Advertisement

ವಿದ್ಯಾರ್ಥಿಗಳಿಗೆ ಬ್ಯಾಂಕ್‌ ವ್ಯವಹಾರ ತಿಳಿವಳಿಕೆ ಅವಶ್ಯ

11:23 AM May 19, 2019 | Team Udayavani |

ತೇರದಾಳ: ರಾಷ್ಟ್ರದ ಆರ್ಥಿಕತೆ ಜ್ಞಾನ ಹೊಂದಿರಬೇಕು. ಜೊತೆಗೆ ಬ್ಯಾಂಕಿನ ವ್ಯವಹಾರಗಳ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ದೊರಕುವಂತೆ ಪಾಲಕರು ಹಾಗೂ ಶಿಕ್ಷಕರು ನೋಡಿಕೊಳ್ಳಬೇಕು ಎಂದು ಐಸಿಐಸಿಐ ಬ್ಯಾಂಕಿನ ಸ್ಥಳಿಯ ಶಾಖಾಧಿಕಾರಿ ತವನ್‌ ಲೋಕಣ್ಣವರ ಹೇಳಿದರು.

Advertisement

ನಗರದ ಡಾ| ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್ನಲ್ಲಿ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್‌ ವ್ಯವಹಾರ ತಿಳಿವಳಿಕೆ ಕುರಿತು ವಿಶೇಷ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗಳಿಕೆಗಿಂತ ಉಳಿತಾಯ ಪ್ರಮುಖವಾಗಿದೆ. ಉಳಿತಾಯಕ್ಕೂ ಆದ್ಯತೆ ಕೊಡಬೇಕು. ಚೆಕ್‌ನಲ್ಲಿ ಇರುವ ನಮೂನೆಗಳ ಕುರಿತು, ಡಿಡಿ ವ್ಯವಸ್ಥೆ, ಖಾತೆಗಳ ಬಗ್ಗೆ, ಹಣ ಪಡೆದುಕೊಳ್ಳುವುದು, ಜಮೆ ಮಾಡುವುದು, ಆರ್‌ಟಿಜಿಎಸ್‌, ಎನ್‌ಇಎಫ್‌ಟಿ ಸೇರಿದಂತೆ ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಇರುವ ಸೌಲಭ್ಯಗಳ ಕುರಿತು Óಮಾಹಿತಿ ನೀಡಿದರು. ಪ್ರಾಚಾರ್ಯ ನಾಗರತ್ನ ಜೋಶಿ, ಮಹಾಲಿಂಗಯ್ಯ ಕರಡಿ, ನಾಹೀದಾ ಜಾಗೀರದಾರ, ರೇಖಾ ಡೊಳ್ಳೊಳಿ, ವಾಸುದೇವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next