Advertisement
ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸತೊಡಗಿದೆ. ಶಾಲಾ-ಕಾಲೇಜುಗಳಲ್ಲಿ ನೀರಿನ ಸಮಸ್ಯೆ ತುಸು ಹೆಚ್ಚೇ ಇದೆ. ಕೆಲವು ದಿನಗಳ ಹಿಂದಷ್ಟೇ ಪಪೂ ಕಾಲೇಜುಗಳು ಆರಂಭವಾಗಿವೆ. ಮೇ 29ರಂದು ಸರಕಾರಿ, ಅನುದಾನಿತ ಶಾಲೆಗಳೂ ಕಾರ್ಯಾರಂಭಗೊಂಡಿವೆ. ಆದರೆ, ಶಾಲೆ- ಕಾಲೇಜು ಆರಂಭವಾಗುತ್ತಲೇ ವಿದ್ಯಾರ್ಥಿ- ಶಿಕ್ಷಕರಿಗೆ ನೀರಿನ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕೆಲವು ಶಾಲೆಗಳಲ್ಲಿ ಶಾಲಾ ರಂಭದ ದಿನದಿಂದಲೇ ಟ್ಯಾಂಕರ್ ಮೂಲಕ ನೀರು ತರಿಸಿದರೆ, ಇನ್ನು ಕೆಲವೆಡೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.
ಬಿಕರ್ನಕಟ್ಟೆ ಸ. ಶಾಲೆಯಲ್ಲಿ ನೀರಿನ ಸಮಸ್ಯೆ ಹೆಚ್ಚಿತ್ತು. ಆದರೆ, ಸನಿಹದ ಫ್ಲಾ ್ಯಟ್ ನಲ್ಲಿ ಬೋರ್‌ವೆಲ್ ಇರುವುದರಿಂದ ಮಕ್ಕಳ ಆವಶ್ಯಕತೆಗೆ ನೀರು ನೀಡುವಂತೆ ಸಂಸ್ಥೆ ಯವರು ಮನವಿ ಮಾಡಿದ್ದರಿಂದ ನೀರು ದೊರಕಿದೆ. ಅಲ್ಲದೆ, ಮಳೆ ಬರುವ ವರೆಗೂ ನೀರು ಪಡೆದುಕೊಳ್ಳಲು ಅವರು ಹೇಳಿರುವುದಾಗಿ ಶಾಲಾ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
Related Articles
Advertisement
ನಾಲ್ಯಪದವು ಸರಕಾರಿ ಶಾಲೆಯಲ್ಲಿ ನೀರಿನ ಸಮಸ್ಯೆ ಇದೆ. ಆದರೆ, ನೀರು ಕಡಿಮೆ ಯಾದ ಪಾಲಿಕೆಯ ಅಭಿಯಂತರರಿಗೆ ಕರೆ ಮಾಡಿ ತಿಳಿಸಿದರೆ ತತ್‌ಕ್ಷಣ ಟ್ಯಾಂಕರ್ ನೀರು ಕಳುಹಿಸುತ್ತಾರೆ. ಹಾಗಾಗಿ ಸಮಸ್ಯೆ ಬಿಗಡಾಯಿಸಿಲ್ಲ ಎಂದು ಪ್ರಭಾರ ಮುಖ್ಯ ಶಿಕ್ಷಕಿ ದಾಕ್ಷಾಯಿಣಿ ಹೇಳಿದ್ದಾರೆ.
ಸೈಂಟ್ ಅಲೋಶಿಯಸ್, ಕಪಿತಾನಿಯೋ ಶಾಲೆ, ರೊಸಾರಿಯೋ ಶಾಲೆ, ಶಾರದಾ ವಿದ್ಯಾಲಯ, ಬೆಂದೂರ್ ಸೈಂಟ್ ಆ್ಯಗ್ನೆಸ್ ಶಾಲೆ ಮುಂತಾದೆಡೆ ನೀರಿನ ಸಮಸ್ಯೆ ಇಲ್ಲಿವರೆಗೆ ಎದುರಾಗಿಲ್ಲ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಕೈ ತೊಳೆಯಲೂ ನೀರಿಲ್ಲ!ಮುಡಿಪು ಸ.ಪ.ಪೂ. ಕಾಲೇಜಿನಲ್ಲಿ ಕೈ ತೊಳೆಯಲೂ ನೀರಿಲ್ಲ. ಟಿಫಿನ್ ಬಾಕ್ಸ್‌ನ್ನುತೊಳೆಯದೇ ಮನೆಗೊಯ್ಯಬೇಕಾದ ಪರಿಸ್ಥಿತಿ ಇದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿ ಕೊಂಡಿದ್ದಾರೆ.
ಮಾಹಿತಿ ಬಂದಿಲ್ಲ
ನಗರದಲ್ಲಿ ನೀರಿನ ಸಮಸ್ಯೆ ಇರುವ ಶಾಲೆಗಳಿಗೆ ಮಧ್ಯಾಹ್ನದ ಬಳಿಕ ರಜೆ ನೀಡುವ ನಿಟ್ಟಿನಲ್ಲಿ ಈವರೆಗೆ ಯಾವುದೇ ನಿರ್ದೇಶಗಳು ಬಂದಿಲ್ಲ. ಈ ಬಗ್ಗೆ ಮಾಹಿತಿ ಬಂದಲ್ಲಿ ತಿಳಿಸಲಾಗುವುದು.
– ಲೋಕೇಶ್, ಮಂಗಳೂರು ದ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