Advertisement

Dandeli: ವಿದ್ಯಾರ್ಥಿನಿಯರು ಸಾಮೂಹಿಕವಾಗಿ ಕೈಗೆ ಬರೆ ಎಳೆದುಕೊಂಡ ಪ್ರಕರಣ; ಪೊಲೀಸ್‌ ವಿಚಾರಣೆ

03:15 PM Sep 17, 2023 | Team Udayavani |

ದಾಂಡೇಲಿ: ನಗರದ ಜನತಾ ಪ್ರೌಢಶಾಲೆಯ 9ನೇ ತರಗತಿಯ ಕೆಲ ವಿದ್ಯಾರ್ಥಿನಿಯರು ಕೈಗೆ ಬರೆ ಎಳೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿಎಸ್ಐ ಐ.ಆರ್. ಗಡ್ಡೇಕರ್ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಅವರು ಜನತಾ ವಿದ್ಯಾಲಯ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಪರಿಶೀಲನೆ ನಡೆಸುವ ಮುನ್ನ ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಯಿನಿ ಭಾರತಿ ಗೌಡ ಅವರಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಿದರು.

ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಕೇಳಿದ ಅವರು ಈ ಬಗ್ಗೆ ಶಾಲಾ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಆನಂತರ ಮಹಿಳಾ ಪೊಲೀಸ್ ಸಿಬ್ಬಂದಿಗಳಿಂದ ಕೈಗೆ ಬರೆ ಹಾಕಿಸಿಕೊಂಡ ವಿದ್ಯಾರ್ಥಿನಿಯರಲ್ಲಿ ವಿಚಾರಣೆ ನಡೆಸಿ ಯಾಕೆ, ಹೇಗೆ, ಏನು ಕೇಳಲಾಗಿದ್ದರೂ, ವಿದ್ಯಾರ್ಥಿನಿಯರು ಮನೆಯಲ್ಲಿ ಕೆಲಸ ಮಾಡುವಾಗ, ಬೆಕ್ಕಿನ ಉಗುರು ಪರಚಿರುವುದು, ಗುಲಾಬಿ ಹೂವನ್ನು ಕೊಯ್ಯಲು ಹೋಗುವಾಗ ಗಿಡದ ಮುಳ್ಳು ತಾಗಿರುವುದು ಹೀಗೆ ವಿವಿಧ ಕಾರಣಗಳನ್ನು ಮಹಿಳಾ ಪೊಲೀಸರಿಗೆ ನೀಡಿದ್ದರೆನ್ನಲಾಗಿದೆ.

ಮೂಲಗಳ ಮಾಹಿತಿಯ ಪ್ರಕಾರ ಇದೊಂದು ವಿಚಿತ್ರ ರೀತಿಯ ಆಟವಾಗಿದ್ದು, ತಮಗೆ ತಾವೆ ಹಿಂಸಿಸಿಕೊಂಡು ಸಂತಸ ಪಡುವುದೇ ಈ ಆಟದ ಉದ್ದೇಶ ಇರಬಹುದಾಗಿದೆ.

Advertisement

ಮಾಹಿತಿ ಪ್ರಕಾರ ಜನತಾ ವಿದ್ಯಾಲಯ ಪ್ರೌಢಶಾಲೆಯ ಒಟ್ಟು 14 ವಿದ್ಯಾರ್ಥಿಗಳು ಕೈಗೆ ಬರೆ ಎಳೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಿದ್ದು, ಪೊಲೀಸ್ ಇಲಾಖೆ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ.

ಪಿಎಸ್ಐ ಐ.ಆರ್.ಗಡ್ಡೇಕರ್ ಹಾಗೂ ಮಕ್ಕಳ ಪಾಲಕರು ಮತ್ತು ಮುಖ್ಯ ಶಿಕ್ಷಕಿ ಭಾರತಿ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಡಿವೈಎಫ್ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಸ್ಯಾಮಸನ್, ಪತ್ರಕರ್ತ ಸಂದೇಶ್.ಎಸ್.ಜೈನ್ ಶಾಲೆಯಲ್ಲಿ ನಡೆಯುತ್ತಿರುವ ಕೆಲ ವಿದ್ಯಾಮಾನಗಳ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಆನಂತರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next