Advertisement

ಸಂಸ್ಕರಿಸಿದ ನೀರಿನ ಪರೀಕ್ಷಾವರದಿ ಕೋರ್ಟ್‌ಗೆ ಸಲ್ಲಿಕೆ

01:01 PM Sep 27, 2018 | |

ಬೆಂಗಳೂರು: ಕೋರಮಂಗಲ-ಚಲಘಟ್ಟ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಿಗೆ ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಜಾಕ್‌ವೆಲ್‌ ಹರಿಸಿದ ನೀರಿನ ಗುಣಮಟ್ಟದ ಪರೀಕ್ಷೆಯ ವರದಿಯನ್ನು ಸರ್ಕಾರ ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿತು.

Advertisement

ಈ ಕುರಿತು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯ ರೆಡ್ಡಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರ ಸಲ್ಲಿಸಿದ ವರದಿಯನ್ನು ದಾಖಲಿಸಿಕೊಂಡು, ವರದಿಯನ್ನು ಪರಿಶೀಲಿಸಿ ಅದಕ್ಕೆ ಉತ್ತರ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಬುಧವಾರ ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ,  “ಬೆಳ್ಳಂದೂರು ಸಮೀಪದ ಜಾಕ್‌ವೆಲ್‌ನಿಂದ ಬೆಳಗೆರೆ ಸಮೀಪದ ಜಾಕ್‌ವೆಲ್‌ಗೆ ನೀರು ಹರಿಸಿ, ಆ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಒಂದು ಸ್ವತಂತ್ರ ಏಜೆನ್ಸಿಯ ಪ್ರಯೋಗಾಲಯದಲ್ಲಿ ನಡೆಸಿ, ಅವುಗಳ ವರದಿಯನ್ನು ಸಲ್ಲಿಸಲಾಗಿದೆ. ಆ ಪ್ರಕಾರ ನೀರಿನ ಗುಣಮಟ್ಟ ತೃಪ್ತಿಕರವಾಗಿದೆ ”ಎಂದರು.

ಆದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲರು ಪರಿಸರ ಸಂರಕ್ಷಣಾ ನಿಯಮ 1986 ಶೆಡ್ನೂಲ್‌ 6 ಪಾರ್ಟ್‌ “ಎ’ ಪ್ರಕಾರ 36 ಮಾನದಂಡಗಳ ಬಗ್ಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕಿತ್ತು. ಆದರೆ ಕೇವಲ ಏಳು ಮಾನದಂಡಗಳ ಬಗ್ಗೆ ಪರೀಕ್ಷೆ ನಡೆಸಿದೆ ಎಂದರು. ಇದಕ್ಕೆ ಲಿಖೀತ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಪೀಠ ಸೂಚಿಸಿತು.

Advertisement

Udayavani is now on Telegram. Click here to join our channel and stay updated with the latest news.

Next