Advertisement

ಪ್ರಾಂಶುಪಾಲೆ ವರ್ತನೆ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

07:28 AM Feb 13, 2019 | Team Udayavani |

ಕನಕಪುರ: ವರ್ಗಾವಣೆಗೊಂಡಿರುವ ಪ್ರಾಂಶು ಪಾಲರನ್ನು ಮತ್ತೆ ಇಲ್ಲಿಗೆ ನಿಯೋಜಿಸಬೇಕು ಮತ್ತು ಈಗಿರುವವರು ಸರಿಯಾಗಿ ಊಟ ನೀಡುವುದಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿಗೆ ತೆರ ಳದೆ ತಮ್ಮ ಪೋಷಕರೊಂದಿಗೆ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬಾದಗೆರೆ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆಯಿತು.

Advertisement

ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದ ಎನ್‌.ಗೋವಿಂದರಾಜು ಬೇರೆಡೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ಕನ್ನಡ ಶಿಕ್ಷಕಿ ಆಶಾ ಅವರಿಗೆ ಈ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಆಶಾ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡ ದಿನದಿಂದ ಮಕ್ಕಳಿಗೆ ಸರಿಯಾದ ಆಹಾರ ನೀಡದೇ ಅವರನ್ನೇ ಗದರುತ್ತಿದ್ದರು. ಇದರಿಂದ ಬೇಸತ್ತ ಮಕ್ಕಳು ತಮ್ಮ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು.

ಮೂಗರ್ಜಿ: ಈ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸಿದ ಪ್ರಾಂಶುಪಾಲ ಎನ್‌.ಗೋವಿಂದರಾಜು ಮಕ್ಕಳಲ್ಲಿ ಒಳ್ಳೆಯ ನಡತೆ ಮತ್ತು ಶಿಸ್ತನ್ನು ಬೆಳೆಸಿ ಉತ್ತಮವಾಗಿ ಊಟ ನೀಡುತ್ತಿದ್ದರು. ವರ್ಷದ ಹಿಂದೆ ಇವರನ್ನು ವರ್ಗಾವಣೆ ಮಾಡಲಾಗಿತ್ತು. ನಂತರ ಈಗಿರುವ ಕನ್ನಡ ಶಿಕ್ಷಕಿ ಆಶಾ ಮೇಲಧಿ ಕಾರಿಗಳಿಗೆ ಮಕ್ಕಳ ಹೆಸರಲ್ಲಿ ವಾರಕ್ಕೆ ಮೂರು ಮೂಗರ್ಜಿ ಬರೆದು ಕಳುಹಿಸುತ್ತಿದ್ದರು.

ಇದರಿಂದ ಬೇಸತ್ತ ಗೋವಿಂದರಾಜು ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದರು. ಸರ್ಕಾರ ಮತ್ತೆ ಇವರನ್ನು ಇದೇ ಶಾಲೆಗೆ 2 ತಿಂಗಳ ನಂತರ ವರ್ಗಾವಣೆ ಮಾಡಿತ್ತು. ಈ ವರ್ಗಾ ವಣೆಯಾದ ಅವಧಿಯಲ್ಲಿ ಇದೇ ಆಶಾ ಪ್ರಾಂಶು ಪಾಲರಾಗಿ ಶಾಲೆ ಮೇಲ್ವಿಚಾರಕಿಯಾಗಿ ಸರಿಯಾದ ಆಹಾರ ನೀಡದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದರು.

ಪ್ರಾಂಶುಪಾಲೆ ಬೇಡ: ಇದರಿಂದ ಬೇಸತ್ತ ಪೋಷಕರು ಸಮಾಜ ಕಲ್ಯಾಣ ಸಚಿವರು ಮತ್ತು ಸಂಸದ ಡಿ.ಕೆ.ಸುರೇಶ್‌ ಅವರಿಗೆ ಮನವಿ ಸಲ್ಲಿಸಿ ಇಲ್ಲಿಗೆ ಮತ್ತೆ ಗೋವಿಂದ ರಾಜು ಅವರನ್ನು ವರ್ಗಾವಣೆ ಮಾಡಿಸಿದ್ದರು. ಇವರು ಬಂದ ಒಂದೂವರೆ ತಿಂಗಳಿನಲ್ಲಿ ಮತ್ತೆ ಮೇಲಧಿಕಾರಿಗಳಿಗೆ ಆಶಾ ಮೂಗರ್ಜಿಗಳನ್ನು ಬರೆ ಯಲು ಪ್ರಾರಂಭಿಸಿದರು. ಇದರಿಂದ ಬೇಸತ್ತ ಅಧಿ ಕಾರಿ ಗೋವಿಂದರಾಜು ಪದವಿ ಕಾಲೇಜಿನ ಪ್ರೊಫೆಸರ್‌ ಹುದ್ದೆ ಸಿಕ್ಕಿದ್ದರೂ ಮಕ್ಕಳಿಗಾಗಿ ಇಲ್ಲೇ ಇದ್ದು ಸೇವೆ ಸಲ್ಲಿಸಲು ಮನಸ್ಸು ಮಾಡಿದ್ದರು.

Advertisement

ಆದರೆ, ಇವರ ಚಿತ್ರಹಿಂಸೆ ತಾಳಲಾರದೇ ಅವರೇ ಇಲಾಖೆಗೆ ಪತ್ರ ಬರೆದು ವಾರದ ಹಿಂದೆ ಹೋಗಿದ್ದಾರೆ. ಪ್ರಾಂಶು ಪಾಲೆ ಆಶಾ ವರ್ತನೆಯಿಂದ ಬೇಸತ್ತ ಮಕ್ಕಳು ನಮಗೆ ಇವರು ಬೇಡ ಎಂದು ಹಠ ಹಿಡಿಯು ತ್ತಿರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿ ಗಳು ತಮ್ಮ ಶಾಲೆಯ ಎದುರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾಗರಾಜು ಭೇಟಿ ನೀಡಿ 15 ದಿನಗಳಲ್ಲಿ ನೂತನ ಪ್ರಾಂಶುಪಾಲರನ್ನು ನಿಯೋಜಿಸಲಾಗು ವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next