ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸಹಿತ ಘಟ್ಟ ಪ್ರದೇಶ, ಪಶ್ಚಿಮ ಘಟ್ಟ, ಕುಮಾರಪರ್ವತ ಭಾಗಗಳಲ್ಲಿ ನಿರಂತರ ಮಳೆ ಮುಂದುವರಿದಿದೆ. ಗುರುವಾರ ದಿನಪೂರ್ತಿ ಮಳೆಯಾಗಿದ್ದು, ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನಘಟ್ಟ ನಾಲ್ಕನೇ ದಿನವೂ ಮುಳುಗಡೆ ಸ್ಥಿತಿಯಲ್ಲಿದೆ.
ಕುಮಾರಧಾರಾದ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ನದಿ ತಟದಲ್ಲಿರುವ ಶ್ರೀ ದೇವರ ಜಳಕದ ಕಟ್ಟೆ ಭಾಗಶಃ ಮುಳುಗಡೆಗೊಂಡಿದೆ.
ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು ಭಾಗಶಃ ಮುಳುಗಿವೆ. ಸುಬ್ರಹ್ಮಣ್ಯದ ಗ್ರಾಮೀಣ ಭಾಗಳಾದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು,ಗುತ್ತಿಗಾರು, ಪಂಜ, ಅಲೆಕ್ಕಾಡಿ, ನಿಂತಿಕಲ್ಲು, ನೆಟ್ಟಣ, ಬಿಳಿನೆಲೆ ಭಾಗದಲ್ಲಿ ಭಾರೀ ಮಳೆಯಾಗಿದೆ.
ಇದರಿಂದ ಈ ಭಾಗದ ನದಿ, ತೊರೆಗಳು ತುಂಬಿ ಹರಿಯುತ್ತಿದೆ.ಹರಿಹರ ಹೊಳೆ, ಕಲ್ಲಾಜೆ ಹೊಳೆ ಇತ್ಯಾದಿಗಳು ತುಂಬಿ ಹರಿಯುತ್ತಿದೆ.
ಬಾಳುಗೋಡು ಗ್ರಾಮದ ಪದಕ ಸೇತುವೆ ಮುಳುಗಡೆಗೊಂಡು ಸಂಚಾರ ವ್ಯತ್ಯಯವಾಯಿತು. ಗ್ರಾಮೀಣ ಭಾಗದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲೇ ನೀರು ಹರಿಯುತ್ತಿದೆ.