Advertisement

Protest: ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದ ಬಸ್ಸು, ನಿಡಶೇಸಿಯಲ್ಲಿ ಬಸ್ ತಡೆದು ಪ್ರತಿಭಟನೆ

01:33 PM Sep 14, 2023 | sudhir |

ಕುಷ್ಟಗಿ: ಕುಷ್ಟಗಿ- ಹನುಮಸಾಗರಕ್ಕೆ ಸಂಚರಿಸುವ ಬಸ್ಸುಗಳು, ನಿಡಶೇಸಿಗೆ ನಿಲ್ಲಿಸದೇ ಸಂಚರಿಸುವ ಧೋರಣೆ ವಿರೋಧಿಸಿ, ನಿಡಶೇಸಿ ಶಾಲಾ ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬಸ್ಸುಗಳಿಗೆ ಘೇರಾವ್ ಹಾಕಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

Advertisement

ನಿಡಶೇಸಿ ಗ್ರಾಮದ60 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಪ್ರೌಢಶಾಲೆ ತಳವಗೇರಾ ಹಾಗೂ ಆದರ್ಶ ವಿದ್ಯಾಲಯಕ್ಕೆ ಹೋಗುತ್ತಿದ್ದಾರೆ. ಕುಷ್ಟಗಿಯಿಂದ ತಳವಗೇರಾ ಆದರ್ಶ ವಿದ್ಯಾಲಯಕ್ಕೆ ಹೋಗುವ ಎರಡು ಬಸ್ಸುಗಳು ಭರ್ತಿಯಾಗುತ್ತಿರುವುದರಿಂದ ನಿಡಶೇಸಿ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಒಂಟಿ ಕಾಲಿನಲ್ಲಿ ನಿಲ್ಲುವಷ್ಟು ಜಾಗ ಇರುವುದಿಲ್ಲ.

ಆದಾಗ್ಯೂ ವಿದ್ಯಾರ್ಥಿಗಳು ಜೀವ ಭಯ ಇಲ್ಲದೇ ಜೋತು ಬಿದ್ದು ಸಂಚರಿಸುತ್ತಿದ್ದಾರೆ. ಬಸ್ಸಿನ ಸಮಸ್ಯೆಯ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಘಟಕ ವ್ಯವಸ್ಥಾಪಕ ಜಡೇಶ ಅವರು ಕ್ರಮವಹಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಬಸ್ ತಡೆದು ಪ್ರತಿಭಟನೆ ನಡೆಸಿದರು.ರಸ್ತೆಯಲ್ಲಿ ಕುಳಿತು ಘಟಕ ವ್ಯವಸ್ಥಾಪಕರ ವಿರುದ್ದ ಘೋಷಣೆ ಕೂಗಿದರು.

ಈ ವೇಳೆ‌ ಬಸ್ ಚಾಲಕ, ನಿರ್ವಾಹಕರೊಂದಿಗೆ ವಾಗ್ವದಕ್ಕೆ ಇಳಿದರು. ಘಟಕ ವ್ಯವಸ್ಥಾಪಕ ಜಡೇಶ ಅವರು ಆಗಮಿಸಿ ಬಸ್ಸಿನ ತೊಂದರೆ ಇತ್ಯರ್ಥಗೊಳಿಸುವರೆಗೂ ಕದಲುವುದಿಲ್ಲ ಎಂದು ಬಿಗಿಪಟ್ಟು ಮುಂದುವರೆಸಿದರು.

ಅಮವಾಸೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸದರಿ ಬಸ್ಸುಗಳಲ್ಲಿ ಹೊರಟಿದ್ದ ಮಹಿಳಾ ಪ್ರಯಾಣಿಕರು ಪ್ರತಿಭಟನೆ ಬಿಸಿ ಅನುಭವಿಸಿದರು.

Advertisement

ನಿಡಶೇಸಿ ಮೂಲಕ ತಳವಗೇರಾಕ್ಕೆ ಸಂಚರಿಸುವ ಹನುಮಸಾಗರ ಮಾರ್ಗದ ಬಸ್ಸುಗಳು ನಿಡಶೇಸಿ ವಿದ್ಯಾರ್ಥಿಗಳಿಗೆ ಅನಕೂಲ ಆಗಿಲ್ಲ. ಈ ಬಗ್ಗೆ ಶಾಸಕ ದೊಡ್ಡನಗೌಡ ಪಾಟೀಲ, ಘಟಕ ವ್ಯವಸ್ಥಾಪಕ ಜಡೇಶ ಅವರ ಗಮನಕ್ಕೆ ತಂದರೂ ಹೆಚ್ಚುವರಿ ಬಸ್ಸು ಓಡಿಸಲು ಕ್ರಮ ಕೈಗೊಂಡಿಲ್ಲ.

ಶಕ್ತಿ ಯೋಜನೆ ಆರಂಭವಾದಾಗಿನಿಂದ ತಳವಗೇರಾಕ್ಕೆ ಹೋಗುವ ವಿದ್ಯಾರ್ಥಿಗಳು ನಿತ್ಯ ತೊಂದರೆ ತಪ್ಪದಂತಾಗಿದ್ದು ಪ್ರತಿದಿನ ಶಾಲಾ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.

ಇದನ್ನೂ ಓದಿ: Asia Cup 2023; ಮತ್ತೆ ಟೀಂ ಇಂಡಿಯಾದ ಜೊತೆ ಅಭ್ಯಾಸದಲ್ಲಿ ಕಾಣಿಸಿಕೊಂಡ ಶ್ರೇಯಸ್ ಅಯ್ಯರ್

Advertisement

Udayavani is now on Telegram. Click here to join our channel and stay updated with the latest news.

Next