Advertisement
“ಕ್ರಾಂತಿಯ ಕಿಡಿ’ ಖ್ಯಾತಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂಬ ಬಂಗಾಲದ ಮನುಷ್ಯನಿಗೂ ಕರುನಾ ಡಿಗೂ ಒಂದು ವಿಸ್ಮಯಕಾರಿ ನಂಟಿದೆ. ಅದು ಕೇವಲ ನಂಟಲ್ಲ; ಚಾರಿತ್ರಿಕ ಮೈಲಿಗಲ್ಲು. ಇಂದು ನೇತಾಜಿ ಜಗತ್ತಿನ ಮುಂದೆ ಮೇರುವ್ಯಕ್ತಿಯಂತೆ ತೋರುತ್ತಿ ದ್ದರೆ, ಇದಕ್ಕೆ ಕರುನಾಡು ಅಂದು ತೋರಿದ ಪ್ರೀತಿ, ಬೆಂಬಲವೂ ಮುಖ್ಯ ಕಾರಣ. ಒಂದು ವೇಳೆ ಕರ್ನಾಟಕ ಅಂದು ಸುಭಾಷ್‌ಚಂದ್ರ ಬೋಸರ ಜತೆ ನಿಲ್ಲದೆ ಇರುತ್ತಿದ್ದರೆ, ನೇತಾಜಿಯ ರಾಜಕೀಯ ಭವಿಷ್ಯವೇ ಮಸುಕಾಗುತ್ತಿತ್ತೇನೋ!
Related Articles
Advertisement
ಭಾರತಕ್ಕೆ ಬದಲಾದ ನಾಯಕತ್ವದ ಆವಶ್ಯಕತೆ ಮನಗಂಡ ಹೊಸಮನಿ ಅವರು ನೇತಾಜಿಯ ಪರವಾಗಿ ಪ್ರಚಾರ ಆರಂಭಿಸಿದರು. ಆದರೆ, ಇನ್ನೊಂದು ದಿಕ್ಕಿನಲ್ಲಿ ಮಹಾತ್ಮಾಗಾಂಧೀಜಿ ಅವರಿಂದ ಪ್ರಚಾರ ಬಿರುಸಾಗಿತ್ತು. ಗಾಂಧೀಜಿಯವರ, “ಪಟ್ಟಾಭಿಯ ಗೆಲುವು ನನ್ನ ಗೆಲುವು. ಪಟ್ಟಾಭಿಯ ಸೋಲು, ಅದು ಗಾಂಧೀಜಿಯ ಸೋಲು’ ಎಂಬ ಹೇಳಿಕೆ ಭಾರೀ ಸಂಚಲನ ಮೂಡಿಸಿತು. ಗಾಂಧೀಜಿಯ ಬಳಗದಲ್ಲಿ ಚುನಾ ವಣೆಗೂ ಮುನ್ನವೇ ಸಂಭ್ರಮ ಮನೆಮಾಡಿತ್ತು.
ಕೊನೆಗೂ ಆ ಚುನಾವಣೆ, ಗಾಂಧೀಜಿ ಅವರಿಗೆ ಆಘಾತ ತಂದಿತ್ತು. ಬೋಸ್ ಅವರು 1580 ಮತಗಳನ್ನು ಮತ್ತು ಪಟ್ಟಾಭಿ ಸೀತಾರಾಮಯ್ಯನವರು 1377 ಮತಗಳನ್ನು ಪಡೆದಿದ್ದರು. ನೇತಾಜಿ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ವೇಳೆ ಇಡೀ ದೇಶದಲ್ಲಿಯೇ ಸುಭಾಷರಿಗೆ ಹೆಚ್ಚು ಮತಗಳನ್ನು ನೀಡಿದ್ದು ಕರ್ನಾಟಕದ ಜನತೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದವರು ಹಾವೇರಿಯ ಸರ್ ಸಿದ್ದಪ್ಪ ಹೊಸಮನಿ! ಮುಂದೆ ಸುಭಾಷ್ ಚಂದ್ರ ಬೋಸರು ಮಧ್ಯಾಂತರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಫಾರ್ವರ್ಡ್ ಬ್ಲಾಕ್ ಪಕ್ಷ ಸ್ಥಾಪಿಸಿದರು. ಫಾರ್ವರ್ಡ್ ಬ್ಲಾಕ್‌ನ ಮುಖವಾಣಿ ಪತ್ರಿಕೆಯಲ್ಲಿ ಅಂದು ಸುಭಾಷರು ಹೀಗೆ ಬರೆದಿದ್ದರು: “ನಾನು ಸರ್ ಸಿದ್ದಪ್ಪ ಹೊಸಮನಿ ಅವರಿಂದ ಪ್ರೇರಿತಗೊಂಡವನು. ಅವರ ನಿಷ್ಕಲ್ಮಷ, ನಿಷ್ಠುರವಾದಿತನ ನನಗೆ ಆದರ್ಶ. ನಾನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಹೊಸಮನಿ ಕೂಡ ಒಬ್ಬರು’ ಎಂದು ಬಣ್ಣಿಸಿದ್ದರು.
