Advertisement

ಟಿಕ್ ಟಾಕ್ ವಿಡಿಯೋಗಾಗಿ ಕಾರು, ಬೈಕ್ ನಲ್ಲಿ ಸ್ಟಂಟ್: ಯುವಕರು ಅರೆಸ್ಟ್

10:00 AM Dec 25, 2019 | Mithun PG |

ನೋಯ್ಡಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಬೈಕ್ ಬಳಸಿಕೊಂಡು ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ಐವರು ಯುವಕರನ್ನು ಸಾರ್ವಜನಿಕರ ಶಾಂತಿ ಕದಡುತ್ತಿದ್ದ ಆರೋಪದಡಿಯಲ್ಲಿ ಗ್ರೇಟರ್ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

Advertisement

ಯುವಕರೆಲ್ಲರೂ 20 ರಿಂದ 25 ವಯಸ್ಸಿನ ಒಳಗಿರುವವರು. ಭಾನುವಾರ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಮುಂದಿನ ಹೆದ್ದಾರಿಯಲ್ಲಿ ಈ ಐವರು ಕಾರು, ಬೈಕ್ ನಲ್ಲಿ ಸ್ಟಂಟ್ ಮಾಡುತ್ತಾ ಟಿಕ್ ಟಾಕ್ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು.

ಇದರಿಂದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತೀವ್ರತರವಾದ ತೊಂದರೆಯಾಗುತ್ತಿದ್ದವು. ಕೆಲ ನಾಗರಿಕರು ಇದನ್ನು ಕಂಡು ಪೊಲೀಸರಿಗೆ ದೂರು ಕೂಡ ನೀಡಿದ್ದರು.

ಈ ಹಿನ್ನಲೆಯಲ್ಲಿ ಪೊಲೀಸರು ಐವರು ಯುವಕರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next