Advertisement

ಚಲಿಸುತ್ತಿದ್ದ ಬಸ್‌ನಿಂದ ವಿದ್ಯಾರ್ಥಿ ನೂಕಿದ ನಿರ್ವಾಹಕ

02:57 PM Mar 16, 2022 | Team Udayavani |

ಎಚ್‌.ಡಿ.ಕೋಟೆ: ಚಲಿಸುತ್ತಿದ್ದ ಬಸ್‌ನಿಂದ ನಿರ್ವಾಹಕರು ವಿದ್ಯಾರ್ಥಿಯನ್ನು ಕೆಳಗೆ ನೂಕಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಪಟ್ಟಣದ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ತಡೆದು ಪ್ರತಿಭಟಿಸಿದರು.

Advertisement

ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ತಾಲೂಕು ಕೇಂದ್ರದಲ್ಲಿನ ಶಾಲಾ ಕಾಲೇಜುಗಳಿಗೆ ಪ್ರತಿದಿನ ಜಿ.ಎಂ.ಹಳ್ಳಿ, ಮೇಟಿಕುಪ್ಪೆ, ಅಗಸನಹುಂಡಿ, ಮೇಟಿಕುಪ್ಪೆ ಹಾಡಿ,ಸೊಳ್ಳಾಪುರ, ಬಸವನಗಿರಿ ಹಾಡಿ ಸೇರಿ ಇನ್ನಿತರ ಗ್ರಾಮಗಳಿಂದ ಆಗಮಿಸಬೇಕು.

ಮೇಟಿಕುಪ್ಪೆ ಮಾರ್ಗಕ್ಕೆ ಸರಿಯಾದ ಬಸ್‌ ಸಂಪರ್ಕ ವ್ಯವಸ್ಥೆಇಲ್ಲದೆ ಶಾಲಾ ಕಾಲೇಜುಗಳಿಗೆ ಸಕಾಲದಲ್ಲಿ ಆಗಮಿಸದೇಕಲಿಕೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ.ಇಂತಹ ಸಂದರ್ಭದಲ್ಲಿ ಚಾಲಕರು, ನಿರ್ವಾಹಕರುವಿದ್ಯಾರ್ಥಿಗಳ ಜೊತೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದರು.

ಇದಕ್ಕೆ ಪೂರಕವಾಗಿ ಸೋಮವಾರ ಮೇಟಿಕುಪ್ಪೆ ಹೋಗುವ ಬಸ್‌ ಏರಿ ವಿದ್ಯಾರ್ಥಿಗಳು ಕೋಟೆ ಬಸ್‌ ನಿಲ್ದಾಣದಲ್ಲಿಕುಳಿತಿದ್ದಾರೆ. ಈ ವೇಳೆಯಲ್ಲಿ ಆಗಮಿಸಿದ ಬಸ್‌ ನಿರ್ವಾಹಕಸೀನಾ, ಬಸ್‌ ಮೇಟಿಕುಪ್ಪೆ ಕಡೆಗೆ ಹೋಗುವುದಿಲ್ಲ ಎಂದುಚಲಿಸುತ್ತಿದ್ದ ಬಸ್‌ನಿಂದ ವಿದ್ಯಾರ್ಥಿಗಳನ್ನು ಕೆಳಗಿಳಿಸಿದ್ದಾರೆ. ಇಳಿಯಲು ಕೊಂಚ ತಡವಾದ ಆದಿಚುಂಚನಗಿರಿಯ 8ನೇ ತರಗತಿ ವಿದ್ಯಾರ್ಥಿ ಸುಪ್ರಿತ್‌ ಎಂಬ ಬಾಲಕನನ್ನು ಬಸ್‌ನಿಂದ ಕೆಳಗೆ ದೂಕಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ.

ಘಟನೆಯ ಬಳಿಕ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ಸೌಜನ್ಯಕಾದ್ರೂ ನಿರ್ವಾಹಕನಾಗಲಿ,ಡಿಪೋ ವ್ಯವಸ್ಥಾಪಕರು ಬಂದಿಲ್ಲ ಎಂದು ಆರೋಪಿಸಿ ಬಸ್‌ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

Advertisement

ವಿಷಯತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಆನಂದ್‌, ಡಿಪೋ ವ್ಯವಸ್ಥಾಪಕ ತ್ಯಾಗರಾಜು ಕರೆದು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಶೀಘ್ರದಲ್ಲಿ ಬಸ್‌ ಸಮಸ್ಯೆ ಪರಿಹರಿಸುವುದರಜೊತೆಗೆ ವಿದ್ಯಾರ್ಥಿ ಸುಪ್ರಿತ್‌ ಆಸ್ಪತ್ರೆ ಸೇರಲು ಕಾರಣರಾದ ನಿರ್ವಾಹಕರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next