Advertisement

ಅಸಹಾಯಕ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ ವಿದ್ಯಾರ್ಥಿಗಳು

10:50 PM Jul 25, 2019 | Team Udayavani |

ಉಪ್ಪಿನಂಗಡಿ: ಮನೆಯವರಿಂದ ದೂರವಾಗಿ, ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಅನಾರೋಗ್ಯ ಪೀಡಿತ ವೃದ್ಧನನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಪೊಲೀಸರ ನೆರವಿನೊಂದಿಗೆ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಹಿರೇಬಂಡಾಡಿ ನಿವಾಸಿ ಕೊರಗಪ್ಪ ಪೂಜಾರಿ ಎಂಬವರು 10 ದಿನಗಳಿಂದ ನಡೆಯಲಾರದ ಸ್ಥಿತಿಯಲ್ಲಿ ಬಸ್‌ ನಿಲ್ದಾಣದಲ್ಲೇ ಬಿದ್ದುಕೊಂಡಿದ್ದರು. ಅಲ್ಲೇ ಮಲ-ಮೂತ್ರ ವಿಸರ್ಜಿಸಿದ್ದರಿಂದ ಬಸ್‌ ನಿಲ್ದಾಣವೂ ಗಲೀಜಾಗಿತ್ತು.

ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿಗಳು ಕೊರಗಪ್ಪ ಪೂಜಾರಿ ಅವರನ್ನು ಮಾತನಾಡಿಸಿ, ಅವರಿಂದ ಮಾಹಿತಿ ಪಡೆದು ಪತ್ನಿ ಹಾಗೂ ಐವರು ಮಕ್ಕಳನ್ನು ಸಂಪರ್ಕಿಸಿದರೂ ಅವರು ಬರಲು ನಿರಾಕರಿಸಿದ್ದಾರೆ. ಹೀಗಾಗಿ, ವಿದ್ಯಾರ್ಥಿಗಳೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಹಕಾರ
ವಿದ್ಯಾರ್ಥಿಗಳಾದ ಅಶ್ವಿ‌ನಿ, ಚೈತ್ರಾ, ಬೀನಾ, ದಾಮೋದರ, ತೇಜಸ್ವಿ, ನವ್ಯಾ, ಅಶ್ವಿ‌ತಾ, ಸುಶ್ಮಿತಾ, ದೀಕ್ಷಾ ಹಾಗೂ ಶಂಕರ್‌ ಅವರು ಕೊರಗಪ್ಪ ಪೂಜಾರಿ ಅವರನ್ನು ಉಪಚರಿಸಿ, 108 ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಉಪ್ಪಿನಂಗಡಿ ಠಾಣೆಯ ಸಿಬಂದಿ ಮಧು ವಿದ್ಯಾರ್ಥಿಗಳಿಗೆ ಸಹಕಾರ ನೀಡಿದರು.

ಮತ್ತೋರ್ವ ವೃದ್ಧ
ಉದನೆಯ ನಿವಾಸಿ ಕೃಷ್ಣ ಅವರೂ ಬಸ್‌ ನಿಲ್ದಾಣದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರು. ಅವರನ್ನೂ ಮನೆಗೆ ಸೇರಿಸಿಕೊಳ್ಳಲು ಪತ್ನಿ ಹಾಗೂ ಇಬ್ಬರು ಮಕ್ಕಳು ಸಮ್ಮತಿಸಿಲ್ಲ. ಆದರೆ, ಕೃಷ್ಣ ಅವರು, ತಾವು ಇಲ್ಲೇ ಇರುವುದಾಗಿ ಹಠ ಹಿಡಿದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next