Advertisement

Subramanya ವನ್ಯಜೀವಿಗಳಿಗೆ ಅಕ್ರಮವಾಗಿ ಆಹಾರ: ದೂರು ದಾಖಲು

08:24 PM Jan 20, 2024 | Team Udayavani |

ಸುಬ್ರಹ್ಮಣ್ಯ: ವ್ಯಕ್ತಿಯೊಬ್ಬರು ವನ್ಯಜೀವಿಗಳಿಗೆ ಅಕ್ರಮವಾಗಿ ಆಹಾರ ನೀಡಿದ್ದಲ್ಲದೇ ಅದನ್ನು ಪ್ರಶ್ನಿಸಿದ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ.

Advertisement

ವನ್ಯಜೀವಿಗಳ ಅಧ್ಯಯನ ಹಾಗೂ ಸಂರಕ್ಷಣೆ ವಿಷಯದಲ್ಲಿ ಸುಬ್ರಹ್ಮಣ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಳಿನೆಲೆ ಗ್ರಾಮದ ಭುವನೇಶ್‌ ದೂರು ನೀಡಿದವರು. ಅವರು ಶನಿವಾರ ಸುಬ್ರಹ್ಮಣ್ಯದತ್ತ ತೆರಳುವ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ವಲಯ ಅರಣ್ಯ ಕಚೇರಿ ಬಳಿ ಕೋತಿಗಳಿಗೆ ಬಿಸ್ಕತ್ತು ಹಾಕುತ್ತಿದ್ದರು. ವನ್ಯಜೀವಿಗಳಿಗೆ ಆಹಾರ ನೀಡುವುದು ಅಪರಾಧ ಹಾಗೂ ಅವೈಜ್ಞಾನಿಕ ಎಂದು ತಿಳಿಹೇಳಿದರೂ ಆತ ಆಹಾರ ನೀಡುವುದನ್ನು ನಿಲ್ಲಿಸದೆ, ತಿಳಿಹೇಳಿದ ಭುವನೇಶ್‌ ಅವರಿಗೆ ಅಬಾಚ್ಯ ಶಬ್ದಗಳಿಂದ ಬೈದು, ಬಲಪ್ರಯೋಗ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇದೇ ರೀತಿ ಹಲವರು ಆಹಾರ ನೀಡುತ್ತಿದ್ದು, ಆಹಾರಕ್ಕಾಗಿ ರಸ್ತೆಗೆ ಬರುವ ವನ್ಯಜೀವಿಗಳು ವಾಹನದ ಅಡಿಗೆ ಸಿಲುಕಿ ಸಾವನ್ನಪ್ಪಿರುತ್ತವೆ. ಆದ್ದರಿಂದ ಕೋತಿಗಳ ಅನಾರೋಗ್ಯಕ್ಕೆ ಹಾಗೂ ಕಾನೂನು ಬಾಹಿರ ಕೆಲಸ ಮಾಡಿರುವ ವ್ಯಕ್ತಿಯ ಮೇಲೆ ವನ್ಯಜೀವಿ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಕ್ರಮ ಜರಗಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next