Advertisement

ಮೂತ್ರಪಿಂಡ ಕಸಿಯ ಅನಂತರದ ಜೀವನ

03:50 AM Feb 26, 2017 | |

ಹಿಂದಿನ ವಾರದಿಂದ  
ಕಸಿ-ಪೂರ್ವ ವಿಶ್ಲೇಷಣೆ  
ಕಸಿಯ ಪ್ರಕ್ರಿಯೆಯ ಫ‌ಲಿತಾಂಶದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು ಎನ್ನುವ ಕಾರಣಕ್ಕಾಗಿ ಮತ್ತು ಅದನ್ನು ಹೋಗಲಾಡಿಸುವುದಕ್ಕಾಗಿ, ಮೂತ್ರಪಿಂಡ ಕಸಿಗೆ ಒಳಗಾಗುವ ರೋಗಿಗಳು ಅನೇಕ ವಿಧದ ವಿಶ್ಲೇಷಣೆಗಳಿಗೆ ಒಳಗಾಗಬೇಕಾಗುವುದು. ಹೆಚ್ಚಾಗಿ, ಎಲ್ಲ  ಕಸಿ ಕೇಂದ್ರಗಳಲ್ಲಿಯೂ ರೋಗಿಯ ಪರಿಸ್ಥಿತಿಯ ಬಗ್ಗೆ ನಿಯಮಿತವಾಗಿ ಸ್ಪಂದಿಸಿ ಚರ್ಚೆ ನಡೆಸಲು ಮತ್ತು ವೈದ್ಯಕೀಯವಾಗಿ ಸೂಕ್ತ ವ್ಯಕ್ತಿಗಳನ್ನು ಮಾತ್ರವೇ ಆರಿಸಿ ವೈಟಿಂಗ್‌ ಲಿಸ್ಟ್‌ ನಲ್ಲಿ ಇರಿಸಲು ಒಂದು ಸಮಿತಿ ಇರುತ್ತದೆ. 

Advertisement

ಸಮಗ್ರ ವೈದ್ಯಕೀಯ ವಿಶ್ಲೇಷಣೆ ಅಷ್ಟೇ ಅಲ್ಲದೆ, ವ್ಯಕ್ತಿಯ ಕಸಿಯ ಫ‌ಲಿತಾಂಶದ ಮೇಲೆ ಪರಿಣಾಮ ಉಂಟುಮಾಡಬಹುದು ಎಂಬ ಕಾರಣಕ್ಕಾಗಿ, ರೋಗಿಯ ಆರ್ಥಿಕ ಪರಿಸ್ಥಿತಿ ಮತ್ತು ಪ್ರಯಾಣದ ಸ್ಥಿತಿಗತಿ ಅಥವಾ ಅನುಸರಣೆಯಲ್ಲಿ ಆಗಬಹುದಾದ ವ್ಯತ್ಯಯಗಳ ವಿಧಗಳೂ ಸೇರಿದಂತೆ ಸಮಿತಿಯು ವ್ಯಕ್ತಿಯ ಸಂಪೂರ್ಣ ಸಾಮಾಜಿಕ ಹಿನ್ನೆಲೆಯನ್ನೂ ವಿಶ್ಲೇಷಿಸುತ್ತದೆ. 

ಆವಶ್ಯಕ ಎನಿಸಿದಲ್ಲಿ,  ಸೂಚನೆಗಳು ಇದ್ದಲ್ಲಿ ಮೂತ್ರ ವಿಶ್ಲೇಷಣೆ, ಯೂರಿನ್‌ ಕಲ್ಚರ್‌ ಮತ್ತು ಸೈಟಾಸ್ಪಿನ್‌ಗಳನ್ನು ಆದೇಶಿಸಲಾಗುವುದು. ಸಂಪೂರ್ಣ ಕಾರ್ಡಿಯಾಕ್‌ ವರ್ಕ್‌ ಅಪ್‌ ಮತ್ತು ಇಮ್ಯುನೋಲಾಜಿಕ್‌ ವಿಶ್ಲೇಷಣೆ (ABO) ರಕ್ತದ ಗುಂಪಿನ ವರ್ಗೀಕರಣ, ಹ್ಯೂಮನ್‌ ಲ್ಯುಕೋಸೈಟ್‌ ಆಂಟಿಜೆನ್‌ (HLA) ಟೈಪಿಂಗ್‌, HLA ಫಿನೋಟೈಪ್‌ ಮತ್ತು ಕ್ರಾಸ್‌ ಟೈಪಿಂಗ್‌ಗಾಗಿ ಸೀರಂ ಸ್ಕ್ರೀನಿಂಗ್‌)ನ್ನೂ  ಮಾಡಬೇಕಾಗುತ್ತದೆ. 

