Advertisement

ಹುಂಚದಕಟ್ಟೆ ನಾಗದೇವತೆ ದೇವಸ್ಥಾನದಲ್ಲಿ ಸುಬ್ರಮಣ್ಯ ಷಷ್ಠಿ ದೀಪೋತ್ಸವ

12:26 PM Dec 02, 2022 | keerthan |

ತೀರ್ಥಹಳ್ಳಿ: ತಾಲ್ಲೂಕಿನ ಹುಂಚದಕಟ್ಟೆ ರಾಮನಸರ ಶ್ರೀನಾಗದೇವತೆ ದೇವಸ್ಥಾನದಲ್ಲಿ 16ನೇ ವರ್ಷದ ಸುಬ್ರಮಣ್ಯ ಷಷ್ಠಿ ದೀಪೋತ್ಸವ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿತು. ದೇವಸ್ಥಾನ ಸಾನಿಧ್ಯದಲ್ಲಿ ದೀಪೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಶ್ರೀ ನಾಗದೇವತೆಗೆ ವಿವಿಧ ಪುಷ್ಪಾಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

Advertisement

ಅಂದು ಬೆಳಿಗ್ಗೆ ದೇವರಿಗೆ ಕಲಾಹೋಮ, ಆಶ್ಲೇಷ ಬಲಿ ಪೂಜೆ, ಪಂಚ ವಿಂಶತಿಕಲಶ, ಕಲಾತತ್ವ ಆಧಿವಾಸ ಹೋಮ, ರಾತ್ರಿ ಕರ್ಪೂರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿಸಲಾಯಿತು. ದೀಪೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಮಧ್ಯಾಹ್ನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು.

ರಾತ್ರಿ ದೀಪೋತ್ಸವ ಅಂಗವಾಗಿ ದೇವಸ್ಥಾನ ಆವರಣದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಳಿಸಿದ್ದು, ಇಡೀ ಆವರಣೆಗೆ ವಿದ್ಯುತ್ ದೀಪಗಳಿಂದ ಕಂಗೊಸುತ್ತಿತ್ತು. ಸಿಡಿಮದ್ದು ಪ್ರದರ್ಶನ ಆತ್ಯಾಕರ್ಷಕವಾಗಿತ್ತು. ಸನ್ನಿಧಿಗೆ ಆಗಮಿಸಿದ ಸಾವಿರಾರು ಭಕ್ತರು ಶ್ರೀ ನಾಗದೇವತೆಗೆ ದೀಪಗಳನ್ನು ಬೆಳಗುವ ಮೂಲಕ ಭಕ್ತಿಯ ಪರಕಾಷ್ಠೆಯನ್ನು ಮೆರೆದರು.

16ನೇ ವರ್ಷದ ದೀಪೋತ್ಸವ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಪುಟಾಣಿ ಮಕ್ಕಳಿಗೆ ಛದ್ಮವೇಶ, ನಾರವಾದ್ಯ, ಚೆಂಡೆ, ಸ್ಯಾಕ್ಸೋಫೋನ್, ಡೊಳ್ಳುಕುಣಿತ, ಬ್ಯಾಂಡ್, ಭರತನಾಟ್ಯ, ಜೋಗಿಯರ ಕಥೆ, ಕೋಲನೃತ್ಯ, ಕಾಡುಜನಾಂಗದ ನೃತ್ಯ, ಸುಗ್ಗಿನೃತ್ಯ ಕೋಲಾಟ, ಗೀಗೀಪದ ಭಜನೆ ನಾಟಕ ಜಾನಪದ ಗೀತೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಜನರ ಗಮನ ಸೆಳೆದವು.

Advertisement

ಕರಾವಳಿಯ ಗಂಡು ಕಲೆ ಎಂದೇ ಖ್ಯಾತಿ ಪಡೆದಿರುವ ಯಕ್ಷಗಾನ ಪ್ರದರ್ಶನ ಕೇಂದ್ರ ಬಿಂದುವಾಗಿದ್ದು, ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ನಡೆಸಿಕೊಟ್ಟ ಐದು ಮೇಳಗಳ ಕೂಡಾಟ ನೆರೆದಿದ್ದ ಭಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಭಾಗವಹಿಸಿದ್ದ ಕಲಾತಂಡಗಳಿಗೆ ಇದೇ ವೇಳೆ ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರು ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next