Advertisement

ಪೆನ್ಸಿಲ್ವೇನಿಯ ವಿ.ವಿ.ಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ

02:33 PM Jan 07, 2018 | Team Udayavani |

ಬೆಳ್ತಂಗಡಿ: ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ 8 ವಿದ್ಯಾರ್ಥಿಗಳನ್ನೊಳಗೊಂಡ ತಂಡವು 2 ದಿನಗಳ ಕಾಲ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ವಿಶೇಷ ಅಧ್ಯಯನಕ್ಕಾಗಿ ಆಗಮಿಸಿದೆ.

Advertisement

ಯೋಜನೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಈ ತಂಡವು ಗ್ರಾಮೀಣಾಭಿವೃದ್ಧಿ, ಮಹಿಳಾ ಸಶಕ್ತೀಕರಣ ಹಾಗೂ ಯೋಜನೆಯ ಆರ್ಥಿಕ ಸೇರ್ಪಡೆ ಕಾರ್ಯಕ್ರಮಗಳು, ಸಂಘಗಳ ಸದಸ್ಯರ ಆರ್ಥಿಕ ವ್ಯವಹಾರದ ಡಿಜಿಟಲೈಸೇಶನ್‌ ಮತ್ತು ನಗದುರಹಿತ ವ್ಯವಹಾರದಲ್ಲಿ ಮಾಡಿದ ಸಾಧನೆಗಳ ಬಗ್ಗೆ ಮಾಹಿತಿ ಪಡೆದರು.

ಇಂದು ಮಹಿಳಾ ಸದಸ್ಯರು ತಮ್ಮ ಕುಟುಂಬದ ಆರ್ಥಿಕ ಅಗತ್ಯತೆಗಳನ್ನು ಗುರುತಿಸಿ ಆರ್ಥಿಕ ವ್ಯವಹಾರಗಳನ್ನು ಅತ್ಯಂತ ಸುಲಲಿತವಾಗಿ ಮಾಡುತ್ತಿದ್ದಾರೆ. ಇವರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನವನ್ನು ನಮ್ಮ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ ಎಂದು ಡಾ| ಹೆಗ್ಗಡೆ ಹೇಳಿದರು.

ಯೋಜನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿದ ತಂಡಕ್ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.
ಎಚ್‌. ಮಂಜುನಾಥ್‌, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾ ಹರೀಶ್‌ ರಾವ್‌ ಸಂಸ್ಥೆಯ ವಿವಿಧ
ಕಾರ್ಯಕ್ರಮಗಳ ಮಾಹಿತಿ ನೀಡಿದರು. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕೇಂದ್ರ ಕಚೇರಿ ಹಾಗೂ ಉತ್ಪಾದನಾ ಘಟಕ ಹಾಗೂ ಮಾರಾಟ ಮಳಿಗೆಗೆ ಈ ತಂಡ ಭೇಟಿ ನೀಡಿತು. ಉಡುಪಿ ಜಿಲ್ಲೆಯಲ್ಲಿ ಯೋಜನೆ ಪ್ರಾಯೋಜಿತ ಪ್ರಗತಿಬಂಧು, ಸ್ವಸಹಾಯ, ಜ್ಞಾನವಿಕಾಸ ಕೇಂದ್ರಗಳಿಗೆ ಈ ತಂಡವು ಭೇಟಿ ನೀಡಿ ಅಧ್ಯಯನ ನಡೆಸಿತು. ಈ ಸಂದರ್ಭದಲ್ಲಿ ಸಿರಿ ನಿರ್ದೇಶಕಿ ಮನೋರಮಾ ಭಟ್‌, ಯೋಜನಾಧಿಕಾರಿಗಳಾದ ಜಯಂತಿ, ವಸಂತ ನಾಯಕ್‌ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next