Advertisement

ಭೂಕಂಪ ಸಂತ್ರಸ್ತ ಗ್ರಾಮಕ್ಕೆ ಸುಭಾಷ ರಾಠೊಡ ಭೇಟಿ

02:47 PM Sep 03, 2022 | Team Udayavani |

ಚಿಂಚೋಳಿ: ಭೂಕಂಪ ಪೀಡಿತ ಗ್ರಾಮಗಳಿಗೆ ಕಾಂಗ್ರೆಸ್‌ ಮುಖಂಡ ಸುಭಾಷ ರಾಠೊಡ ಭೇಟಿ ನೀಡಿ ಜನರಲ್ಲಿ ಧೈರ್ಯ ತುಂಬಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಕಂಪನ ಉಂಟಾಗಿರುವ ಇಂದ್ರಪಾಡ ಹೊಸಳ್ಳಿ, ದಸ್ತಾಪುರ, ಚಿಮ್ಮಾ ಇದಲಾಯಿ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಧೈರ್ಯ ತುಂಬಿದ್ದೇನೆ. ಕೆಲವು ಹಳ್ಳಿಗಳಲ್ಲಿ ಭೂಮಿಯಿಂದ ಹೊರಡುವ ಶಬ್ದ ಹಾಗೂ ಕಂಪನಕ್ಕೆ ಹೆದರಿ ಜನರು ತಮ್ಮ ಮನೆಯ ಅಂಗಳದಲ್ಲಿ ಮಲಗುತ್ತಿದ್ದಾರೆ. ಕೆಲವರು ಊರನ್ನೇ ಬಿಟ್ಟಿದ್ದಾರೆ ಎಂದು ಹೇಳಿದರು.

ಸರ್ಕಾರ ಕೂಡಲೇ ಸಮಸ್ಯೆಗೆ ಸ್ಪಂದಿಸಿ ಎಲ್ಲ ಮನೆ ಅಂಗಳದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಈ ಭಾಗದಲ್ಲಿ ಭೂಕಂಪ ಮಾಪನ ಕೇಂದ್ರ ಸ್ಥಾಪಿಸಬೇಕು. ಈ ಕುರಿತು ಜಿಲ್ಲಾಡಳಿತ, ತಾಲೂಕಾಡಳಿತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಬಸವರಾಜ ಮಾಲಿ, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವಕ್ತಾರ ಶರಣು ಪಾಟೀಲ, ಪುರಸಭೆ ಮಾಜಿ ಉಪಾಧ್ಯಕ್ಷ ಸಯ್ಯದ್‌ ಶಬ್ಬೀರ್‌, ಪುರಸಭೆ ಸದಸ್ಯರಾದ ಜಗನ್ನಾಥ ಗುತ್ತೇದಾರ, ಅನ್ವರ್‌ ಖತೀಬ್‌, ಸುರೇಶ ಭಂಟಾ, ನಾಗೇಶ ಗುಣಾಜಿ ಸಂತೋಷ ಗುತ್ತೇದಾರ, ಮಲ್ಲಿಕಾರ್ಜುನ ಕೋಟಪಲ್ಲಿ, ಸುಂದರ ನಿರಾಳಕರ್‌, ರಾಜಶೇಖರ್‌ ಪಾಟೀಲ, ರೇವಣಸಿದ್ಧಪ್ಪ ಪೂಜಾರಿ, ಸಯ್ಯದ್‌ ಮಾಜೀದ್‌ ಪಾಟೀಲ, ಅಕºರ್‌ ಪಟೇಲ್‌, ನವಾಜ್‌ ಪಟೇಲ್‌, ರಮೇಶ ವಾರ್ಕರ್‌, ರಸೂಲ್‌ ಪಟೇಲ್‌, ಯಲ್ಲಾಲಿಂಗ ಕಮಲಾಕರ್‌, ಮಹಮ್ಮದ್‌ ಇಸಾ, ಖಾಜಾ ಪಟೇಲ್‌, ಸುನೀಲ ತ್ರಿಪಾಟಿ, ಸಿದ್ಧು ಪೂಜಾರಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next