Advertisement

ಸುಬ್ರಹ್ಮಣ್ಯ ಪರಿಸರದಲ್ಲಿ ಉತ್ತಮ ಮಳೆ

12:30 AM Feb 08, 2019 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪರಿಸರದಲ್ಲಿ ಗುರುವಾರ ಸಂಜೆ ಮಿಂಚು – ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟಿದ್ದಾನೆ. 

Advertisement

ಹರಿಹರ ಪಳ್ಳತ್ತಡ್ಕ ಗ್ರಾಮದ ಮಿತ್ತಮಜಲು ನಿವಾಸಿ ಕೃಷ್ಣಪ್ಪ ಅವರ ಪುತ್ರ ಪ್ರವೀಣ್‌ (22) ಮೃತಪಟ್ಟವರು. ಅವರು ಹೆತ್ತವರು ಮತ್ತು ಸಹೋದರಿ ಯನ್ನು ಅಗಲಿದ್ದಾರೆ.

ಪ್ರವೀಣ್‌ ಅವರು ಕುಮಾರಧಾರೆ ಬಳಿಯ ಖಾಸಗಿ ವಸತಿಗೃಹದ ಬಳಿ ಅಲಂಕಾರಿನ ಕೇಶವ ಮೇಸ್ತ್ರಿ ಜತೆ ಅಂಗಳಕ್ಕೆ ಇಂಟರ್‌ಲಾಕ್‌ ಅಳವಡಿ ಸುವ ಕಾರ್ಯದಲ್ಲಿ ನಿರತರಾಗಿ ದ್ದರು. ಇದ್ದಕ್ಕಿದ್ದಂತೆ ಮಳೆ ಸುರಿಯಲಾ ರಂಭಿಸಿದ ಕಾರಣ ಪಕ್ಕದಲ್ಲೆ ನಿಲ್ಲಿಸಿದ್ದ ಬೈಕಿಗೆ ಪ್ಲಾಸ್ಟಿಕ್‌ ಹೊದೆಸಿ ಅದರ ಮೇಲಿಡಲು ಕಲ್ಲನ್ನು ಅರಸುತ್ತಿದ್ದಾಗ ಅವರ ಮೇಲೆ ಸಿಡಿಲೆರಗಿದ್ದು, ಸ್ಥಳ ದಲ್ಲೇ ಮೃತಪಟ್ಟರು.

ಸಿಡಿಲಿನ ತೀವ್ರತೆಗೆ ದೇಹದಲ್ಲಿ ಸುಟ್ಟ ಗಾಯಾಗಳಾಗಿ ಕರಟಿ ಹೋಗಿದೆ. ಅವರ ಚಪ್ಪಲಿ ಒಂದಷ್ಟು ದೂರ ಹಾರಿಬಿದ್ದಿತ್ತು. ಜತೆಗಿದ್ದ ಇನ್ನೋರ್ವ ಕಾರ್ಮಿಕ ಪಾರಾಗಿದ್ದಾನೆ. ಪ್ರವೀಣ ಅವರನ್ನು ತತ್‌ಕ್ಷಣ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿ ಸಿದರು. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರವ ಮೌನ
ಪ್ರವೀಣ್‌ ಹೆತ್ತವರು ಕೂಲಿ ಕಾರ್ಮಿಕರು. ಬಡತನದ ಕಾರಣ ಪಿಯುಸಿ ವರೆಗೆ ಓದಿದ ಬಳಿಕ ಪ್ರವೀಣ್‌ ಕೂಡ ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಹೆತ್ತವರ ಏಕೈಕ ಪುತ್ರನಾಗಿರುವ ಈತ ಚುರುಕು ಮತಿಯಾಗಿದ್ದರು. ಮನೆಗೆ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದು ಕೊಂಡ ಹೆತ್ತವರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಊರಿನ ದೇಗುಲದಲ್ಲಿ ಬ್ರಹ್ಮ ಕಲಶೋತ್ಸವಕ್ಕೆ ಸಿದ್ಧತೆಗಳು ಸಂಭ್ರಮದಿಂದ ನಡೆ ಯು ತ್ತಿರುವಾಗ ಯುವಕನ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿಕೊಂಡಿದೆ.

Advertisement

ದಿಢೀರನೆ ಮಳೆ
ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಗುರುವಾರ ಸಂಜೆ ವೇಳೆಗೆ ದಿಢೀರನೆ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಯಿತು. ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಗುತ್ತಿಗಾರು, ಕಲ್ಮಕಾರು ಗುತ್ತಿಗಾರು, ಯೇನೆಕಲ್ಲು, ಮೊದಲಾದ ಕಡೆಗಳಲ್ಲಿ ಉತ್ತಮ  ಮಳೆಯಾಗಿದೆ. ಕೆಎಸ್‌ಎಸ್‌ ಕಾಲೇಜಿನಲ್ಲಿ ಮಂಗಳೂರು ವಿ.ವಿ. ಮಟ್ಟದ ಅಂತರ್‌ ಜಿಲ್ಲಾ ಪುರುಷರ ಕಬಡ್ಡಿ ಪಂದ್ಯಾಟ ನಡೆಯುತ್ತಿದ್ದು ಮಳೆಯಿಂದಾಗಿ ವೇದಿಕೆ, ಶಾಮಿಯಾನ ಧರಾಶಾಯಿಯಾಗಿವೆ. ಪಂದ್ಯಾಟಕ್ಕೂ ಮಳೆಯಿಂದ ಅಡ್ಡಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next