ನಿರ್ವಹಣೆ
ಮೂತ್ರಪಿಂಡದ ಕಸಿ ಪ್ರಕ್ರಿಯೆಯು ಶಸ್ತ್ರಚಿಕಿತ್ಸೆ ಅಷ್ಟೆ ಅಲ್ಲದೆ ಮುಂದೆ ಹೇಳುವ ನಿರ್ವಹಣ ಕ್ರಮಗಳನ್ನೂ  ಒಳಗೊಂಡಿರುತ್ತದೆ. 

ಕಸಿ ಮಾಡಬೇಕಿರುವ ಅಂಗದ ಲಭ್ಯತೆ.
ದಾನ ಪಡೆಯುವವರಿಗಾಗಿ ಇಮ್ಯುನೋಸಪ್ರಸಿವ್‌ ಚಿಕಿತ್ಸೆಯನ್ನು ಒದಗಿಸುವುದು. 

Advertisement

ಮೂತ್ರಪಿಂಡದ ಅಲ್ಲೋಗ್ರಾಫ್ಟ್ ಕಾರ್ಯನ್ಯೂನತೆಯ ಸೂಚನೆಗಳನ್ನು ಮತ್ತು ಇನ್ನಿತರ ತೊಂದರೆಗಳನ್ನು ಪತ್ತೆಹಚ್ಚಲು ಸಣ್ಣ ಅವಧಿಯ ಹಾಗೂ ದೀರ್ಘಾವಧಿಯ ಅನುಸರಣೆಗಳು.

ಕಸಿ ಮಾಡಬೇಕಿರುವ ಅಂಗದ ಲಭ್ಯತೆ 
ಸಂಭಾವ್ಯ ದಾನಿಗಳನ್ನು ಗುರುತಿಸುವುದು.

ದಾನಿಯ ತಕ್ಕುದಾಗಿರುವಿಕೆಯನ್ನು ವಿಶ್ಲೇಷಿಸುವುದು.

ಕಸಿಯ ಅನಂತರದ ಇಮ್ಯುನೋಸಪ್ರಸಿವ್‌ ಚಿಕಿತ್ಸೆ 

ಧಿಸೆಲ್‌ ಅಲ್ಲೋ ಇಮ್ಯೂನ್‌ ನಿರಾಕರಣೆ ಪ್ರತಿಕ್ರಿಯೆ ತೋರಿಸುವುದನ್ನು ತಡೆಗಟ್ಟಲು ಮೂತ್ರಪಿಂಡ ಕಸಿ ಮಾಡಿಸಿಕೊಳ್ಳುವ ಎಲ್ಲ ರೋಗಿಗಳು ಜೀವನ ಪರ್ಯಂತ ಇಮ್ಯುನೋಸಪ್ರಸಿವ್‌ ಚಿಕಿತ್ಸೆಯನ್ನು ಪಡೆಯಬೇಕಾಗುವುದು.  ಮುಂದೆ ಹೇಳುವ ಅಂಶಗಳನ್ನು ಸಾಧಿಸುವುದು ಈ ಚಿಕಿತ್ಸೆಯನ್ನು ಪಡೆಯುವ ಉದ್ದೇಶವಾಗಿರುತ್ತದೆ.    

