Advertisement
ತುರುಸುಗೊಂಡ ನಾಮಪತ್ರ ಸಲ್ಲಿಕೆನರೇಗಲ್ಲ: ಸ್ಥಳೀಯ ಚುನಾವಣೆಗೆ ಗುರುವಾರ 35 ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿ 5 ದಿನಗಳು ಕಳೆದಿದ್ದರೂ ಬುಧವಾರ ಕೇವಲ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಆದರೆ, ಗುರುವಾರ 35 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಚುಣಾವಣಾ ಕಣ ರಂಗೇರುತ್ತಿದೆ.
ಗಜೇಂದ್ರಗಡ: ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ಹಂತ ತಲುಪಿದೆ. ಆದರೆ ಪಟ್ಟಣದ ಕೆಲ ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆ ಪಕ್ಷಗಳ ವರಿಷ್ಠರಿಗೆ ಕಗ್ಗಂಟಾಗಿದೆ. ಆದರೆ ಕೆಲ ವಾರ್ಡ್‌ಗಳ ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐಎಂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಹೊರತು ಇನ್ನು ಕೆಲ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲದ ಗೂಡಾಗಿದೆ. ಗುರುವಾರ ಬಿಜೆಪಿಯಿಂದ 8, ಕಾಂಗ್ರೆಸ್ 4, ಸಿಪಿಐಎಂ 5, ಪಕ್ಷೇತರ 1 ಸೇರಿ ಒಟ್ಟು 17 ಜನ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ್ದು, ಚುನಾವಣಾ ಕಣ ರಂಗೇರುವಂತೆ ಮಾಡಿತು.
Related Articles
ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯತಿಗೆ ಆ.29ರಂದು ಚುನಾವಣೆ ನಿಗದಿಯಾಗಿದ್ದು, ಗುರುವಾರ ಒಟ್ಟು 20 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಕಾಂಗ್ರೆಸ್ ಪಕ್ಷದಿಂದ 18 ಹಾಗೂ ಪಕ್ಷೇತರರಾಗಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಒಟ್ಟು 19 ವಾರ್ಡ್‌ಗಳಲ್ಲಿ ಇಂದಿನಿಂದ ನಾಮಪತ್ರ ಸಲ್ಲಿಕೆಯಾಗುತ್ತಿದ್ದು, ಆ.17 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಅಭ್ಯರ್ಥಿಗಳು ವಾದ್ಯಮೇಳಗಳ ಮೆರವಣಿಗೆ ಮೂಲಕ ಶಾಸಕ ಎಚ್.ಕೆ. ಪಾಟೀಲ ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಾದ ಕೆ.ವಿ. ಪಾಟೀಲ, ಎಚ್.ಎಂ. ಖಾನ ಹಾಗೂ ಇತರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟಿನಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿದೆ.
Advertisement
ನಾಮಪತ್ರ ಸಲ್ಲಿಕೆರೋಣ: ಪಟ್ಟಣದ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಜೋರಾಗಿದ್ದು, ಗುರುವಾರ ವಿವಿಧ ವಾರ್ಡ್‌ಗೆ ಕೆಲವರು ಉಮೇದುವಾರಿಕೆ ಸಲ್ಲಿಸಿದರು. ಇಲ್ಲಿಯವರೆಗೆ 32 ಜನ ಅಭ್ಯರ್ಥಿಗಳು 1ರಿಂದ 11ನೇ ವಾರ್ಡ್‌ಗೆ ಚುನಾವಣಾಧಿಕಾರಿ ಎನ್.ನಂಜುಡಯ್ಯ ಮತ್ತು 12ರಿಂದ 23ನೇ ವಾರ್ಡ್ ಗೆ ಚುನಾವಣಾಧಿ ಕಾರಿ ಡಾ| ಶಿವರಾಜ ಕುಲಕರ್ಣಿ ಅವರಿಗೆ ನಾಮಪತ್ರ ಸಲ್ಲಿಸಿದರು. ಶಿರಹಟ್ಟಿ ಪಪಂ ಚುನಾವಣೆಗೆ ಒಟ್ಟು 17 ನಾಮಪತ್ರ ಸಲ್ಲಿಕೆಯಾಗಿದೆ.