ವಂಡ್ಸೆ: ವಂಡ್ಸೆ ಸಮೀಪದ ಆತ್ರಾಡಿಯಲ್ಲಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಹಿ. ಪ್ರಾ. ಶಾಲಾ ಮಕ್ಕಳು ಮಂಗಳವಾರ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಬೇಸಾಯ ಪದ್ಧತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಈ ಅರಿವನ್ನು ಮಕ್ಕಳಲ್ಲಿ ಎಳವೆಯಲ್ಲಿಯೆ ಮೂಡಿಸಬೇಕು. ಕೃಷಿಯನ್ನು ಪ್ರೀತಿಸಿ, ಆ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯವನ್ನು ಆಯೋಜಿಸಲಾಗಿತ್ತು.
ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.
ಶಾಲೆಯ 7-8ನೇ ತರಗತಿಯ, ಸ್ಕೌಟ್‌ನ ಸುಮಾರು 60 ಮಂದಿ ಸೇರಿ, 28 ಮಂದಿ ನಾಟಿ ನಿರತ ಮಹಿಳೆಯರ ಜತೆ ಮಕ್ಕಳು ಗದ್ದೆಗಳಿದು ನೇಜಿ ನೆಟ್ಟು ಖುಷಿಪಟ್ಟರು.
ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಶೆಟ್ಟಿ, ಸ್ಕೌಟ್ ಶಿಕ್ಷಕ ವಿಶ್ವನಾಥ, ಶಿಕ್ಷಕಿ ಭಾರತಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.