ಚೆನ್ನೈ: ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಆದ ಅವಘಡದಲ್ಲಿ ಸ್ಟಂಟ್ ಮ್ಯಾನ್ ವೊಬ್ಬ ಕೊನೆಯುಸಿರು ಎಳೆದ ಘಟನೆ ಚೆನ್ನೈನಲ್ಲಿ ನಡೆದಿದೆ.
ಸುರೇಶ್ (54) ಮೃತ ಸ್ಟಂಟ್ ಮ್ಯಾನ್ ಎಂದು ತಿಳಿದು ಬಂದಿದೆ. ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ‘ವಿಡುತಲೈ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ.
ರೈಲು ದುರಂತದ ಚಿತ್ರೀಕರಣವನ್ನು ಮಾಡಲಾಗುತ್ತಿತ್ತು. ಈ ವೇಳೆ ಸುರೇಶ್ ಹಾಗೂ ಇತರ ಸ್ಟಂಟ್ ಮ್ಯಾನ್ ಗಳನ್ನು ಹಗ್ಗದಲ್ಲಿ ಕ್ರೇನ್ ಗೆ ಕಟ್ಟಲಾಗಿತ್ತು. ಅನಿರೀಕ್ಷಿತವಾಗಿ ಕ್ರೇನ್ ನಿಂದ ಹಗ್ಗ ತುಂಡಾಗಿ ಸುರೇಶ್ ಅವರು ಬಿದ್ದಿದ್ದಾರೆ. ಸುಮಾರು 20 ಅಡಿ ಎತ್ತರದಿಂದ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ವರದಿ ತಿಳಿಸಿದೆ.
ʼವಿಡುತಲೈʼ ಚಿತ್ರದಲ್ಲಿ ಸೂರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿಜಯ್ ಸೇತುಪತಿಯೂ ಬಣ್ಣ ಹಚ್ಚಿದ್ದಾರೆ.
Related Articles
ಕೆಲ ವರ್ಷಗಳ ಹಿಂದೆ ʼಇಂಡಿಯನ್-2ʼ ಸಿನಿಮಾದ ಸೆಟ್ ನಲ್ಲೂ ಇದೇ ರೀತಿಯ ಅವಘಡ ಸಂಭವಿಸಿ ಮೂವರು ಮೃತ ಪಟ್ಟಿದ್ದರು.