Advertisement
ಹೌದು, ನೀವು ಇಟಲಿ ದೇಶದ ಪ್ರಜೆಯಾಗಿದ್ದರೆ ಆ ದೇಶದ ಭಾಷೆಯನ್ನೇ ಬಳಸಬೇಕೆ ಹೊರತು, ಇಂಗ್ಲಿಷ್ ಮಾತನಾಡಬಾರದು. ಯಾಕೆ ಎಂದರೆ ಇಟಲಿ ದೇಶ ಇಂಗ್ಲಿಷ್ ಭಾಷೆಯನ್ನು ನಿರ್ಬಂಧಿ ಸಿದೆ. ಇಟಲಿಯ ಸರಕಾರ ಅಲ್ಲಿನ ಆಡಳಿತ ಹಾಗೂ ಜನಜೀವನದಲ್ಲಿ ದೇಶದ ಭಾಷೆಯನ್ನೇ ಮಾತನಾಡಬೇಕು ಹೊರತು ಇಂಗ್ಲಿಷ್ ಭಾಷೆಯನ್ನು ಬಳಸಬಾರದು ಎಂಬ ನೀತಿಯನ್ನು ಜಾರಿಗೆ ತಂದಿದೆ.
ಇಂಗ್ಲಿಷ್ ಭಾಷೆ ಬಳಕೆಯ ಮೇಲೆ ಇಟಲಿ ಸರಕಾರ ದಂಡವನ್ನು ಹೇರಲು ನಿರ್ಧರಿಸಿದೆ. ಒಂದು ವೇಳೆ ಯಾರಾದರೂ ತಿಳಿದೋ ತಿಳಿಯ ದೆಯೋ ಇಂಗ್ಲಿಷ್ ಪದಬಳಕೆ ಮಾಡಿದರೆ 82 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ. ಆಡಳಿತದಲ್ಲಿರು ವವರು ಇಟಲಿ ಭಾಷೆಯನ್ನು ಓದಲು, ಬರೆ ಯಲು ಕಡ್ಡಾಯವಾಗಿ ತಿಳಿದಿರಬೇಕು. ಜತೆಗೆ ಇಲಾಖೆ, ಖಾತೆಗಳ ಹೆಸರಿನಲ್ಲೂ ಇಟಾಲಿಯನ್ ಭಾಷೆಯನ್ನೇ ಬಳಸಬೇಕು ಎಂದು ನೀತಿಯಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಲಾಗಿದೆ. ಇತರ ದೇಶಗಳಲ್ಲೂ ಇದೆ ಇಂಗ್ಲಿಷ್‌ಗೆ ನಿರ್ಬಂಧ
ಕೇವಲ ಇಟಲಿ ಮಾತ್ರವಲ್ಲ, 2018ರಲ್ಲಿ ಇರಾನ್ ತನ್ನ ಶಾಲೆಗಳಲ್ಲಿ ಇಂಗ್ಲಿಷ್‌ನ್ನು ನಿಷೇಧಿಸಿದೆ. ಚಿಕ್ಕ ವಯಸ್ಸಿನಲ್ಲೇ ಪಾಶ್ಚಾತ್ಯ ಸಂಸ್ಕೃತಿಗೆ ಮಕ್ಕಳು ಮರುಳಾಗುತ್ತಾರೆ ಎಂಬ ಭಯದಿಂದ ಇರಾನ್ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಭಾಷೆ ಯನ್ನು ಕಲಿಸುವುದಿಲ್ಲ. ಇರಾನ್ ಜತೆಗೆ ಚೀನವೂ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಕಲಿಸುವುದನ್ನು ವಿರೋಧಿಸಿದೆ. ಅದಲ್ಲದೇ ಚೀನ ವಿದೇಶಿ ಪಠ್ಯ ಪುಸ್ತಕಗಳನ್ನು ದೇಶದಲ್ಲಿ ನಿಷೇಧಿಸಿದೆ. ದೇಶದ ಸಂಸ್ಕೃತಿಯನ್ನು ಕಲಿಯಲು ಇಂಗ್ಲಿಷ್ ಕಲಿಕೆ ಅಡ್ಡಿ ಯಾಗುತ್ತದೆ ಎನ್ನುವ ಕಾರಣದಿಂದ ಚೀನ ಈ ನಿರ್ಧಾರವನ್ನು ಕೈಗೊಂಡಿತ್ತು. ಮಕ್ಕಳನ್ನು ಪಾಶ್ಚಾತ್ಯ ಸಂಸ್ಕೃತಿಯಿಂದ ದೂರವಿರಿಸುವ ಮೂಲಕ ಅವರಲ್ಲಿ ದೇಶೀಯತೆಯ ಭಾವವನ್ನು ಉದ್ದೀಪನಗೊಳಿಸುವ ಇರಾದೆ ಇಲ್ಲಿನ ಸರಕಾರಗಳದ್ದಾಗಿದೆ.
Related Articles
ಇಂಗ್ಲಿಷ್ ಜತೆಗೆ ಇತರ ವಿದೇಶಿ ಭಾಷೆಗಳ ಮೇಲೂ ಇಟಲಿ ನಿಷೇಧ ಹೇರಿದೆ. ಆದರೆ ಇಂಗ್ಲಿಷ್ ಭಾಷೆಯ ಬಳಕೆಯೂ ಇಟಲಿ ದೇಶದ ಭಾಷೆಯ ಬಳಕೆಯ ಮೇಲೆ ಅತಿಯಾದ ಪರಿಣಾಮ ಬೀರುತ್ತಿರುವುದರಿಂದ ಅದನ್ನೇ ಗುರಿಯಾಗಿರಿಸಿಕೊಂಡು ಈ ನೀತಿಯನ್ನು ಜಾರಿಗೊಳಿಸಿದೆ. ಯುರೋಪ್ ಒಕ್ಕೂಟದಿಂದ ಯುಕೆ ಹೊರಹೋದ ಅನಂತರ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಂಗ್ಲೋಮೇನಿಯಾದ ಪ್ರಭಾವವನ್ನು ಕಡಿಮೆ ಮಾಡುವುದು ಇಟಲಿಯ ಪ್ರಯತ್ನ. ಆಂಗ್ಲೋಮೇನಿಯಾ ಎಂದರೆ ಆಂಗ್ಲ ಭಾಷೆ ಮತ್ತವರ ಜೀವನ ಕ್ರಮವನ್ನು ಅತಿಯಾಗಿ ಅಳವಡಿಸಿಕೊಳ್ಳುವುದು.
Advertisement