Advertisement

ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

04:32 PM Jul 13, 2019 | Team Udayavani |

ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಕಿತ್ತೂರು ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮೆಹಬೂಬ್‌ ಕಾದ್ರೊಳ್ಳಿ ಮಾತನಾಡಿ, ಪಟ್ಟಣದ ಕಿತ್ತೂರು ಬಸ್‌ ನಿಲ್ದಾಣದಿಂದ ಸಮೀಪದ ಕುಲವಳ್ಳಿ, ಗಂಗ್ಯಾನಟ್ಟಿ, ಸಾಗರ, ಮಾಚಿ ಹಾಗೂ ಕತ್ರಿದಡ್ಡಿ ಗ್ರಾಮಗಳಿಗೆೆ ಒಂದು ವಾರದಿಂದ ಸಮರ್ಪಕ ಬಸ್‌ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿನಿತ್ಯ ಹಳ್ಳಿಗಳಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಚಾರಿಸುತ್ತಾರೆ. ಅದರಲ್ಲಿ ಶಾಲಾ-ಕಾಲೇಜುಗೆಂದು ದಿನಕ್ಕೆ 150 ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ ಸಮರ್ಪಕ ಬಸ್‌ ಇಲ್ಲದರಿಂದ ವಿದ್ಯಾರ್ಥಿಗಳು ಮಳೆಯಲ್ಲಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಸಂಚರಿಸುವಂತಾಗಿದೆ. ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಶಾಸಕರಿಗೆ, ಜಿಪಂ ಸದಸ್ಯರಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಖಾಸಿಂ ನೇಸರಗಿ, ಮೆಹಬೂಬ್‌ ಕಾದ್ರೊಳ್ಳಿ, ಹಸನ್‌ಸಾಬ್‌ ಕಾದ್ರೊಳ್ಳಿ, ಶರೀಫ್‌ ಶಿಲೇದಾರ, ಗಿರಿಮಲ್ಲ ನಾಯ್ಕರ, ಕುತುಬುದಿನ್‌ ದಳವಾಯಿ, ಪ್ರಕಾಶ ಪವಾರ, ಸಾನೀಯಾ ಇಮಾವನವರ, ಆಕಾಶ ಜಕ್ಕನವರ, ಗಂಗಪ್ಪ ಕೊಕ್ಕರೆ, ಕುಮಾರ ಪಟ್ಟಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next