Advertisement

ಸುಬ್ರಹ್ಮಣ್ಯ: ರಸ್ತೆ ಅಗೆದು ಹಾಕಿದ್ದಕ್ಕೆ ಅಸಮಾಧಾನ

07:35 PM Sep 29, 2021 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್‌ ಪ್ಲ್ಯಾನ್ ನ ಕಾಮಗಾರಿಯಲ್ಲಿ ಕಳೆಪೆ ಯಾಗಿದೆ ಅದಕ್ಕಾಗಿ ರಸ್ತೆ ಅಗೆಯಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯ ದಲ್ಲಿ ವ್ಯಕ್ತವಾಗಿ ಅಸಮಾಧಾನ ಹೊರ ಹೊಮ್ಮಿದೆ.

Advertisement

ಬಹು ಕೋಟಿ ರೂ. ವೆಚ್ಚದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಮಾಸ್ಟರ್‌ ಪ್ಲ್ಯಾನ್ ಕಾಮಗಾರಿ ಹಲವು ವರ್ಷಗಳಿಂದ ನಡೆಯು ತ್ತಿದೆ. ಇದರಲ್ಲಿ ಮೂಲ ಸೌಕ ರ್ಯದ ಜತೆ ರಸ್ತೆ ಸಂಪರ್ಕವೂ ಒಳ ಗೊಂಡಿದೆ.

ಸುಬ್ರಹ್ಮಣ್ಯದ ಕುಮಾರಧಾರಾ ಬಳಿಯಿಂದ ಕುಕ್ಕೆ ದೇಗುಲದವರೆಗೂ ಕಾಂಕ್ರೀಟ್‌ ರಸ್ತೆ ಕಾಮಗಾರಿ ನಿರ್ಮಿಸ ಲಾಗಿದೆ. ಕುಮಾರಧಾರಾ ಬಳಿಯಿಂದ ಕಾಶಿಕಟ್ಟೆ ವರೆಗೆ ದ್ವಿಪಥದ ರಸ್ತೆ ನಿರ್ಮಾಣಗೊಂಡಿದೆ. ಇದೀಗ ಎಸ್‌ಎಸ್‌ಪಿಯು ಕಾಲೇಜು ಬಳಿ ಸಂಪರ್ಕ ರಸ್ತೆಯನ್ನು ಬಂದ್‌ ಮಾಡಿ ಕಾಂಕ್ರೀಟ್‌ ರಸ್ತೆಯನ್ನು ಯಂತ್ರದ ಸಹಾಯದಿಂದ ಅಗೆಯಲಾಗಿದೆ.

ಗುಣಮಟ್ಟದಲ್ಲಿ ಅವೈಜ್ಞಾನಿಕತೆ ಅಥವಾ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಬಿರುಕು ಬಿಟ್ಟಿದ್ದು ಇದಕ್ಕಾಗಿ ರಸ್ತೆಯನ್ನು ನೆಲಮಟ್ಟದವರೆಗೆ ಅಗೆದು ಹಾಕಲಾಗಿದೆ ಎಂಬ ದೂರು ಕೇಳಿ ಬಂದಿದೆ. ಅಗೆದು ಹಾಕಲಾದಲ್ಲಿ ಮತ್ತೆ ಕಬ್ಬಿಣದ ಸರಳು ಬಳಸಿ ತೇಪೆ ರೀತಿ ಕಾಮಗಾರಿ ನಡೆಸಲಾಗುತ್ತಿದೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 539 ಪಾಸಿಟಿವ್ ಪ್ರಕರಣ | 591 ಸೋಂಕಿತರು ಗುಣಮುಖ