ಇಂದು ಹಾವೇರಿ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಒಂದು ಹೊಂಬಣ್ಣದ ಪ್ರತಿಮೆ ಕಾಣಸಿಗುತ್ತದೆ. ಅದೇ ಸರ್ ಸಿದ್ದಪ್ಪ ಹೊಸಮನಿ ಅವರ ಪ್ರತಿಮೆ. ಆದರೆ, ಸಿದ್ದಪ್ಪ ಹೊಸಮನಿಯವರ ಮೇರು ವ್ಯಕ್ತಿತ್ವದ ಮುಂದೆ ಆ ಮೂರ್ತಿ ಬಹಳ ಕುಬjವಾದಂತೆ ತೋರುತ್ತಿದೆ.
ಹಿಟ್ಲರನ ನೆಲದಲ್ಲಿ ಕನ್ನಡಿಗಶಿಂಧೆ ತಾಲೀಮು
1936ರ ಸುಮಾರು. ಬೆಳಗಾವಿಯ ಮೈದಾನದಲ್ಲಿ ತರುಣ ರಾಮಚಂದ್ರ ಭಿಕಾಜಿ ಶಿಂಧೆ ಹಾಕಿ ಸ್ಟಿಕ್ ಹಿಡಿದು ಮಿಂಚಿನ ವೇಗದಲ್ಲಿ ಗೋಲ್ ಬಾರಿಸುತ್ತಿದ್ದ. ಶಿಂಧೆಯ ಆಟ, ಚುರುಕುತನ ಕಂಡ ಬ್ರಿಟಿಷ್ ಅಧಿಕಾರಿಯೊಬ್ಬ ಈತನನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿದ. ಸೆಕೆಂಡ್ ಮರಾಠಾ ಲೈಟ್ ಇನ್‌ಫೆಂಟ್ರಿ ಸೇರಿಕೊಂಡ ಶಿಂಧೆ ಕೆಲವೇ ವರ್ಷಗಳಲ್ಲಿ 2ನೇ ಮಹಾಯುದ್ಧದ ದಿನಗಳನ್ನು ಕಂಡರು. ಬ್ರಿಟಿಷರ ಪರವಾಗಿ ಬಂದೂಕು ಹಿಡಿದರು.
