Advertisement

ಉಗ್ಗುವಿಕೆ: ಬೇಡ ಜಿಗುಪ್ಸೆ, ಪಡೆಯಿರಿ ಚಿಕಿತ್ಸೆ

11:40 PM Dec 03, 2022 | Team Udayavani |

ಉಗ್ಗುವಿಕೆಯು ಶಬ್ದಗಳು ಉಚ್ಛಾರಾಂಶಗಳು ಅಥವಾ ಪದಗಳ ಪುನರಾವರ್ತನೆಯನ್ನು ಒಳಗೊಂಡಂತಹ ಮಾತಿನ ತೊಂದರೆಯಾಗಿದೆ. ಸಾಮಾನ್ಯವಾಗಿ ಸುಗಮವಾದ ನಿರರ್ಗಳ ಮಾತಿನ ಪ್ರಕ್ರಿಯೆಯಲ್ಲಿ ತಡೆ ಉಂಟಾಗುವುದನ್ನು ಉಗ್ಗುವಿಕೆ ಎನ್ನಬಹುದು. ಲೇಖಕ ವ್ಯಾನ್‌ ರೈಪರ್‌ ಅವರ ಪ್ರಕಾರ, “ಮಾತಿನ ಪ್ರಕ್ರಿಯೆಯಲ್ಲಿ ಯಾಂತ್ರಿಕ ಅಡೆತಡೆಗಳು ಉಂಟಾಗಿ ಸುಗಮವಾಗಿ ಹೊರಬರುವಂತಹ ಮಾತಿಗೆ ಅಡಚಣೆ ಉಂಟಾದಾಗ ಉಗ್ಗುವಿಕೆ ಸಂಭವಿಸುತ್ತದೆ’. ಇದೊಂದು ಸಂಪೂರ್ಣವಾದ ಮಾತಿನ ತೊಂದರೆ ಆಗಿದೆ. ಭಾಷಾ ಸಾಮರ್ಥ್ಯದ ಮೇಲೆ ಈ ತೊಂದರೆಯು ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ.

Advertisement

ಉಗ್ಗುವಿಕೆಯ ಗುಣಲಕ್ಷಣಗಳು
ಉಗ್ಗುವಿಕೆಯ ಆರಂಭದ ಹಂತದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ 3 ಲಕ್ಷಣಗಳು
1. ಪುನರುತ್ಛರಿಸುವಿಕೆ
ಪದಗಳ ಪ್ರಾರಂಭದ ಅಕ್ಷರವನ್ನು 3-4 ಬಾರಿ ಉತ್ಛರಿಸುವುದು.
ಉದಾಹರಣೆ: ಕ ಕ ಕ ಕಪ್ಪು

2. ಅಕ್ಷರಗಳನ್ನು ಸುದೀರ್ಘ‌ವಾಗಿ ಉತ್ಛರಿಸುವುದು
ಕೆಲವು ಶಬ್ದಗಳನ್ನು ಅಥವಾ ಉಚ್ಛಾರಾಂಶಗಳನ್ನು ಎಳೆದು ಮಾತನಾಡುವುದು
ಉದಾಹರಣೆ: ಸೂ…………ಪ್‌

3. ಸ್ತಬ್ಧತೆ

ಮಾತಿನ ಪ್ರಕ್ರಿಯೆಗೆ ಅಗತ್ಯವಿರುವ ಗಾಳಿಯ ಸಂಚಾರ ಕುಂಠಿತವಾಗಿ ಸರಾಗವಾಗಿ

Advertisement

ಕಾರಣಗಳು
ಈ ವಿಷಯದ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿದ್ದರೂ ನಡೆಯುತ್ತಿದ್ದರೂ ನಿಖರವಾಗಿ ಇಂಥದ್ದೇ ಕಾರಣದಿಂದ ಉಗ್ಗುವಿಕೆ ಬರಬಹುದು ಎಂದು ತೀರ್ಮಾನಿಸುವುದು ಕಷ್ಟಸಾಧ್ಯ. ವೈಜ್ಞಾನಿಕವಾಗಿ ನೋಡುವುದಾದರೆ ಹಲವಾರು ಕಾರಣಗಳಿಂದ ಉಗ್ಗುವಿಕೆ ಉಂಟಾಬಹುದು.

