Advertisement

ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು: ಪದ್ಮನಾಭ ಶೆಟ್ಟಿ

09:20 PM Sep 25, 2019 | Sriram |

ಪೆರ್ಲ: ಕಾಟುಕುಕ್ಕೆ ಸುಬ್ರಹ್ಮಣ್ಯೇಶ್ವರ ಹೈಯರ್‌ ಸೆಕಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಎನ್ನೆಸ್ಸೆಸ್‌ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

Advertisement

ಈ ಸಂದರ್ಭ ಮಾತಾನಡಿದ ಅವರು ಸೇವಾ ಮನೋಭಾವ ವನ್ನು ಎಲ್ಲ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು.ಜೀವನದಲ್ಲಿ ಶಿಸ್ತು,ದೇಶ ಪ್ರೇಮ ಮೊದಲಾದ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಯುವ ಜನರು ಕ್ರಿಯಾಶೀಲರಾಗಿ ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.ಅದೇ ರೀತಿ ಪರಿಸರ ರಕ್ಷಣೆಯಲ್ಲಿಯೂ ಕಾಳಜಿ ವಹಿಸಬೇಕು.ಇಂದು ಪ್ಲಾಸ್ಟಿಕ್‌ ಮಾಲಿನ್ಯ ದೊಡ್ಡ ಸಮಸ್ಯೆಯಾಗಿದೆ.ಇದು ಕೇವಲ ನಮ್ಮ ದೇಶದ ಮಾತ್ರ ಸಮಸ್ಯೆ ಅಲ್ಲ .ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ.ಆದ್ದರಿಂದ ಅದರ ಬಳಕೆಯನ್ನು ಕಡಿಮೆ ಮಾಡುವ,ಹಾಗೆಯೆ ಸುಸ್ಥಿರ ಅಭಿವೃದ್ಧಿಗೆ,ಪರಿಸರ ಸಂರಕ್ಷಿಸುವ ಕೆಲಸ ಆಗಬೇಕಾಗಿದೆ.ಶಾಲಾ ಎನ್‌ಎಸ್‌ಎಸ್‌ ಘಟಕವು ಆ ನಿಟ್ಟಿನಲ್ಲಿ ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್‌ ಪೆನ್ನುಗಳನ್ನು ಉಪಯೋಗಿಸಿ ಎಸೆಯುವ ಬದಲು ಪುನರ್ಬಳಕೆ ಮಾಡಲು ಅಥವಾ ವೈಜ್ಞಾನಿಕವಾಗಿ ಸಂಸ್ಕರಿಸುವ ಉದ್ದೇಶದಿಂದ ಆರಂಭಿಸಲಾದ ಪೆನ್‌ ಫ್ರೆಂಡ್‌ ಯೋಜನೆಯನ್ನು ಪ್ರಾಂಶುಪಾಲರು ಉದ್ಘಾಟಿಸಿದರು.

ಮಳೆಗಾಲದಲ್ಲಿ ಸಂಭವಿಸಿದ ನೆರೆ ಸಂತ್ರಸ್ತ ಸ್ಥಳಗಳಿಗೆ ತೆರಳಿ ಸ್ವಯಂಸೇವೆ ಸಲ್ಲಿಸಿದ ಎನ್ನೆಸ್ಸೆಸ್‌ ವಿದ್ಯಾರ್ಥಿಗಳಾದ ಮೊಹಮ್ಮದ್‌ ಮಶೂಕ್‌ ಹಾಗೂ ಸ್ವಾತಿಕ್‌ರನ್ನು ಅಭಿನಂದಿಸಲಾಯಿತು.ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿದ್ಯಾಲಯಗಳಲ್ಲಿ ಎನ್ನೆಸ್ಸೆಸ್‌ ಘಟಕದ ಮಹತ್ವ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿ ನಾಯಕ ಅಶ್ವಿ‌ನ್‌ ಪಿ.ಮಾತನಾಡಿದರು.ಎನ್‌ಎಸ್‌ಎಸ್‌ ಯೋಜನಾಧಿಕಾರಿ ಮಹೇಶ ಏತಡ್ಕ ನೇತೃತ್ವ ನೀಡಿದರು.ಶಾಲಾ ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next