Advertisement

ಸಿನೆಮಾಕ್ಕಲ್ಲ!; ಪದವಿ ಪರೀಕ್ಷೆಯ ಹಾಲ್ ಟಿಕೆಟ್ ಗಾಗಿ ವಿದ್ಯಾರ್ಥಿಗಳ ನೂಕು ನುಗ್ಗಲು

03:55 PM Aug 25, 2022 | Team Udayavani |

ಗಂಗಾವತಿ: ಸಿನೆಮಾ ನೋಡಲು ಟಿಕೆಟ್ ಪಡೆಯಲು ನೂಕುನುಗ್ಗಲು ಮಾಡುವಂತೆ ನಗರದ ಶ್ರೀ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿ ಪರೀಕ್ಷೆಯ ಹಾಲ್ ಟಿಕೆಟ್ (ಪ್ರವೇಶ ಪತ್ರ )ಪಡೆಯಲು ಕಿಟಕಿಯ ಮೂಲಕ ವಿದ್ಯಾರ್ಥಿಗಳು ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.

Advertisement

ಶ್ರೀ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಸುಮಾರು 3000 ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ದು ಆ.29 ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಪರೀಕ್ಷೆಗಾಗಿ ಪ್ರವೇಶ ಪತ್ರವನ್ನು ಇಬ್ಬರು ಉಪನ್ಯಾಸಕರು ತರಗತಿಯ ಕಿಟಕಿ ಮೂಲಕ ಹಾಲ್ ಟಿಕೆಟ್ ವಿತರಿಸುತ್ತಿದ್ದು ಕಿಟಕಿಯ ಹೊರಗೆ ವಿದ್ಯಾರ್ಥಿಗಳು ನೂಕುನುಗ್ಗಲು ನಡೆಸುತ್ತಿದ್ದಾರೆ .ಪ್ರವೇಶ ಪತ್ರವನ್ನು ಆಯಾ ತರಗತಿಯ ಪ್ರಾಧ್ಯಾಪಕರಿಗೆ ಮೂಲಕ ವಿತರಿಸುವ ವ್ಯವಸ್ಥೆಯನ್ನು ಪ್ರಾಚಾರ್ಯರು ಮಾಡಬೇಕಿತ್ತು. ಆದರೆ ಪ್ರಾಚಾರ್ಯರು ಹಲವು ವರ್ಷಗಳಿಂದ ಇದೇ ಪದ್ಧತಿ ಮಾಡುತ್ತಿದ್ದು ಪರೀಕ್ಷೆ ಸಮೀಪಿಸಿದಾಗ ಇಬ್ಬರು ಅಥವಾ 3 ಜನ ಉಪನ್ಯಾಸಕರಿಗೆ ಪ್ರವೇಶ ಪತ್ರ ವಿತರಿಸುವ ಜವಾಬ್ದಾರಿ ನೀಡಲಾಗುತ್ತದೆ.

3000ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು ಕಿಟಕಿಯ ಮೂಲಕ ಹೆಸರು ನೋಂದಾಯಿಸಿಕೊಂಡು ವಿತರಿಸುವ ಕಾರ್ಯ ಮಾಡಲಾಗುತ್ತದೆ .ಇದರಿಂದ ನೂಕುನುಗ್ಗಲು ನಗದು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಉಂಟಾಗಿದೆ .ಕಾಲೇಜಿನಲ್ಲಿ 70 ಕ್ಕೂ ಹೆಚ್ಚು ಪ್ರಾಧ್ಯಾಪಕರು ಮತ್ತು ಇತರ ಸಿಬ್ಬಂದಿ ವರ್ಗದವರಿದ್ದರು ತರಗತಿವಾರು ಪ್ರವೇಶ ಪತ್ರವನ್ನು ವಿತರಿಸುವ ವ್ಯವಸ್ಥೆ ಮಾಡಬೇಕಾಗಿದ್ದ ಪ್ರಿನ್ಸಿಪಾಲರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ .ಕೂಡಲೇ ಕಾಲೇಜಿನ ಮೇಲುಸ್ತುವಾರಿ ಸಮಿತಿ ಎಚ್ಚೆತ್ತುಕೊಂಡು ಇದೇ ವರ್ಷದಿಂದಲೇ ವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿಯೇ ಪ್ರವೇಶ ಪತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು ಹೀಗೆ ಸಿನೆಮಾ ಟಿಕೆಟ್ ಪಡೆಯಲು ಕಿಟಕಿಯ ನೂಕುನುಗ್ಗಲು ಮಾಡುವಂತೆ ಕಾಲೇಜಲ್ಲಿ ಮಾಡಿದರೆ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುವ ಜವಾಬ್ದಾರಿ ಪ್ರಾಚ್ಯರೂಪ ಇರುತ್ತದೆ ಪ್ರಾಚಾರ್ಯರು ಕೂಡಲೇ ಕ್ರಮವಹಿಸಿ ಸೂಕ್ತ ವ್ಯವಸ್ಥೆ ಮಾಡುವ ಮೂಲಕ ಎಲ್ಲರಿಗೂ ಹಾಲ್ ಟಿಕೆಟ್ ವಿತರಿಸಲಿ ಎಂದು ಕಾಲೇಜು ಉತ್ತೇಜನ ಸಲಹಾ ಸಮಿತಿ ಮಂಡಳಿಯ ಅಧ್ಯಕ್ಷ ಸರ್ವಜ್ಞಮೂರ್ತಿ ಒತ್ತಾಯಿಸಿದ್ದಾರೆ.

ವಿಶೇಷ ವರದಿ :ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next