Advertisement

ಹೊರಾಂಗಣ ಉತ್ಸವ ಆರಂಭ

10:03 PM Oct 29, 2019 | mahesh |

ಸುಬ್ರಹ್ಮಣ್ಯ: ದೀಪಾವಳಿ ಆಚರಣೆ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ ಗೋಪೂಜೆ, ಗಜಲಕ್ಷ್ಮೀ ಪೂಜೆ ಜರಗಿತು. ದೇಗುಲದ ಮುಂಭಾಗದಲ್ಲಿ ಅರ್ಚಕರು ದೇಗುಲದ ಆನೆ ಯಶಸ್ವಿಗೆ ಆರತಿ ಬೆಳಗಿದರು. ಅನಂತರ ಪ್ರಸಾದ ನೀಡಿ ಕುಂಕುಮ ಹಚ್ಚಲಾಯಿತು. ದೇಗುಲದಲ್ಲಿ ವಿಶೇಷ ಪ್ರಾರ್ಥನೆ, ಧನ ಲಕ್ಷ್ಮೀ, ಗೋಪೂಜೆಗಳು ನಡೆದವು. ದೇವಸ್ಥಾನವನ್ನು ಅಲಂಕರಿಸಲಾಗಿತ್ತು.

Advertisement

ದೇಗುಲದ ಕಾರ್ಯನಿರ್ವಹಣಾ ಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಪುತ್ತೂರು ತಾಲೂಕು ತಹಶೀಲ್ದಾರ್‌ ಅನಂತಕೃಷ್ಣ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್‌, ದೇಗುಲದ ಅಧೀಕ್ಷಕ ಬಾಲ ಸುಬ್ರಹ್ಮಣ್ಯ ಭಟ್‌, ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಭೀಶ ಉಪಸ್ಥಿತರಿದ್ದರು.

ಹೊರಾಂಗಣ ಉತ್ಸವ ಆರಂಭ
ದೇವರು ಹೊರಾಂಗಣ ಪ್ರವೇಶಿಸುವ ಮೂಲಕ ಹೊರಾಂಗಣದ ಉತ್ಸವಗಳು ರಾತ್ರಿ ಆರಂಭಗೊಂಡವು. ಪ್ರಾರ್ಥನೆ ಹಾಗೂ ಮಹಾಪೂಜೆ ನೆರವೇರಿದ ಬಳಿಕ ದೇವರು ಹೊರಾಂಗಣ ಪ್ರವೇಶಿಸಿದರು. ಅನಂತರ ಪಾಲಕಿ ಮತ್ತು ಬಂಡಿ ಉತ್ಸವ, ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next