Advertisement

ಸುಬ್ರಹ್ಮಣ್ಯ: ಅರಂಪಾಡಿ ಸಮೀಪ ರಾಜ್ಯ ಹೆದ್ದಾರಿಯಲ್ಲಿ  ಒಂಟಿ ಸಲಗ

12:30 AM Mar 15, 2019 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ ಮಧ್ಯೆ ಸುಬ್ರಹ್ಮಣ್ಯ ಸಮೀಪ ಅರಂಪಾಡಿ ಎಂಬಲ್ಲಿ ಗುರುವಾರ ಸಂಜೆ ಹೊತ್ತು ಒಂಟಿ ಸಲಗವೊಂದು ರಸ್ತೆ ಮಧ್ಯೆ ಕಾಣಿಸಿಕೊಂಡಿದೆ. 

Advertisement

ದ್ವಿಚಕ್ರ ವಾಹನ ಸವಾರರು ಈ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ಕಾಡಂಚಿನಿಂದ ಒಂಟಿ ಸಲಗ ಇಳಿದು ಬಂದು ರಸ್ತೆ ದಾಟಿದೆ. ಬಳಿಕ ಪಕ್ಕದ ಅರಣ್ಯ ಸೇರಿದೆ. ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಈ ರಸ್ತೆ ಮೇಲೆ ತೆರಳುವ ವಾಹನ ಸವಾರರಿಗೆ ಎಚ್ಚರಿಕೆಯಿಂದ ಪ್ರಯಾಣ ಬೆಳೆಸುವಂತೆ ಸ್ಥಳಿಯರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.