Advertisement
ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಉತ್ಸವ ನಡೆದ ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನಡೆಯಿತು. ದೇವರು ಬೀದಿಗೆ ಬರುವ ಮುಂಚಿತ ಕ್ಷೇತ್ರದ ಹೊಸೊಳಿಗಮ್ಮ ದೈವವು ದೇಗುಲದ ಮುಂಭಾಗದಲ್ಲಿ ದೇವರಿಗೆ ಕಾಣಿಕೆ ನೀಡಿತು. ಬಳಿಕ ರಥಬೀದಿಯಲ್ಲಿ ರಥೋತ್ಸವ ನೆರವೇರಿತು. ಈ ವೇಳೆ ದೈವವು ರಥದ ಜತೆ ಕಟ್ಟೆಪೂಜೆ ನಡೆಯುವ ತನಕ ತೆರಳಿ ದೇವರು ದೇಗುಲದ ಒಳಗೆ ಪ್ರವೇಶಿಸುವ ತನಕ ಪಾಲ್ಗೊಂಡಿತು. ಸವಾರಿ ಮಂಟಪದಲ್ಲಿ ಶ್ರೀ ದೇವರಿಗೆ ಕಟ್ಟೆಪೂಜೆ ನೆರವೇರಿತು. ಸೋಮವಾರ ರಾತ್ರಿ ಕುಕ್ಕೆಲಿಂಗ ಜಾತ್ರೆ ಹಿನ್ನೆಲೆಯಲ್ಲಿ ದೇಗುಲದ ಹೊರಾಂಗಣದಲ್ಲಿ ಶ್ರೀ ದೇವರ ಬಂಡಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಅನಂತರ ಕಾಜುಕುಜುಂಬ ದೈವದ ನಡಾವಳಿ ನೆರವೇರಿತು. ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಮಕರ ಸಂಕ್ರಮಣದ ದಿನ ರಾತ್ರಿ ಶ್ರೀ ಉಳ್ಳಾಳ್ತಿ ಅಮ್ಮನವರ ನಡೆಯಲ್ಲಿ ಕನಕಾಭಿಷೇಕ ನಡೆಯಿತು. ಮಕರ ಸಂಕ್ರಮಣದ ರಾತ್ರಿ ಪೂಜೆಯ ಬಳಿಕ ಬಲಿ ಉತ್ಸವದ ಕೊನೆಯ ಸುತ್ತಿನಲ್ಲಿ ದೇವಾಲಯದ ಆಡಳಿತ ಮೊಕ್ತೇಸರ ಎನ್. ಸುಧಾಕರ ಶೆಟ್ಟಿ ಕನಕಾಭಿಷೇಕ ನೆರವೇರಿಸಿದರು. ದೊಡ್ಡ ಹರಿವಾಣದಲ್ಲಿ ಹೊದ್ಲು, ಅಡಿಕೆ, ವೀಳ್ಯದೆಲೆ, ಕರಿಮೆಣಸು ಮೊದಲಾದ ಸುವಸ್ತುಗಳು, ಚಿನ್ನ -ಬೆಳ್ಳಿಯ ತುಣುಕುಗಳು, ರೂಪಾಯಿ, ನಾಣ್ಯ ಗಳನ್ನು ಶ್ರೀ ದೇವರ ಉತ್ಸವ ಮೂರ್ತಿಗೆ ಚಿಮ್ಮಿಸುವ ಮೂಲಕ ಅಭಿಷೇಕ ಮಾಡಲಾಯಿತು. ತುಳು ಪಾಡ್ದನಗಳಲ್ಲಿ ಉಲ್ಲೇಖೀ ಸಿರುವಂತೆ ವಿಜಯದ ಸಂಕೇತವಾಗಿ ಅರಸರ ಕಾಲದಿಂದಲೂ ಸೀಮೆಯ ದೇವಸ್ಥಾನದಲ್ಲಿ ಈ ಕ್ರಮ ವನ್ನು ಪಾಲಿಸ ಲಾಗುತ್ತಿದೆ. ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುವುದು ಕನಕಾಭಿಷೇಕದ ವಿಶೇಷ. ಅರ್ಚಕ ವಿ.ಎಸ್. ಭಟ್ ವೈದಿಕ ವಿಧಿ-ವಿಧಾನ ನೆರವೇರಿಸಿದರು.