ತೀವ್ರ ಮತ್ತು ದೀರ್ಘ‌ಕಾಲಿಕವಾಗಿ ನಿರಾಕರಿಸುವುದನ್ನು ತಡೆಯುವುದು

ಔಷಧ ನಂಜಾಗುವುದನ್ನು, ಸೋಂಕಿನ ದರವನ್ನು ಮತ್ತು ಅಪಾಯಕಾರಿ ಆಗುವುದನ್ನು ತಗ್ಗಿಸುವುದು. 

ರೋಗಿ ಮತ್ತು ಕಸಿಯ ಜೀವಿತದ ಸಾಧ್ಯತೆಯ ದರವನ್ನು ಹೆಚ್ಚಿಸುವುದು.  

ವೈದ್ಯಕೀಯ ಅನುಸರಣೆಯಲ್ಲಿ ಎದುರಾಗುವ ತೊಡಕಿನ ಸಂದರ್ಭಗಳು 

ಹೊಸ ಮೂತ್ರಪಿಂಡವನ್ನು ಶರೀರವು ತಿರಸ್ಕರಿಸುವುದು.

ಕ್ಯಾಲ್ಸಿನ್ಯೂರಿನ್‌ ಇನಿಬಿಟರ್‌ಗಳ ನೆಫೊಟಾಕ್ಸಿಸಿಟಿ (ಅಂದರೆ ಸುಕ್ಲೋನ್ಪೋರಿನ್‌, ಟ್ಯಾಕ್ರೋಲಿಮಸ್‌).

ಮೂತ್ರಪಿಂಡದ ಮೂಲ ಕಾಯಿಲೆ ಮರುಕಳಿಸುವುದು.

ಮೂತ್ರಪಿಂಡದ ಕಸಿ ಮಾಡಿಸಿಕೊಂಡಿರುವವರು ಅಂದರೆ ವಿಶೇಷ ಅನುಭವ ಇರುವಂತಹ ರೋಗಿಗಳು ಅನೇಕ ರೋಗಿಗಳು ತಮ್ಮ ಕಾಯಿಲೆಗಾಗಿ ಅನೇಕ ವರ್ಷಗಳಿಂದ ಮತ್ತು ಹಲವಾರು ವೈದ್ಯರಿಂದ ಅನೇಕ ಚಿಕಿತ್ಸೆಗಳನ್ನು ಪಡೆದಿರುತ್ತಾರೆ, ಡಯಾಲಿಸಿಸ್‌ ಚಿಕಿತ್ಸೆಗಳನ್ನೂ  ಪಡೆದಿರುತ್ತಾರೆ. ತಮ್ಮ ಜೀವನದಲ್ಲಿ , ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನೂ ತಂದಿರುತ್ತಾರೆ. ತರಾವರಿ ಔಷಧ ಮಾತ್ರೆಗಳನ್ನು ನುಂಗಿ (ಕೆಲವು ಪ್ರಕರಣಗಳಲ್ಲಿ) ತಮ್ಮ ಆರೈಕೆಯ ಬಗ್ಗೆ ತಾವೇ ಕಾಳಜಿ ವಹಿಸುವಷ್ಟರ ಮಟ್ಟಿಗೆ ಅನುಭವವನ್ನು ಗಳಿಸಿರುತ್ತಾರೆ. 

 ಅಂತಹ ರೋಗಿಗಳು ತಮ್ಮ ಕಾಯಿಲೆಗೆ ಸಂಬಂಧಿಸಿದ ಯಾವುದೇ ಅರಿವು ಅಥವಾ ಅಂಶಗಳಿಗೆ ಯಾವತ್ತೂ ಬೆಲೆ ಕೊಡುತ್ತಾರೆ. ಅವರಿಗಾಗಿ ಕೆಲವು ತಿಳಿವಳಿಕೆಯ ಅಂಶಗಳನ್ನು ಒದಗಿಸುವುದು ಮುಖ್ಯವಾಗುತ್ತದೆ. ಇಂತಹ ರೋಗಿಗಳ ಸಮಸ್ಯೆಗಳು ಕೆಲವೊಮ್ಮೆ ಸಂಕೀರ್ಣವಾಗಿರುತ್ತವೆ. ಹಾಗಾಗಿ ಇವರಿಗೆ ಈ ವಿಚಾರಗಳನ್ನು ತಿಳಿಸುವುದು ಬಹಳ ಮುಖ್ಯವಾಗುತ್ತದೆ:

