Advertisement
ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಸ್ಕೌಟ್ಸ್ ತಂಡದ ಸದಸ್ಯರು ಭಾಗವಹಿಸಿದ ಅಧ್ಯಯನ ಶಿಬಿರದಲ್ಲಿ ಮೂವತ್ತೆರಡು ಚಿಟ್ಟೆಗಳನ್ನು ಗುರುತಿಸಲಾಯಿತು. ಕಾಡು- ತೋಡು, ತೋಟ, ಪಳ್ಳ ಗದ್ದೆಗಳೊಂದಿಗೆ ಜೈವಿಕ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿರುವ ಪುತ್ತಿಗೆ ಗ್ರಾಮ ಪಂಚಾಯತ್‌ನ ಎಡನಾಡು ಗ್ರಾಮದ ಪೊಯೆÂ ಪ್ರದೇಶದಲ್ಲಿನ ವೈವಿಧ್ಯಮಯ ಚಿಟ್ಟೆ ಪ್ರಪಂಚವನ್ನು ಮಕ್ಕಳು ಆಸ್ವಾದಿಸಿದರು.
Related Articles
ಹೆಚ್ಚು ಮಳೆ ಸಿಗುವ ಕಾಡಿನ ಬದಿಗಳಲ್ಲಿ ಕಂಡು ಬರುವ ರುಸ್ಟಿಕ್ ಚಿಟ್ಟೆಯನ್ನು ಪೊಯೆÂ ತೋಡಿನ ಹತ್ತಿರದಿಂದ ನಿರೀಕ್ಷಣೆ ಮಾಡಲಾಯಿತು. ನೀರಿಲ್ಲದ ಪ್ರದೇಶಗಳಲ್ಲಿ ಮಾತ್ರ ಕಾಣಲ್ಪಡುವ ಯಾಮ್ಲಿà ಎಂಬ ಚಿಟ್ಟೆಯನ್ನು ರಸ್ತೆ ಬದಿಯಿಂದ ಮಕ್ಕಳು ನೋಡಿದರು. ತನ್ನನ್ನು ಬೇಟೆಯಾಡಲು ಬರುವ ಜೀವಿಗಳನ್ನು ಎದುರಿಸುವ ಸಾಮರ್ಥ್ಯವುಳ್ಳ ಟೋನಿ ಕ್ಯಾಸ್ಟರ್ ಎಂಬ ಚಿಟ್ಟೆಯನ್ನು ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ಮಕ್ಕಳು ಗುರುತಿಸಿದರು. ಇವುಗಳನ್ನಲ್ಲದೆ ಕಾಮನ್ ಬುಶ್ ಬ್ರೌನ್, ಕಾಮನ್ ಫೋರ್ ರಿಂಗ್, ಗ್ರಾಸ್ ಯೆಲ್ಲೊ, ರೋಸ್, ಸೈಲರ್, ಡೆನೈಡ್ ಎಗ್ ಫ್ಲಾಯ್, ಲೆಮನ್ ಫ್ಯಾನ್ಸಿ, ಮಂಕೀ ಫಜಲ್, ಸೈಕೀ, ಫ್ಲೆ$çನ್ ಕ್ಯುಪಿಡ್ ಮೊದಲಾದ ಪಾತರಗಿತ್ತಿಗಳನ್ನು ಮಕ್ಕಳು ವೀಕ್ಷಣೆ ಮಾಡಿದರು.
Advertisement
ಪಾತರಗಿತ್ತಿಗಳಿಂದ ಪಾಠನಮ್ಮ ಮನೆಯ ಹಿಂದೆ ಮುಂದೆ ಅತ್ತಿಂದಿತ್ತ ಹಾರಾಡುತ್ತಿರುವ ಚಿಟ್ಟೆ ಲೋಕದ ಅಧ್ಯಯನಕ್ಕೆ ಮಕ್ಕಳು ಆಸಕ್ತಿ ತೋರಿಸುತ್ತಾರೆ. ಆದರೆ ಅದಕ್ಕಾಗಿ ವಿಶೇಷ ತರಗತಿಗಳು, ತರಬೇತಿ ಶಿಬಿರಗಳು ಅವರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಇಂತಹ ಪರಿಸರ ಶಿಬಿರಗಳಿಂದ ಮಕ್ಕಳಲ್ಲಿ ವೈಜ್ಞಾನಿಕ ನಿರೀಕ್ಷಣೆಯ ಮನೋಭಾವಗಳನ್ನು ಹೆಚ್ಚಿಸಬಹುದು. ಹಲವು ಸಂಶೋಧನೆಗಳತ್ತವೂ ಮಕ್ಕಳನ್ನು ಕೊಂಡೊಯ್ಯಲು ಇದು ಸಹಕರಿಸುವುದು.
– ಮುರಳಿ ಮಾಧವ ಪೆಲ್ತಾಜೆ, ಚಿಟ್ಟೆ ಸಂಶೋಧಕರು, ಪೆರ್ಲ