Advertisement

UPSC ಕೋಚಿಂಗ್‌ಗಾಗಿ ಕಿಡ್ನಾಪ್‌: 10 ಲಕ್ಷ ರೂ.ಗೆ ಬೇಡಿಕೆ

01:01 AM Oct 01, 2024 | Team Udayavani |

ಪಟ್ನಾ: ಐಎಎಸ್‌ ಅಧಿಕಾರಿಯಾಗಲು ಕೋಚಿಂಗ್‌ ಪಡೆಯಲು ಹಣವಿಲ್ಲದ್ದಕ್ಕೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ 8 ವರ್ಷದ ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬಿಹಾರದ ಗೋಪಾಲ್‌ಗ‌ಂಜ್‌ನಲ್ಲಿ ನಡೆದಿದೆ. ಆತನನ್ನು ಅಮಿತ್‌ ಕುಮಾರ್‌ ಎಂದು ಗುರುತಿಸಲಾಗಿದ್ದು, ಮಳೆಯಿಂದ ರಕ್ಷಣೆ ಕೋರಿ ಮನೆಗೆ ಪ್ರವೇಶಿಸಿದ ಆರೋಪಿ ಅಲ್ಲಿದ್ದ ಮಗುವನ್ನು ಎತ್ತಿಕೊಂಡು ಪರಾರಿಯಾಗಿ 10 ಲಕ್ಷ ರೂ. ನೀಡಬೇಕೆಂದು ಫೋನ್‌ ಮಾಡಿದ್ದಾನೆ. ಆದರ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next