ಕೇವಲ ಅಮೆರಿಕದಲ್ಲಿ ಮಾತ್ರ ಇದುವರೆಗೆ 2,50,000ಕ್ಕಿಂತಲೂ ಹೆಚ್ಚು ಮೂತ್ರಪಿಂಡ ಕಸಿಗಳನ್ನು ನಡೆಸಲಾಗಿದೆ. 
ಜೀವಂತ ದಾನಿಗಳಿಂದ ಪಡೆದು 2,00,76,037 ಮೂತ್ರಪಿಂಡ ಕಸಿಗಳನ್ನು ನಡೆಸಲಾಗಿದೆ ಮತ್ತು ಮರಣಿಸಿದ ವ್ಯಕ್ತಿಗಳಿಂದ ಪಡೆದು10,082  ಕಸಿಗಳನ್ನು ನಡೆಸಲಾಗಿದೆ. 

ಇಂದು ಅಮೆರಿಕದಲ್ಲಿ ಜನರು ಮೂತ್ರಪಿಂಡ ಕಸಿ ಮಾಡಿಸಿಕೊಂಡು ಸಕ್ರಿಯ ಮೂತ್ರಪಿಂಡದೊಂದಿಗೆ 10,000 ಜನರು ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ಇರುವ ಬಹುದೊಡ್ಡ ತೊಡಕು ಅಂದರೆ ದಾನಿ ಅಂಗದ ಕೊರತೆ. ಅಂಗದ ಕೊರತೆಯ ಕಾರಣದಿಂದಾಗಿ ಅಂತಿಮ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮರಣಿಸಿದ ವ್ಯಕ್ತಿಯಿಂದ ಪಡೆಯುವ ಮೂತ್ರಪಿಂಡದ ಸರಾಸರಿ ಕಾಯುವಿಕೆಯ ಅವಧಿಯು 4 ವರ್ಷಕ್ಕಿಂತ ಹೆಚ್ಚಾಗಿದೆ. 

ಸಾಮಾಜಿಕ ಅಂಶಗಳು ಮತ್ತು ದಾನದ ಪ್ರಕ್ರಿಯೆಯಲ್ಲಿ ದಾನಿಯ ಮತ್ತು ಆತನ ಕುಟುಂಬದ ಸದಸ್ಯರ ಅಥವಾ ದಾನ ಪಡೆಯುವಾತನಿಂದ ಉಂಟಾಗುವ ತೊಡಕುಗಳು ಸ್ವಯಂ-ಇಚ್ಛೆಯ ದಾನದ ಮೇಲೆ  ಪರಿಣಾಮ ಉಂಟು ಮಾಡಬಹುದು. ಭಾರತದಲ್ಲಿ ನೈತಿಕ ಕಾರಣಗಳು ಮತ್ತು ಆರ್ಥಿಕವಾಗಿ ದುರ್ಬಲರಾದ ಜನರನ್ನು ದುರ್ಬಳಕೆ ಮಾಡಿಕೊಳ್ಳುವ ಕಾರಣಗಳಿಗಾಗಿ ಭಾರತದ ಮಾನವ ಅಂಗಗಳ ಕಸಿ ಮಸೂದೆ 1994 ಮತ್ತು ಅದರ ಪರಿಚ್ಛೇದಗಳು ನೀತಿಬಾಹಿರ ಕಸಿ ಪ್ರಕ್ರಿಯೆಗಳನ್ನು ಪುರಸ್ಕರಿಸುವುದಿಲ್ಲ. 