Advertisement

ಕಳಪೆ ಕಾಮಗಾರಿ ನಡೆಸಿ ಸರಕಾರದ ಹಣವನ್ನು ಪೋಲು ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದ್ದು ಅಧಿಕಾರಿಗಳು, ಸಂಬಂಧಿಸಿದವರು ಗಮನ ಹರಿಸಿ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ಕಳಪೆ ಆಗಬಾರದು
ಸ್ಥಳೀಯರಾದ ದಿನೇಶ್‌ ಸುಬ್ರಹ್ಮಣ ಪತ್ರಿಕೆಯೊಂದಿಗೆ ಮಾತನಾಡಿ, ಸಾರ್ವಜನಿಕ ಕೆಲಸ ಈ ಮಟ್ಟಿಗೆ ಕಳಪೆ ಆಗಬಾರದು. ಮೇಲುಸ್ತುವಾರಿ ಮಾಡುವವರಿಗೆ ಹೆಚ್ಚಿನ ಜವಬ್ದಾರಿ ಇದೆ. ಈಗ ಕನಿಷ್ಠ ಒಂದು ತಿಂಗಳು ಆ ರಸ್ತೆ ಉಪಯೋಗಕ್ಕೆ ಬಾರದಾಗಿದೆ ಎಂದರು.

ಗುಣಮಟ್ಟದಲ್ಲಿ ಲೋಪ ಆಗಿಲ್ಲ
ಗುತ್ತಿಗೆದಾರರು ಕಟ್ಟಿಂಗ್ಸ್‌ ಮಾಡುವ ಸಮಯದಲ್ಲಿ ಕಟ್ಟಿಂಗ್ಸ್‌ ಮಾಡಿಲ್ಲದ ಕಾರಣ ಕ್ರ್ಯಾಕ್ ಬಂದಿತ್ತು. ಅದಕ್ಕಾಗಿ ರೀ ಕಾಂಕ್ರೀಟ್‌ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ. ಅದರಂತೆ ಕಾಮಗಾರಿ ನಡೆಸುತ್ತಿದ್ದಾರೆ. ಐದು ಕಡೆಗಳಲ್ಲಿ ರೀ ಕಾಂಕ್ರೀಟ್‌ ಮಾಡಲಾಗುತ್ತಿದೆ. ಗುಣಮಟ್ಟದಲ್ಲಿ ಲೋಪವಾಗಿಲ್ಲ. ಇಲಾಖೆ ನಿಯಮದಂತೆ ಕಾಮಗಾರಿ ನಡೆಯುತ್ತಿದೆ.
– ಚಂದ್ರಶೇಖರ ನಲ್ಲೂರಾಯ,
ಮಾಸ್ಟರ್‌ ಪ್ಲ್ರಾನ್‌ ಸಮಿತಿ ಸದಸ್ಯ

ಕರಾರಿನಂತೆ ನಡೆಯುತ್ತಿದೆ
ಕಾಮಗಾರಿ ಸಂದರ್ಭದಲ್ಲಿ ತಳಭಾಗ ಹಾಕಿದ ಮಣ್ಣಾಗಿದ್ದು, ಅದು ಒಣಗದೇ ಕಾಂಕ್ರೀಟ್‌ ನಡೆಸಿದ್ದಲ್ಲಿ ಕ್ರ್ಯಾಕ್‌ ಆಗುವ ಸಂಭವವಿದೆ. ಆಗ ಅಲ್ಲಿಂದಲ್ಲಿಗೆ ತೇಪೆ ಹಾಕಲಾಗುವುದಿಲ್ಲ. ಅದಕ್ಕಾಗಿ ಅದನ್ನು ನಿಗದಿತ ಅಳತೆಯಲ್ಲಿ ಅಗೆದು ಹೊಸ ಕಾಂಕ್ರೀಟ್‌ ಹಾಕಬೇಕೆಂದು ಕರಾರಿನಲ್ಲಿ ತಿಳಿಸಿದೆ. ಅದನ್ನು ಹೊಸತಾಗಿ ನಿರ್ಮಿಸಬೇಕು. ಗುರುತು ಮಾಡಿದಲ್ಲೆಲ್ಲ ಕಾಂಕ್ರೀಟ್‌ ಕಾಮಗಾರಿ ನಡೆಸ ಬೇಕು. ಇವುಗಳಿಗೆ ಗುತ್ತಿಗೆದಾರರೇ ಜವಾಬ್ದಾರರು.
-ಶಿವರಾಮ ರೈ , ಮಾಜಿ ಸದಸ್ಯರು ಮಾಸ್ಟರ್‌ ಪ್ಲ್ರಾನ್‌ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next