Advertisement

ರಾಜ್ಯದ 5, 8ನೇ ತರಗತಿ ಮಕ್ಕಳಿಗೆ ಅನುತ್ತೀರ್ಣ ಶಿಕ್ಷೆ ಇಲ್ಲ!

07:10 AM Aug 06, 2017 | Harsha Rao |

ಬೆಂಗಳೂರು: ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ 
ಗೊಳಿಸಬಹುದು ಎಂಬ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಜಾರಿಗೆ ತರದಿರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 2009ರ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಒಂದರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು
ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದೆ. ಈ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ
ಸರ್ಕಾರ ಜಾರಿ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿದೆ.

Advertisement

ಅನುತ್ತೀರ್ಣ ಮಾಡಿ ಮಕ್ಕಳನ್ನು ಅದೇ ತರಗತಿಯಲ್ಲಿ ಇನ್ನೊಮ್ಮೆ ಅದೇ ಪಠ್ಯಕ್ರಮವನ್ನು ಕಲಿಸುವುದರಿಂದ ಶೈಕ್ಷಣಿಕ ಪ್ರಗತಿ ಸಾಧ್ಯವಿಲ್ಲ ಎಂಬುದು ರಾಜ್ಯ ಸರ್ಕಾರದ ವಾದ. ಜೊತೆಗೆ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯವೂ ಅನುಸರಿಸಬೇಕು ಎಂಬುದು ಕಡ್ಡಾಯವಲ್ಲ. ಹಾಗಾಗಿ ರಾಜ್ಯ ಸರ್ಕಾರವು ಮಕ್ಕಳನ್ನು ಅನುತ್ತೀರ್ಣ ಮಾಡದೇ ಶೈಕ್ಷಣಿಕವಾಗಿ ಸುಧಾರಣೆ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ರಾಜ್ಯ ಸರ್ಕಾರವು ಮಕ್ಕಳಳಿಗೆ ಪರೀಕ್ಷೆ ನಡೆಸಿ, ಅವರ ಕಲಿಕೆಯ ಸಾಮರ್ಥ್ಯವನ್ನು ಮೌಲ್ಯಮಾ± ‌ನ ಮಾಡಲಿದೆ. ವಿಷಯಾಧಾರಿತವಾಗಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ನಿಗಾ ವಹಿಸಲಿದ್ದಾರೆ.

ಕೇಂದ್ರದ ನಿರ್ಧಾರ ಕುರಿತು ಪ್ರತ್ರಿಯಿಸಿರುವ ಶಿಕ್ಷಣ ತಜ್ಞ ಡಾ.ನಿರಂಜನ್‌ ಆರಾಧ್ಯ, ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಬೇಕೇ ಹೊರತು, ಕಲಿಯಲಿಲ್ಲ ಎಂದು ಅನುತ್ತೀರ್ಣ ಮಾಡುವುದು ಸಮಸ್ಯೆಗೆ ಪರಿಹಾರವಲ್ಲ. ಇದು ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿ. ಫೇಲ್‌ ಮಾಡುವುದರಿಂದ ಮಕ್ಕಳು ಜಿಗುಪ್ಸೆಗೊಂಡು ಅರ್ಧಕ್ಕೆ ಶಾಲೆ ಬಿಡಲಿದ್ದಾರೆ. ಫೇಲ್‌ ಮಾಡಿದರೆ ಶೈಕ್ಷಣಿಕ ಉನ್ನತಿ ಯಾಗುತ್ತದೆ ಎಂಬುದು ಯಾವ ಸಂಶೋಧನೆಯೂ ದೃಢಪಡಿಸಿಲ್ಲ ಎಂದು ಹೇಳಿದ್ದಾರೆ. ಫೇಲ್‌ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ
ವಿದ್ಯಾಭ್ಯಾಸಕ್ಕೂ ಮಾರಕವಾಗಲಿದೆ. ಆರ್‌ಟಿಇ ನಿಯಮದಂತೆ ಶಿಕ್ಷಕರ ನೇಮಕ ಮಾಡಿಕೊಂಡು, ಸೂಕ್ತ ರೀತಿಯಲ್ಲಿ ಸೌಲಭ್ಯ ಒದಗಿಸಿದಾಗ ಮಾತ್ರ ಶೈಕ್ಷಣಿಕ ಉನ್ನತಿ ಸಾಧ್ಯ. ಕೇಂದ್ರ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದರೆ, ಅವರಾಗಿ ಅವರೇ ಆತ್ಮಹತ್ಯೆ ಮಾಡಿ ಕೊಂಡಂತಾಗುತ್ತದೆ. ಸಿಎಂ ಸಿದ್ದರಾ ಮಯ್ಯ ಹಾಗೂ ಶಿಕ್ಷಣ
ಸಚಿವ ತನ್ವೀರ್‌ ಸೇs… ಇದನ್ನು ಪ್ರಬಲವಾಗಿ ವಿರೋಧಿ ಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದೀರ್ಘ‌ ಚರ್ಚೆ ಬಳಿಕವೇ ನಿಯಮ: ಆರ್‌ಟಿಇ ಕಾಯ್ದೆ ರಚನೆ ಸಂದರ್ಭದಲ್ಲಿ ಮಕ್ಕಳನ್ನು ಅನುತ್ತೀರ್ಣ ಮಾಡಬೇಕೋ, ಬೇಡೋವೋ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದು ಅಂತಿಮವಾಗಿ ಮಕ್ಕಳನ್ನು ಅನುತ್ತೀರ್ಣಗೊಳಿಸದಂತೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದವು. ಕೆಲವೊಂದು ರಾಜ್ಯಗಳು ವಿರೋಧಿಸಿದ್ದವಾದರೂ, ಅಲ್ಲಿನ ಪ್ರಾದೇಶಿಕತೆಗೆ ತಕ್ಕಂತೆ ಆರ್‌ಟಿಇ ಅನುಷ್ಠಾನ ಮಾಡಿದ ನಂತರ ನೋ-ಡಿಟೆನÒನ್‌ ಪಾಲಿಸಿಯನ್ನು ಅಳವಡಿಸಿಕೊಂಡಿದ್ದವು.

Advertisement

ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಕೆ. ಬಸವರಾಜು ಮಾತನಾಡಿ, ನೋ-ಡಿಟೆನÒನ್‌ ಪಾಲಿಸಿಯನ್ನು ರದ್ದು ಮಾಡುವ ಸಂಬಂಧ ಕೇಂದ್ರ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ
ಸೂಚನೆ ಬಂದಿಲ್ಲ. ರಾಜ್ಯ ಸರ್ಕಾರ ಯಾವ ನಿಯಮವನ್ನು ರೂಪಿಸಿ ನಮಗೆ ನೀಡುತ್ತದೋ ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next