ಚಾಮರಾಜನಗರ: ದೇಶ ಭಕ್ತರಾದ ನೇತಾಜಿ ಎಂದೇ ಪ್ರಸಿದ್ಧಿ ಪಡೆದ ಸುಭಾಷ್ ಚಂದ್ರ ಬೋಸ್‌ಅವರ 125ನೇ ಜನ್ಮ ದಿನದಂದು ನಾವೆಲ್ಲದೇಶಕ್ಕಾಗಿ ದುಡಿಯುವ ಬದ್ಧತೆ ಬೆಳೆಸಿಕೊಳ್ಳಬೇಕುಎಂದು ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹೇಳಿದರು.
ನಗರದ ಜೈಹಿಂದ್ ಪ್ರತಿಷ್ಠಾನದ ವತಿಯಿಂದಶಂಕರಪುರದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನ ಹಾಗೂ ಪರಾಕ್ರಮ ದಿನಉದ್ಘಾಟಿಸಿ ಮಾತನಾಡಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರುಭಾರತ ರಾಷ್ಟ್ರೀಯ ಸೈನ್ಯವನ್ನು ಕಟ್ಟಿ ನೀವು ನಿಮ್ಮರಕ್ತವನ್ನು ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂಬ ಘರ್ಜನೆ ಮೂಲಕ ಯುವಮನಸ್ಸುಗಳ ಮೇಲೆ ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮಮೂಡಿಸಿದರು ಎಂದು ತಿಳಿಸಿದರು.
ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಋಗ್ವೇದಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧೀಜಿಯವರ ಹೋರಾಟಒಂದು ಕಡೆಯಾದರೆ ನೇತಾಜಿಯವರ ಹೋರಾಟಮತ್ತೂಂದು ದಿಕ್ಕಿನಲ್ಲಿ ಸಾಗಿ ಬ್ರಿಟಿಷರ ವಿರುದ್ಧಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡುವ ದಿಕ್ಕಿನಲ್ಲಿ ಕೊನೆಯಾಯಿತು. ಇನ್ನುದೆಹಲಿಯ ಇಂಡಿಯಾಗೇಟ್ ನಲ್ಲಿ ನೇತಾಜಿಅವರ ಬೃಹತ್ ಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿಬಿ.ಕೆ.ದಾನೇಶ್ವರಿ ಮಾತನಾಡಿದರು. ಕುಸುಮಾಋಗ್ವೇದಿ, ಪ್ರೌಢಶಾಲಾ ಶಿಕ್ಷಕರಾದ ಸವಿತಾ,ಅಕ್ಕಮಹಾದೇವಿ ಮಹಿಳಾ ಸಂಘದ ವತ್ಸಲಾರಾಜಗೋಪಾಲ್, ಬಿ.ಕೆ.ಆರಾಧ್ಯ, ಶ್ರೀನಿವಾಸ್‌ಭಾಗ್ಯಶ್ರೀ, ರವಿ ಮಾಲಾ, ಝಾನ್ಸಿ ಮಕ್ಕಳ ಪರಿಷತ್‌ನ ಶ್ರಾವ್ಯಾ ಋಗ್ವೇದಿ ಸಾನಿಕಾ ವೈಭವಿ ಇದ್ದರು.