ಅದು 1942ರ ಜೂನ್ 20. ಶಿಂಧೆ ಇದ್ದ ಸೇನಾ ತುಕಡಿ ಸಾಕಷ್ಟು ಪರಾಕ್ರಮ ನಡೆಸಿಯೂ, ಜರ್ಮನ್ ಸೈನ್ಯದ ಮುಂದೆ ಸೋಲೊಪ್ಪಬೇಕಾಯಿತು. ಹಿಟ್ಲರ್ ಕಡೆಯವರು ಇವರೆಲ್ಲರನ್ನು ಸೆರೆಹಿಡಿದು, ಯುದ್ಧ ಕೈದಿಯಾಗಿ ಹ್ಯಾಂಬರ್ಗ್ ರೆಡ್ ಕ್ಯಾಂಪ್‌ನ ಕಾರಾಗೃಹಕ್ಕೆ ತಳ್ಳಿದರು. ಅದೇ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ಶ್ರಮಿಸುತ್ತಿದ್ದ ಸುಭಾಷ್ ಚಂದ್ರ ಬೋಸ್, ಜರ್ಮನಿಯಲ್ಲಿದ್ದರು. ಹಿಟ್ಲರ್‌ನನ್ನು ಭೇಟಿ ಮಾಡಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ರಣತಂತ್ರ ರೂಪಿಸುತ್ತಿದ್ದರು. 1944ರ ಒಂದು ದಿನ.. ನೇತಾಜಿ, ಶಿಂಧೆ ಇದ್ದ ಕ್ಯಾಂಪ್‌ಗ್ೂ ಬಂದರು. “ಬ್ರಿಟಿಷರಿಗಾಗಿ ಹೋರಾಡುವುದನ್ನು ನಿಲ್ಲಿಸಿ, ಇಂಡಿಯನ್ ನ್ಯಾಶನಲ್ ಆರ್ಮಿಗೆ (ಐಎನ್‌ಎ) ಹೆಗಲುಕೊಡಿ. ನೀವು ನನಗೆ ರಕ್ತ ಕೊಟ್ಟರೆ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದು ಕರೆಕೊಟ್ಟರು. ನೇತಾಜಿಯ ಮಾತು ಗಳು ಶಿಂಧೆಗೆ ರೋಮಾಂಚನ ಹುಟ್ಟಿಸಿದವು. ರಣರಂಗದಲ್ಲಿ ಶಿಂಧೆಯ ಸಾಮರ್ಥ್ಯ ಅರಿತಿದ್ದ ನೇತಾಜಿ, ಯುನೈಟೆಡ್ ಆಫೀಸರ್ ಹುದ್ದೆ ನೀಡಿದ್ದರು. ಶಿಂಧೆ ಸೇರಿದಂತೆ 2,500 ಭಾರತೀಯ ಸೈನಿಕರು ಜರ್ಮನಿಯಲ್ಲಿ ಹಗಲುರಾತ್ರಿ ಕಠಿನ ತರಬೇತಿ ನಡೆಸುತ್ತಿದ್ದರು. ನೇತಾಜಿ ಮುಂದಿನ ಕಾರ್ಯತಂತ್ರಕ್ಕಾಗಿ ಜಪಾನ್‌ನತ್ತ ಸಾಗಿದರು. ನೇತಾಜಿ ಅವರ ಒಂದೇ ಒಂದು ಕರೆಗೆ ಇವರೆಲ್ಲ ಕಾಯುತ್ತಿದ್ದರು. ಅಷ್ಟರಲ್ಲೇ ಇತ್ತ ಹಿಟ್ಲರ್ ಮಡಿದ. ಜರ್ಮನಿಯಲ್ಲಿದ್ದ ಭಾರತೀಯ ಸೈನಿಕರನ್ನು ಅಮೆರಿಕನ್ ಪಡೆಗಳು ಕೊಲ್ಲತೊಡಗಿದವು. ಐಎನ್‌ಎಯ ಇತರ ಸೈನಿಕರು ದಿಕ್ಕಾಪಾಲಾದರು. ದೇವರು ದೊಡ್ಡವನು.. ಶಿಂಧೆ ಮತ್ತು ಕೆಲವರು ಹೇಗೋ ಕಣ್ತಪ್ಪಿಸಿಕೊಂಡು ಹಡಗನ್ನೇರಿ ಮುಂಬಯಿಗೆ ಬಂದರು. ಶಿಂಧೆ ಬೆಳಗಾವಿ ಮನೆಗೆ ಸೇರಿದ ಕೆಲವೇ ತಿಂಗಳಲ್ಲಿ “ವಿಮಾನ ಅಪಘಾತದಿಂದ ಸುಭಾಷ್ ಚಂದ್ರ ಬೋಸ್ ಇನ್ನಿಲ್ಲ’ ಎಂಬ ಸುದ್ದಿ ಬೆನ್ನ ಹಿಂದೆಯೇ ಬಂದಪ್ಪಳಿಸಿತ್ತು. -ಮಹೇಶ ನೀ. ಚನ್ನಂಗಿ