Advertisement

Study Tour: ದಕ್ಷಿಣ ಕೊರಿಯಾ ಅಧ್ಯಯನ ಪ್ರವಾಸ: ಅಧಿಕಾರಿಗಳ ಭೇಟಿಯಾದ ಸ್ಪೀಕರ್‌

03:27 AM Oct 30, 2024 | Team Udayavani |

ಬೆಂಗಳೂರು: ದಕ್ಷಿಣ ಕೊರಿಯಾದ ಅಧ್ಯಯನ ಪ್ರವಾಸದಲ್ಲಿರುವ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್‌ ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಭಾರತದ ರಾಯಭಾರಿ, ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅಮಿತ್‌ ಕುಮಾರ್‌ ಅವರನ್ನು ಭೇಟಿಯಾಗಿ ಆ ದೇಶದ ಕರ್ನಾಟಕದಲ್ಲಿನ ಹೂಡಿಕೆ ನಿರೀಕ್ಷೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.

Advertisement

ಭೇಟಿ ಸಂದರ್ಭದಲ್ಲಿ ಉಭಯ ದೇಶಗಳ ಸಂಬಂಧಗಳು, ಶಿಕ್ಷಣ, ವ್ಯಾಪಾರ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಅನೌಪಚಾರಿಕವಾಗಿ ಮಾತುಕತೆ ನಡೆಸಿದ ಯು.ಟಿ. ಖಾದರ್‌, ದಕ್ಷಿಣ ಕೊರಿಯಾದ, ಕರ್ನಾಟಕದಲ್ಲಿ ಹೂಡಿಕೆಯ ನಿರೀಕ್ಷೆಗಳು, ಅವಕಾಶಗಳ ಬಗ್ಗೆ ವಿಚಾರ ಚರ್ಚಿಸಿದರು.
ಇದೇ ವೇಳೆ, ಸಭಾಧ್ಯಕ್ಷ ರಾದ ಯು.ಟಿ. ಖಾದರ್‌, ಕರ್ನಾಟಕದ ವಿಶ್ವವಿದ್ಯಾನಿಲಯಗಳು ಕೊರಿಯಾದ ವಿಶ್ವವಿದ್ಯಾನಿಲಯಗಳೊಂ ದಿಗೆ ಕಾಲೇಜುಗಳಲ್ಲಿನ ವಿವಿಧ ಕೋರ್ಸ್‌ಗಳ ಮತ್ತು ಉದ್ಯೋಗಾವಕಾಶಗಳ ಕುರಿತು ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳುವ ಬಗ್ಗೆ ಭಾರತದ ರಾಯ ಭಾರಿಗಳೊಂದಿಗೆ ಚರ್ಚಿಸಿದರು.

ಅಷ್ಟೇ ಅಲ್ಲ, ಉಭಯ ದೇಶಗಳ ಮೂಲಸೌಲಭ್ಯಗಳು, ಆರ್ಥಿಕತೆ ಕುರಿತಾಗಿ ಚರ್ಚಿಸಿ, ಈ ಭೇಟಿಯು ಫ‌ಲಪ್ರದವಾಗಿದ್ದು, ವಿಶೇಷವಾಗಿ ದಕ್ಷಿಣ ಕೊರಿಯಾ ಮತ್ತು ಕರ್ನಾಟಕದ ನಡುವಿನ ಸಂಬಂಧಗಳು ಇನ್ನು ಹೆಚ್ಚಿನ ರೀತಿ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next