ಢಾಕಾ: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಸರಕಾರವನ್ನೇ ಉರುಳಿ ಸಿದ್ದ ವಿದ್ಯಾರ್ಥಿಗಳೀಗ ಅವರಿಗಾಗೇ ಹೊಸ ರಾಜಕೀಯ ಪಕ್ಷ ರಚಿಸುವುದಾಗಿ ಹೇಳಿದ್ದಾರೆ. ಶೀಘ್ರವೇ ಸಾರ್ವತ್ರಿಕ ಚುನಾವಣೆ ನಡೆಸಬೇಕೆಂದು ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಖಾಲಿದಾ ಜಿಯಾ ಅವರ ಬಿಎನ್‌ಪಿ ಪಕ್ಷಗಳು ಆಗ್ರಹಿಸುತ್ತಿರುವ ನಡುವೆ ಈ ಬೆಳವಣಿಗೆ ಮಹತ್ವ ಪಡೆದಿದೆ.
ವಿದ್ಯಾರ್ಥಿಗಳ ಒಕ್ಕೂಟದ ನಾಯಕ ಮಹಫುಜ್ ಆಲಮ್ ಮಾಹಿತಿ ನೀಡಿ, 3 ದಶಕಗಳಿಂದ ಅವಾಮಿ ಲೀಗ್, ಬಿನ್‌ಪಿ ಪಕ್ಷಗಳೆರಡೇ ಸರಕಾರ ನಡೆಸುತ್ತಿವೆ. ಜನರಿಗೆ ಈ ಎರಡೂ ಸರಕಾರಗಳ ಮೇಲೆ ವಿಶ್ವಾಸ ಹೋಗಿದೆ. ಅವರು ನಮ್ಮನ್ನು ನಂಬಿದ್ದಾರೆ. ಹಾಗಾಗಿ ಹೊಸ ಪಕ್ಷ ರಚಿಸಲು ಯೋಜಿಸಿದ್ದೇವೆ ಎಂದಿದ್ದಾರೆ.
ಮಧ್ಯಾಂತರ ಸರಕಾರದ ಭಾಗವಾಗಿರುವ ವಿದ್ಯಾರ್ಥಿ ನಾಯಕ ನಹೀದ್ ಇಸ್ಲಾಂ ಕೂಡ ಇದನ್ನು ಬೆಂಬಲಿಸಿ, ಮತ್ತೆ ಸರ್ವಾಧಿಕಾರಿಗಳ ಕೈಗೆ ದೇಶವನ್ನು ನೀಡಲ್ಲ. ವಿದ್ಯಾರ್ಥಿಗಳ ಪಕ್ಷರಚನೆ ಬಳಿಕವೇ ಚುನಾವಣೆ ಎಂದಿದ್ದಾರೆ.
ದಂಗೆಯಲ್ಲಿ 650 ಮಂದಿ ಸಾವು: ವಿಶ್ವ ಸಂಸ್ಥೆ
ಬಾಂಗ್ಲಾದೇಶದಲ್ಲಿ ಇತ್ತೀಚೆಗಿನ ದಂಗೆ ಕುರಿತು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕಚೇರಿ ವರದಿ ಬಿಡುಗಡೆಗೊಳಿಸಿದೆ. ಜು.16ರಿಂದ ಆ.4ರ ವರೆಗಿನ ದಂಗೆಯಲ್ಲಿ 400, ಆ.5 ಮತ್ತು 6ರ ದಂಗೆಯಲ್ಲಿ 250 ಮಂದಿ ಒಟ್ಟಾರೆ 650 ಮಂದಿ ಮೃತಪಟ್ಟಿದ್ದಾರೆಂದು ತಿಳಿಸಿದೆ.