ಹುಬ್ಬಳ್ಳಿ: ರಾಜ್ಯದ ಎರಡು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ. ಕುಂದಗೋಳದಲ್ಲಿ ಶೇ.82.42, ಚಿಂಚೋಳಿಯಲ್ಲಿ ಶೇ.71 ಮತದಾನವಾಗಿದೆ. ಅಲ್ಲಲ್ಲಿ ಮತಯಂತ್ರಗಳು ಕೈಕೊಟ್ಟ ಉದಾಹರಣೆಗಳನ್ನು ಬಿಟ್ಟರೆ, ಬಹುತೇಕ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ.
ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಡಾ. ಅವಿನಾಶ್ ಜಾಧವ್ ಅವರು, ಬೆಡಸೊರ ತಾಂಡದಲ್ಲಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೊಡ ಅವರು ಶೇರಿತಾಂಡದಲ್ಲಿ ಹಕ್ಕು ಚಲಾಯಿಸಿದರು. ವಿಚಿತ್ರವೆಂದರೆ ಬಿಸಿಲಿನ ತಾಪದಿಂದಾಗಿ 100 ಕ್ಕೂ ಹೆಚ್ಚು ಮತಯಂತ್ರಗಳು ಕೆಟ್ಟುಹೋದ ಘಟನೆಯೂ ನಡೆಯಿತು.
Advertisement
ಅತ್ತ ಕುಂದಗೋಳ ಕ್ಷೇತ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಅದರಗುಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ, ಯರಗುಪ್ಪಿ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಮತದಾನ ಮಾಡಿದರು.