ಪ್ರಕರಣಗಳನ್ನು ದಾನದ ಕಸಿ ಪ್ರಕ್ರಿಯೆಯ ಮೂಲಕ ಪರಿಹರಿಸಿಕೊಳ್ಳಲು ಶೇ. 28 ಐಚ್ಛಿಕ ದಾನಿಗಳು ಮುಂದೆ ಬಂದಿರುತ್ತಾರೆ. ಉಳಿದ ಪ್ರಕರಣಗಳಲ್ಲಿ ರೋಗಿ ಅಥವಾ ರೋಗಿಯ ವೈದ್ಯರ ಬೇಡಿಕೆಯ ಮೇರೆಗೆ ಪರಿಹರಿಸಿಕೊಳ್ಳಬಹುದು ಎಂಬುದು ಇತ್ತೀಚಿನ ಅಂಕಿ-ಅಂಶಗಳು ಹೇಳುತ್ತವೆ.  

ಸಹಾಯಕ್ಕಾಗಿ ಬೇರೆಯವರನ್ನು ಕೇಳುವುದಕ್ಕೂ ಧೈರ್ಯ ಬೇಕಾಗುತ್ತದೆ. ಮೂತ್ರಪಿಂಡವನ್ನು ಕೊಡುವುದಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ. ಬೇರೆಯವರಿಗೆ ಸಹಾಯ ಮಾಡುವುದು ಯಾವತ್ತಿದ್ದರೂ ಒಳ್ಳೆಯದೇ. ಇನ್ನೊಬ್ಬರಿಗೆ ಅಂಗವನ್ನು ದಾನವಾಗಿ ಕೊಟ್ಟು ಅವರಿಗೆ ಹೊಸ ಜೀವನವನ್ನು ಕೊಡುವುದಕ್ಕಿಂತಲೂ ಹೆಚ್ಚಿನ ಸಹಾಯ  ಯಾವುದೂ ಇರಲಿಕ್ಕಿಲ್ಲ.      

ಕಸಿ ಮಾಡಿಸಿಕೊಳ್ಳುವ ರೋಗಿಯ ಪ್ರಯೋಗಾಲಯ ಅಧ್ಯಯನಗಳು
ರಕ್ತ ರಾಸಾಯನಿಕ ಸಂಯೋಜನೆಗಳು

ಪಿತ್ತಜನಕಾಂಗದ ಚಟುವಟಿಕೆಯ ಪರೀಕ್ಷೆಗಳು

ಎಲ್ಲ ಬಗೆಯ ರಕ್ತಕಣಗಳ ಸಂಖ್ಯೆ 
(ಕಂಪ್ಲೀಟ್‌ ಬ್ಲಿಡ್‌ ಕೌಂಟ್‌ (CBC)

ಹೆಪ್ಪುಗಟ್ಟುವಿಕೆಯ ಅಂಶ

ಕಸಿ ಮಾಡಿಸಿಕೊಳ್ಳುವ ರೋಗಿಯಲ್ಲಿ   ಕಂಡು ಬರಬಹುದಾದ ಸೋಂಕಿನ ಅಂಶಗಳು

ಹೆಪಟೈಟಿಸ್‌ “ಬಿ’ ಮತ್ತು “ಸಿ’ ಸೀರಾಲಜಿಗಳು

(Igm and IgG) ಎಪ್ಸಿನ್‌ – ಬಾರ್‌ ವೈರಸ್‌, ಸೀರಾಲಜಿ (IgM and IgG)

ಸೈಟೋಮೆಗಲೋವೈರಸ್‌ (CMV) ಸೀರಾಲಜಿಗಳು  ((IgM and IgG)

ವೆರಿಸೆಲ್ಲಾ – ಝೊಸ್ಟರ್‌ ವೈರಸ್‌, ಸೀರಾಲಜಿಗಳು (IgM and IgG)

ಸಿಫಿಲಿಸ್‌ ಪತ್ತೆಗಾಗಿ ಮಾಡುವ ರಾಪಿಡ್‌ ಪ್ಲಾಸ್ಮಾ ರೀಜಿನ್‌ (RPR) ಟೆಸ್ಟ್‌

HIV ಎಚ್‌ಐವಿ 

ಪ್ಯೂರಿಫೈಡ್‌ ಪ್ರೊಟೀನ್‌ ಡಿರೈವೇಟಿವ್‌ (PPD) – ಟ್ಯುಬಕ್ಯುಲೋಸಿಸ್‌ ಸ್ಕಿನ್‌ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next