Advertisement

ಗಣಿತ ಆಸಕ್ತಿಯಿಂದ ಅಧ್ಯಯನ ಮಾಡಿ

03:17 PM Dec 22, 2019 | Suhan S |

ಗಂಗಾವತಿ: ಭಾರತ ವಿಶ್ವಕ್ಕೆ ಗಣಿತ ವಿಷಯದಲ್ಲಿ ಪ್ರಮುಖ ಸ್ಥಾನದಲ್ಲಿದ್ದು ವಿದ್ಯಾರ್ಥಿಗಳು ಗಣಿತ ಭೌತಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ವಿದ್ಯಾಭ್ಯಾಸ ಮಾಡುವ ಮೂಲಕ ಇತರೆ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಂತೆ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಹೇಳಿದರು.ಅವರು ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್‌ ಶಾಲೆಯಲ್ಲಿ ಗಣಿತ ತಜ್ಞ ಶ್ರೀನಿವಾಸ್‌ ರಾಮಾನುಜನ್‌ ಅವರ ಜನ್ಮದಿನದ ಪ್ರಯುಕ್ತ ನಡೆದ ಗಣಿತ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಗಣಿತವು ಹೇಗೆ ಹಾಸುಹೊಕ್ಕಾಗಿದೆ ಎಂದು ಉದಾಹರಣೆಯ ಮೂಲಕ ತಿಳಿಸಿ, ಎಲ್ಲ ವಿದ್ಯಾರ್ಥಿಗಳು ಗಣಿತವನ್ನು ಆಸಕ್ತಿಯಿಂದ ಅಧ್ಯಯನ ಮಾಡಬೇಕೆಂದು ತಿಳಿಸಿದರು.

Advertisement

ಸಂಸ್ಥೆಯ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ಭಾಷೆ ಮತ್ತು ಗಣಿತ ಅತ್ಯಂತ ಅವಶ್ಯಕವಾಗಿವೆ. ಎಲ್ಲರೂ ಗೌರವಯುತವಾದ ಭಾಷೆಯನ್ನು ಮತ್ತು ಗಣಿತದ ಲೆಕ್ಕಾಚಾರಗಳನ್ನು ಬಳಸುವ ಮೂಲಕ ತಮ್ಮ ತಾರ್ಕಿಕ ಆಲೋಚನೆಯನ್ನು ಹೆಚ್ಚಿಸಿಕೊಳ್ಳಬೇಕು. ರಾಮಾನುಜನ್‌ ಅವರ ಜೀವನದ ಸಾಧನೆಗಳನ್ನು ಸ್ಫೂ ರ್ತಿಯಾಗಿ ತೆಗೆದುಕೊಂಡು ಅವರಂತೆ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದರು. ವಸ್ತು ಪ್ರದರ್ಶನದಲ್ಲಿ ಶಾಲೆಯ ಒಟ್ಟು 300 ವಿದ್ಯಾರ್ಥಿಗಳು ಭಾಗವಹಿಸಿ 120ಕ್ಕೂ ಅಧಿಕ ಗಣಿತದ ವಿವಿಧ ಮಾದರಿಗಳನ್ನು ಹಾಗೂ ರಾಮಾನುಜನ್‌ ಕುರಿತು ವಿಚಾರ ಗೋಷ್ಠಿಗಳನ್ನು ನೀಡಿದರು.

ಇದರಲ್ಲಿ ಪುರಾತನ ಕಾಲದಿಂದಲೂ ಗಣಿತವು ವೇದೋಪನಿಷತ್ತುಗಳಲ್ಲಿ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ಹನುಮಾನ್‌ ಚಾಲೀಸಾಸ್ತೋತ್ರಗಳ ಮೂಲಕ ಐದನೇ ತರಗತಿಯ ವಿದ್ಯಾರ್ಥಿ ಪ್ರಜ್ವಲ್‌ ವಿವರಿಸಿದನು. 1ರಿಂದ 1000 ವರೆಗಿನ ಯಾವುದೇ 3 ಅಂಕಿಯ ಸಂಖ್ಯೆಯನ್ನು ಇನ್ನೊಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಮೊತ್ತವನ್ನು ಕ್ಷಣಾರ್ಧದಲ್ಲಿ ಹೇಳುವ ಮೂಲಕ 9ನೇ ತರಗತಿಯ ಸಂಗಮೇಶ ನೋಡುಗರನ್ನು ಚಕಿತಗೊಳಿಸಿದ. ಅದೇ ರೀತಿಯಾಗಿ 10ನೇ ತರಗತಿಯ ರಂಜಿತಾ 118 ರಾಸಾಯನಿಕ ಧಾತುಗಳ ಹೆಸರುಗಳನ್ನು 40 ಸೆಕೆಂಡ್‌ ಳಲ್ಲಿ ಹೇಳುವ ಮೂಲಕ ನೋಡುಗರನ್ನು ಬೆರಗುಗೊಳಿಸಿದಳು.

ಶಾಲೆಯ ಪ್ರಾಂಶುಪಾಲೆ ಕೃಷ್ಣವೇಣಿ, ಉಪಪ್ರಾಂಶುಪಾಲೆ ಅರುಣಾದೇವಿ, ನಿಂಗಪ್ಪ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಹಾಗೂ ಪಾಲಕ ವೃಂದ ಮತ್ತು ವಿದ್ಯಾರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next