ನವದೆಹಲಿ: ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು 2 ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶ (ಆರ್‌ಎಫ್ಪಿ) ನೀಡಿದೆ.
ಒಟ್ಟು 40 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಒಂದು ತಿಂಗಳ ಹಿಂದಷ್ಟೇ ಈ ಬಗ್ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.
ವ್ಯೂಹಾತ್ಮಕ ಸಹಭಾಗಿತ್ವದಲ್ಲಿ ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ. ಮಡ್‌ಗಾಂವ್ ಹಡಗು ನಿರ್ಮಾಣ ಕಟ್ಟೆ (ಎಂಡಿಎಲ್) ಮತ್ತು ಲಾರ್ಸನ್ ಮತ್ತು ಟೂಬ್ರೋ(ಎಲ್ ಆ್ಯಂಡ್ ಟಿ)ಗಳಿಗೆ ಆರ್‌ಎಫ್ಪಿ ನೀಡಲಾಗಿದೆ.
ಎರಡೂ ಸಂಸ್ಥೆಗಳು ಈಗಾಗಲೇ ಕೇಂದ್ರ ಸರ್ಕಾರದ ಆಯ್ಕೆ ಪಟ್ಟಿಯಲ್ಲಿರುವ ಐದು ವಿದೇಶಿ ಕಂಪನಿಗಳ ಜತೆಗೂಡಿ ಸಬ್‌ಮರೀನ್ ನಿರ್ಮಿಸಲಿವೆ.
ಇದನ್ನೂ ಓದಿ :ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಬಿಜೆಪಿಗೆ ಪಾಠ : ಮುರುಘಾಮಠ ಶ್ರೀ