Advertisement

ರಾಜ್ಯದಲ್ಲಿ ಕೋಮು ಸೌಹಾರ್ದತೆ ನೆಲೆಸಲಿ: ಮಂತ್ರಾಲಯದ ಸುಭುಧೇಂದ್ರ ಶ್ರೀಗಳು

10:00 PM Apr 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋಮು ಸೌಹಾರ್ದತೆ ನೆಲೆಸಲಿ,  ಹಿಂದುಗಳ ಜೊತೆಗೆ ಎಲ್ಲರಿಗೂ ಈ ದೇಶ ಅವಕಾಶ ಮಾಡಿಕೊಟ್ಟಿದೆ ಧರ್ಮ ಧರ್ಮಗಳ ನಡುವೆ ಕಚ್ಚಾಟ ಬೇಡ ಎಂದು ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಬೆಂಗಳೂರಿನ ಮಂತ್ರಾಲಯ ಮಠದಲ್ಲಿ ತಮ್ಮನ್ನು ಸಿಎಂ ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ಮುಖ್ಯವಾಗಿ ಕೋಮು ಸೌಹಾರ್ದತೆ ನೆಲೆ ಗೊಳ್ಳಬೇಕು. ಕರ್ನಾಟಕ ಶಾಂತಿಯ ಹೂ ದೋಟ ಇಲ್ಲಿಂದಲೇ ಶಾಂತಿ ಆರಂಭ ಆಗಬೇಕು. ನಮ್ಮ ಮನುಕುಲ ಉಳಿಯಬೇಕು ಅದಕ್ಕೆ ಮೊದಲ ಆದ್ಯತೆ. ಕೋವಿಡ್‌ ನಂತಹ ಸಂಕಷ್ಟದ ಸಂಧರ್ಭದಲ್ಲಿ ಹೀಗೆಲ್ಲಾ ಕೋಮು ಗಲಭೆ ಆಗಬಾರದು. ಎಲ್ಲರೂ ಸೌಹಾರ್ದಯುತವಾಗಿ ಬಾಳಬೇಕು ಎಂದರು.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂತ್ರಾಲಯಕ್ಕೆ ಬರಲು ಆಗಿರಲಿಲ್ಲ. ಇವತ್ತು ಬಂದಿದ್ದಾರೆ ಸಿಎಂ ನಮ್ಮ ಹಾವೇರಿ ಜಿಲ್ಲೆಯವರು. ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಧಾರ್ಮಿಕ ಸಂಘಟನೆ, ಆರೋಗ್ಯ ಬಗ್ಗೆ ಮಾತಾಡಿದ್ದೇವೆ. ಮಂತ್ರಾಲಯದಲ್ಲಿ 5 ಕೋಟಿಯ ಅನ್ನದಾಸೋಹಕ್ಕೆ ಕೊಡುಗೆ ಕೇಳಿದ್ದೇವೆ. ಅವರು ಕೂಡ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ  ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next