತಾಮಣಿ ಉಪ ವಿಭಾಗದಲ್ಲಿ 611 ರೈತರು ಸೇರಿ ಒಟ್ಟು 1,776 ಮಂದಿ ರೈತರು ಹೊಸದಾಗಿ ಐಪಿ ಸೆಟ್‌ಗಳ ನೋಂದಣಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಬೆಸ್ಕಾಂ ಅಧಿಕಾರಿಗಳು ಮಂಗಳವಾರ ಉದಯವಾಣಿಗೆ ತಿಳಿಸಿದರು. ರೈತರೇ ಮೂಲ ಸೌಕರ್ಯ ಒದಗಿಸಿಕೊಳ್ಳಬೇಕು ರೈತರ ಪಂಪ್ ಸೆಟ್‌ಗಳಿಗೆ ಸೌರ ವಿದ್ಯುತ್ ಅಳವಡಿಕೆಗೆ ಹೆಚ್ಚು ಉತ್ತೇಜ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಮತ್ತೂಂದು ಕಡೆ ಈಗಾಗಲೇ ನೋಂದಣಿಗೊಂಡು ಮೂಲ ಸೌಕರ್ಯ ರಚನೆಗೆ ಎದುರು ನೋಡುತ್ತಿರುವ ಅಥವಾ ಹೊಸದಾಗಿ ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳು ವಿದ್ಯುತ್ ಜಾಲದಿಂದ 500 ಮೀಟರ್ ದೂರ ಇದ್ದಲ್ಲಿ ಸೌರ (ಸೋಲಾರ್) ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದೆ.
ಅಲ್ಲದೇ ಕಳೆದ ಸೆಪ್ಪಂಬರ್ 22 ನಂತರ ನೋಂದಾಯಿಸಿಕೊಳ್ಳುವ ಐಪಿ ಸೆಟ್‌ಗಳಿಗೆ ಮೂಲ ಸೌಕರ್ಯಗಳನ್ನು ರೈತರೇ ಕಾರ್ಯನಿರ್ವಹಣೆಯಡಿ ರಚಿಸಿಕೊಳ್ಳಬೇಕೆಂದು ಇಂಧನ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದ್ ಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
-ಕಾಗತಿ ನಾಗರಾಜಪ್ಪ