ಬಹುಕ್ರಿಯಾತ್ಮಕ ಆನುವಂಶೀಯತೆ
ಅಂದರೆ ವಂಶಪಾರಂಪರ್ಯವಾಗಿ ಬಂದಿರುವಂತಹ ಕಾರಣಗಳು. ವಂಶವಾಹಿಗಳ ಮೂಲಕ ಕುಟುಂಬದಲ್ಲಿ ಬೇರೆ ಯಾರಿಗೋ ಉಗ್ಗುವಿಕೆ ಇದ್ದರೆ ಅದು ಕೂಡ ಒಂದು ಕಾರಣವಾಗಬಲ್ಲುದು.

ವಾತಾವರಣದ ಅಂಶಗಳು
ಟಿವಿಯಲ್ಲಿ ನೋಡಿ ಅಥವಾ ಯಾರನ್ನೋ ಅನುಕರಿಸಲೆಂದು ಮೋಜಿಗಾಗಿ ಆರಂಭಿಸಿ ಮತ್ತೆ ಅದೇ ಹವ್ಯಾಸವಾಗಬಹುದು. ಮನೆಯಲ್ಲಿ ಅಣ್ಣ /ತಮ್ಮನನ್ನು ಅನುಕರಿಸಲು ಹೊರಟು ಅದುವೇ ರೂಢಿಯಾಗಬಹುದು. ಮನೆಯ ವಾತಾವರಣ, ಬೇರೆಯವರೊಂದಿಗೆ ನಡೆದುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಾದರೂ ಕೂಡ ಉಗ್ಗುವಿಕೆ ಬರಬಹುದು.

ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ಮಾಸ ಅಕ್ಟೋಬರ್‌
ಕನ್ನಡದಲ್ಲಿ ಈ ತೊಂದರೆಯನ್ನು ಉಗ್ಗುವಿಕೆ ಅಥವಾ ತೊದಲುವಿಕೆಯೆಂದು ಕರೆಯುತ್ತಾರೆ. ಉಗ್ಗುವಿಕೆಗೆ ತೊದಲುವಿಕೆ ಎಂಬ ಪದವನ್ನು ಕೂಡ ಪರ್ಯಾಯವಾಗಿ ಬಳಸಲಾಗುತ್ತದೆ. ಆದರೆ ವಿವರಣೆಯ ಮೂಲಕ ನೋಡುವುದಾದರೆ ತೊದಲುವಿಕೆ ಎಂದರೆ ಉತ್ಛರಣೆಯ ದೋಷ; ಉಗ್ಗುವಿಕೆ ಎಂದರೆ ಸರಾಗವಾದ ಮಾತಿನ ಪ್ರಕ್ರಿಯೆಯಲ್ಲಿ ಉಂಟಾಗುವ ಅಡಚಣೆಯಾಗಿದೆ. ಆಂಗ್ಲ ಭಾಷೆಯಲ್ಲಿ “ಸ್ಟಟರಿಂಗ್‌’ ಅಥವಾ “ಸ್ಟಾಮರಿಂಗ್‌’ ಎಂದು ಕರೆಯುತ್ತಾರೆ.

ಪ್ರತೀ ವರ್ಷ ಅಕ್ಟೋಬರ್‌ 22ರಂದು ಅಂತಾರಾಷ್ಟ್ರೀಯ ಉಗ್ಗುವಿಕೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. 1998ನೇ ಇಸವಿಯಲ್ಲಿ ಇಂಗ್ಲೆಂಡ್‌ ಮತ್ತು ಐರ್ಲಂಡ್‌ನ‌ಲ್ಲಿ ಪ್ರಪ್ರಥಮವಾಗಿ ಈ ದಿನವನ್ನು ಉಗ್ಗುವಿಕೆ ಜಾಗೃತಿ ದಿನವನ್ನಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಉಗ್ಗುವಿಕೆಯ ಕುರಿತು ಜಾಗೃತಿಯನ್ನು ಮೂಡಿಸುವಂತಹ ಉದ್ದೇಶವನ್ನು ಹೊಂದಿದೆ. ಮಕ್ಕಳಲ್ಲಿ ಅಥವಾ ವಯಸ್ಕರಲ್ಲಿ ಉಗ್ಗುವಿಕೆಯ ತೊಂದರೆ ಇದ್ದರೆ ಅದನ್ನು ಆರಂಭದ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ.

– ಡಾ| ರಾಕೇಶ್‌ ಚೌಕಳ್ಳಿ ವೀರಭದ್ರಪ್ಪ, ಸಹ ಪ್ರಾಧ್ಯಾಪಕರು
– ದೀಪಿಕಾ ಕೆ. ಕ್ಲಿನಿಕಲ್‌ ಸೂಪರ್‌ವೈಸರ್‌ ವಾಕ್‌ ಶ್ರವಣ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next